ಮುಂಬೈ: ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಮುಂಬೈನ ದಹಿಸರ್ ಮೂಲದ ಮಹಿಳೆಯೊಬ್ಬರ ಪುತ್ರನಿಂದ 6.5 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ 24 ವರ್ಷದ ಯುವಕ ಮತ್ತು ಆತನ ಇಬ್ಬರು ಸ್ನೇಹಿತರನ್ನು ಬಂಧಿಸಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿ, ಬಳಿಕ ಆತನಿಂದ 6.5 ಕೋಟಿ ರೂ. ಸುಲಿಗೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಮೂವರು ಆರೋಪಿಗಳು 23ರ ಹರೆಯದ ಯುವಕನೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸಿದ್ದು, ಕೃತ್ಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೀಂ ಇಂಡಿಯಾ ಗೆಲುವಿನೊಂದಿಗೆ ಕ್ರಿಕೆಟ್‌ ಕರಿಯರ್‌ ಕಾಪಾಡಿಕೊಂಡ ಈ ಆಟಗಾರ!


ಬಂಧಿತರನ್ನು ಯಶ್ ಚಲ್ಕೆ (24), ಶ್ರುತಿಕ್ ಸೋನಾವಾನೆ (20) ಮತ್ತು ಪ್ರಥಮೇಶ್ ಶಿಂಧೆ (20) ಎಂದು ಗುರುತಿಸಲಾಗಿದೆ. ಎಲ್ಲಾ ಆರೋಪಿಗಳು ಪಶ್ಚಿಮ ಉಪನಗರದ ನಿವಾಸಿಗಳು ಎಂದು ಕ್ರೈಂ ಬ್ರ್ಯಾಂಚ್ ಘಟಕ ತಿಳಿಸಿದೆ. ಇನ್ನು ಇದಕ್ಕೂ ಮೊದಲು 2018 ರಲ್ಲಿ ಚಲ್ಕೆಯನ್ನು ಮಾದಕವಸ್ತು ಸೇವನೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ನಂತರ ಜಾಮೀನು ಮೂಲಕ ಹೊರಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಯಶ್‌ ಚಲ್ಕೆಗೆ ಎನ್‌ಆರ್‌ಐ ಮಹಿಳೆಯ ಮಗ ಕೋಚಿಂಗ್ ಕ್ಲಾಸ್‌ನಲ್ಲಿ ಪರಿಚಯವಾಗಿದ್ದ. ಈಗ ಭಾರತದಲ್ಲಿರುವ ಎನ್‌ಆರ್‌ಐ ಮಹಿಳೆ ನೀಡಿದ ಪೊಲೀಸ್ ದೂರಿನ ಪ್ರಕಾರ, ಚಲ್ಕೆ ಮತ್ತು ಆತನ ಇಬ್ಬರು ಸ್ನೇಹಿತರು ಪೊಲೀಸರು ಬಂಧಿಸಿದ್ದಾರೆ. 


ಸ್ಥಳೀಯ ರಾಜಕಾರಣಿಗಳ ಕೈವಾಡ ಶಂಕೆ: 
ಚಲ್ಕೆ, ಅನಿವಾಸಿ ಭಾರತೀಯ ಮಹಿಳೆಯ ಕುಟುಂಬದ ಮನೆಗೆ ಕೆಲವು ಸ್ಥಳೀಯ ರಾಜಕಾರಣಿಗಳನ್ನು ಕರೆತಂದು ಬಳಿಕ ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಆ ಸ್ಥಳೀಯ ರಾಜಕಾರಣಿಗಳನ್ನು ಕರೆಸಿ ಹೇಳಿಕೆ ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.


ಹಂತ ಹಂತವಾಗಿ ಹಣ ಕೊಡುತ್ತಿದ್ದದ್ದನ್ನು ನಿಲ್ಲಿಸಿದ್ದರಿಂದ ಮೂವರು ಆರೋಪಿಗಳು ಮಹಿಳೆಯ ಮಗನನ್ನು ಸ್ನೇಹಿತನೊಬ್ಬನ ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆತನ ಮೇಲೆ ಅಸ್ವಾಭಾವಿಕ ಸಂಭೋಗ ನಡೆಸಿದ್ದು, ಆ ಕೃತ್ಯವನ್ನು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಚಲ್ಕೆ ಮೊದಲ ಬಾರಿ ಬಂಧನವಾಗಿದ್ದ ಸಂದರ್ಭದಲ್ಲಿ ಜಾಮೀನು ಪಡೆಯಲು ಎನ್‌ಆರ್‌ಐ ಮಹಿಳೆಯ ಕುಟುಂಬದಿಂದ 7,000 ರೂ ಸಾಲವನ್ನು ಪಡೆದಿದ್ದನಂತೆ. ಆದರೆ ಅದನ್ನು ಮರುಪಾವತಿಸಲು ವಿಫಲನಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ‘ಪದವಿಪೂರ್ವ’ದ ಮೂಲಕ ‘ಫ್ರೆಂಡ್ಸ್ ಇದ್ರೇನೆ ಜೀವನ’ ಎನ್ನುತ್ತಿದ್ದಾರೆ ಯೋಗರಾಜ್ ಭಟ್!


ಪ್ರಕರಣದ ದೂರುದಾರರಾಗಿರುವ ಎನ್‌ಆರ್‌ಐ ಮಹಿಳೆ ಇತ್ತೀಚೆಗೆ ಮುಂಬೈಗೆ ಬಂದಿದ್ದು, ಆರೋಪಿಗಳು ತನಗೆ ಕರೆ ಮಾಡಿ 62 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಹಣ ನೀಡಲು ನಿರಾಕರಿಸಿದಾಗ ಆರೋಪಿಗಳು ಮಹಿಳೆಯನ್ನು ಹಿಂಬಾಲಿಸಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ಅಪರಿಚಿತ ಫೋನ್ ಸಂಖ್ಯೆಗಳಿಂದ ಕರೆ ಮಾಡಲು ಪ್ರಾರಂಭಿಸಿ ಹಿಂಸೆ ನೀಡಲು ಪ್ರಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.