ರೈತ ಮುಖಂಡ ರಾಕೇಶ್ ಟಿಕಾಯತ್ಗೆ ಮಸಿ ಬಳಿದಿದ್ದ ಭರತ್ ಶೆಟ್ಟಿಗೆ ಬೆದರಿಕೆ ಸಂದೇಶ
ಒಸಾಮಾ ಶಾ ಹೆಸರಿನ ಫೇಸ್‌ಬುಕ್ ಖಾತೆ ಹಾಗೂ ವಾಟ್ಸ್ಯಾಪ್ ಮೂಲಕ `ಮಸಿ ಬಳಿದು ಅವಮಾನಿಸಿದಕ್ಕೆ ತಿರುಗೇಟು ನೀಡುತ್ತೇವೆ. ನಿನ್ನ ಸಮಯ ಶುರುವಾಗಿದೆ` ಎಂದು ಬೆದರಿಕೆ ಸಂದೇಶಗಳು ಬರುತ್ತಿವೆ ಎಂದಿರುವ ಭರತ್ ಶೆಟ್ಟಿ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು : ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಗೆ ಮಸಿ ಬಳಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳವುದಾಗಿ ಸಂದೇಶಗಳು ಬರುತ್ತಿವೆ ಎಂದು ಪ್ರಕರಣದಲ್ಲಿ ಬಂಧನವಾಗಿದ್ದ ಆರೋಪಿ ಭರತ್ ಶೆಟ್ಟಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.
ಒಸಾಮಾ ಶಾ ಹೆಸರಿನ ಫೇಸ್‌ಬುಕ್ ಖಾತೆ ಹಾಗೂ ವಾಟ್ಸ್ಯಾಪ್ ಮೂಲಕ 'ಮಸಿ ಬಳಿದು ಅವಮಾನಿಸಿದ್ದಕ್ಕೆ ತಿರುಗೇಟು ನೀಡುತ್ತೇವೆ. ನಿನ್ನ ಸಮಯ ಶುರುವಾಗಿದೆ' ಎಂದು ಬೆದರಿಕೆ ಸಂದೇಶಗಳು ಬರುತ್ತಿವೆ ಎಂದಿರುವ ಭರತ್ ಶೆಟ್ಟಿ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ- Crime News: ಹಾಡಿನ ಸೌಂಡ್ ಕಡಿಮೆ ಮಾಡಿ ಎಂದಿದಷ್ಟೆ, ನಡೆದೇ ಹೋಯ್ತು ಒಂದು ಕೊಲೆ !
ಕಳೆದ ವರ್ಷ ಮೇ 30ರಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರಿನ ಗಾಂಧಿಭವನದಲ್ಲಿ ರೈತ ಚಳವಳಿ-ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆಯಲ್ಲಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯಿತ್ ಭಾಗಿಯಾಗಿದ್ದರು.
ಇದನ್ನೂ ಓದಿ- ಇದು ಚಿನ್ನ ಕದ್ದು ಗುಜರಿಗೆ ಹಾಕಿದ ಕಳ್ಳನ ಕಥೆ: ಇನ್ಟ್ರಸ್ಟಿಂಗ್ ಇದೆ ಓದಿ..!
ಸಭೆಯಲ್ಲಿ ಟಿಕಾಯತ್ ಮೇಲೆ ಮಸಿ ಎರಚಲಾಗಿತ್ತು. ಪ್ರಕರಣ ಸಂಬಂಧ ಭರತ್ ಶೆಟ್ಟಿ ಸಹಿತ ನಾಲ್ವರನ್ನ ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದರು. ಸದ್ಯ ಬಿಜೆಪಿಯಲ್ಲಿ ಭರತ್ ಶೆಟ್ಟಿ ಗುರುತಿಸಿಕೊಂಡಿದ್ದು, ಚುನಾವಣೆ ಸಂದರ್ಭದಲ್ಲಿ ಬೆದರಿಕೆ ಸಂದೇಶ ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.