Crime News: ಹಾಡಿನ ಸೌಂಡ್ ಕಡಿಮೆ ಮಾಡಿ ಎಂದಿದಷ್ಟೆ, ನಡೆದೇ ಹೋಯ್ತು ಒಂದು ಕೊಲೆ !

Crime News: ಪಕ್ಕದ ಮನೆಯಲ್ಲಿ ವಾಸವಿದ್ದ ಟೆಕ್ಕಿಗಳು ಹಾಡಿನ ಸೌಂಡ್‌ ಜೋರು ಇಟ್ಟು  ಪಾರ್ಟಿ ಮಾಡ್ತಿದ್ರು..  ಆ ವೇಳೆ ಸೌಂಡ್‌  ಕಡಿಮೆ ಮಾಡಿ ಮನೆಯಲ್ಲಿ ವಯಸ್ಸಾದವರು ಇದ್ದಾರೆ ಎಂದು ಹೇಳಿದ್ದ ಒಂದೇ ನೆನಪಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.

Written by - Zee Kannada News Desk | Last Updated : Apr 5, 2023, 01:52 PM IST
  • ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಗಲಾಟೆ
  • ಪಕ್ಕದ ಮನೆಯಲ್ಲಿ ವಾಸವಿದ್ದ ಟೆಕ್ಕಿಗಳಿಂದ ಕೊಲೆ
  • ಒಡಿಸ್ಸಾ ಮೂಲದ ಟೆಕ್ಕಿಗಳಿಂದ ಕೊಲೆ ನಡೆದಿರೋ ಶಂಕೆ
 Crime News: ಹಾಡಿನ ಸೌಂಡ್ ಕಡಿಮೆ ಮಾಡಿ ಎಂದಿದಷ್ಟೆ, ನಡೆದೇ ಹೋಯ್ತು ಒಂದು ಕೊಲೆ ! title=

ಬೆಂಗಳೂರು: ಪಕ್ಕದ ಮನೆಯಲ್ಲಿ ವಾಸವಿದ್ದ ಟೆಕ್ಕಿಗಳು ಹಾಡಿನ ಸೌಂಡ್‌ ಜೋರು ಇಟ್ಟು  ಪಾರ್ಟಿ ಮಾಡ್ತಿದ್ರು..  ಆ ವೇಳೆ ಸೌಂಡ್‌ ಕಡಿಮೆ ಮಾಡಿ ಮನೆಯಲ್ಲಿ ವಯಸ್ಸಾದವರು ಇದ್ದಾರೆ ಎಂದು ಹೇಳಿದ್ದ ಒಂದೇ ನೆನಪಕ್ಕೆ ವ್ಯಕ್ತಿಯನ್ನು  ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಇದನ್ನೂ ಓದಿ: Modi's visit to Bandipur: ಮೋದಿ ಬಂಡೀಪುರ ಭೇಟಿಗೆ ದಿನಗಣನೆ- ಬಂದೋಬಸ್ತ್ ಕೈಗೊಳ್ಳಲು ಎಡಿಜಿಪಿ ಅಲೋಕ್ ಎಂಟ್ರಿ

ಲಾಯಿಡ್ ನೇಮಯ್ಯ ಕೊಲೆಯಾದ ವ್ಯಕ್ತಿ.ಹೆಚ್ ಎ ಎಲ್ ಬಳಿಯ  ವಿಜ್ಞಾನ ನಗರದಲ್ಲಿ ಘಟನೆ ನಡೆದಿದೆ. ಪಕ್ಕದ ಮನೆಯಲ್ಲಿ ವಾಸವಿದ್ದ ಒಡಿಸ್ಸಾ ಮೂಲದ ಟೆಕ್ಕಿಗಳು  ಹಾಡಿನ ಸೌಂಡ್‌ ಜೋರು ಇಟ್ಟು ಪಾರ್ಟಿ ಮಾಡ್ತಿದ್ರು..  ಆವೇಳೆ ಹಾಡಿನ ಸೌಂಡ್‌  ಕಡಿಮೆ ಮಾಡಿ ಎಂದಿಕ್ಕೆ ರೂಮಿನಿಂದ ಕೆಳಗೆ ಬಂದು ನೇಮಯ್ಯ ಎಂಬ ವ್ಯಕ್ತಿಯನ್ನು ಟೆಕ್ಕಿಗಳು ಬಂದು  ಹೊಡೆದಿದ್ದಾರೆ. 

ಇದನ್ನೂ ಓದಿ: Karnataka Assembly Election 2023:  ಚುನಾವಣೆ ಹೊತ್ತಲ್ಲಿ ಎಲ್ಲೆಂದರಲ್ಲಿ ಸದ್ದು ಮಾಡುತ್ತಿದೆ  ಝಣ ಝಣ ಕಾಂಚಾಣ 

ಟೆಕ್ಕಿಗಳ ಒಂದು ಕ್ಷಣದ ಹುಚ್ಚು ತನಕ್ಕೆ ಅಮಾಯಕನ ಜೀವವೇ ಹಾರಿ ಹೋಗುವಂತಾಯಿತು. ಗಲಾಟೆ ಬಳಿಕ ಲಾಯಿಡ್ ನೇಮಯ್ಯನನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಪ್ರಾಣ ಪಕ್ಷಿ ಹಾರಿಹೋಗಿದೆ. ಸದ್ಯ ಕೊಲೆ ಕೇಸ್  ದಾಖಲು ಮಾಡಿಕೊಂಡಿರುವ ಪೋಲಿಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ. 

ಇದನ್ನೂ ಓದಿ: ಡಾಂಬಾರು ಹಾಕಿದ ಎರಡೇ ದಿನಕ್ಕೆ ಕಿತ್ತು ಬಂದ ರಸ್ತೆ!!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

 

Trending News