‘ಪದವಿಪೂರ್ವ’ದ ಮೂಲಕ ‘ಫ್ರೆಂಡ್ಸ್ ಇದ್ರೇನೆ ಜೀವನ’ ಎನ್ನುತ್ತಿದ್ದಾರೆ ಯೋಗರಾಜ್ ಭಟ್!

ಸೋಶಿಯಲ್ ಮೀಡಿಯಾ ಬರುವುದಕ್ಕೆ ಮುಂಚಿನ ಸ್ನೇಹವನ್ನು ನಮ್ಮ ಚಿತ್ರದಲ್ಲಿ ನೋಡಬಹುದು. ಚಿತ್ರೀಕರಣ ಬಹುತೇಕ ಮುಗಿದಿದ್ದು, ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಎಂದು ನಿರ್ದೇಶಕ ಹರಿಪ್ರಸಾದ್ ಹೇಳಿದ್ದಾರೆ.

Written by - YASHODHA POOJARI | Edited by - Puttaraj K Alur | Last Updated : Aug 7, 2022, 01:05 PM IST
  • Friendship Dayಗೆ ‘ಪದವಿಪೂರ್ವ’ ಚಿತ್ರತಂಡದಿಂದ ಉಡುಗೊರೆ
  • ಯೋಗರಾಜ್ ಭಟ್ ಬರೆದಿರುವ ‘ಫ್ರೆಂಡ್ಸ್ ಇದ್ರೇನೆ ಜೀವನ’ ಹಾಡು ಬಿಡುಗಡೆ
  • ಶೂಟಿಂಗ್ ಕಂಪ್ಲೀಟ್ ಆಗಿರವ ‘ಪದವಿಪೂರ್ವ’ ಅಕ್ಟೋಬರ್‌ನಲ್ಲಿ ತೆರೆಗೆ
‘ಪದವಿಪೂರ್ವ’ದ ಮೂಲಕ ‘ಫ್ರೆಂಡ್ಸ್ ಇದ್ರೇನೆ ಜೀವನ’ ಎನ್ನುತ್ತಿದ್ದಾರೆ ಯೋಗರಾಜ್ ಭಟ್! title=
‘ಫ್ರೆಂಡ್ಸ್ ಇದ್ರೇನೆ ಜೀವನ’ ಹಾಡು ಬಿಡುಗಡೆ

ಬೆಂಗಳೂರು: ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲಂಸ್‌ ಜಂಟಿಯಾಗಿ ನಿರ್ಮಿಸುತ್ತಿರುವ, ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ‘ಪದವಿಪೂರ್ವ’ ಚಿತ್ರಕ್ಕಾಗಿ ಯೋಗರಾಜ್ ಭಟ್ ‘ಫ್ರೆಂಡ್ಸ್ ಇದ್ರೇನೆ ಜೀವನ’ ಎಂಬ ಸ್ನೇಹದ ಮಹತ್ವ ಸಾರುವ ಅದ್ಭುತ ಹಾಡೊಂದನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಫ್ರೆಂಡ್ ಶಿಪ್ ಡೇಗೆ ‘ಪದವಿಪೂರ್ವ’ ಚಿತ್ರತಂಡ ನೀಡಿರುವ ಉಡುಗೊರೆ ಈ ಹಾಡು ಎಂದರೆ ತಪ್ಪಾಗಲಾರದು. ಅಷ್ಟು ಸುಮಧುರವಾಗಿದೆ ಈ ಗೀತೆ.

‘ತಂದೆ-ತಾಯಿ ಬಳಿ ಹೇಳಿಕೊಳ್ಳಲಾಗದ ಅನೇಕ ವಿಷಯಗಳನ್ನು ಸ್ನೇಹಿತರ ಬಳಿ ಹೇಳಿಕೊಳ್ಳುತ್ತೇವೆ. ಹಾಗಾಗಿ ನನ್ನ ಪ್ರಕಾರ ಸ್ನೇಹ ಸಂಬಂಧ ಎನ್ನುವುದು ಬಹಳ ದೊಡ್ಡದು. ಈ ಚಿತ್ರಕ್ಕೆ ‘ಫ್ರೆಂಡ್ಸ್ ಇದ್ರೇನೆ ಜೀವನ’ ಎನ್ನುವ ಗೀತೆ ಬರೆದಿದ್ದೇನೆ. ನನ್ನ ಎಲ್ಲಾ ಸ್ನೇಹಿತರಿಗೆ ಈ ಹಾಡನ್ನು ಅರ್ಪಿಸುತ್ತೇನೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಧ್ವನಿಯಲ್ಲಿ ಕೇಳುವುದೇ ಖುಷಿ. ನಿರ್ದೇಶಕ ಹರಿಪ್ರಸಾದ್ ಸೇರಿದಂತೆ ನನ್ನ ಸಹೃದಯಿ ಸ್ನೇಹಿತರ ತಂಡ ಈ ಚಿತ್ರದಲ್ಲಿ ಭಾಗಿಯಾಗಿದೆ. ಎಲ್ಲರಿಗೂ ಶುಭವಾಗಲಿ’ ಎಂದು ಯೋಗರಾಜ್ ಭಟ್ ಶುಭ ಹಾರೈಸಿದರು.

ಇದನ್ನೂ ಓದಿ: BBK OTT : ಭಿಕ್ಷೆ ಬೇಡುತ್ತಿದ್ದ ಇವರು ಈಗ ಬಿಗ್​ ಬಾಸ್ ಸ್ಪರ್ಧಿ.. ಕಣ್ಣೀರು ತರಿಸುತ್ತೆ ಈ ಕಲಾವಿದನ ಕಥೆ!

‘ಯೋಗರಾಜ್ ಸರ್ ಬಳಿ ನಾನು ಕೆಲಸ ಮಾಡುತ್ತಿದ್ದಾಗ, ಅವರು ನನ್ನನ್ನು ಪರಿಚಯ ಮಾಡುವಾಗ ಒಂದು ದಿನ ಕೂಡ ಅಸಿಸ್ಟೆಂಟ್ ಎನುತ್ತಿರಲಿಲ್ಲ. ನನ್ನ ಗೆಳೆಯ ಎಂದು ಪರಿಚಯಿಸುತ್ತಿದ್ದರು. ಸ್ನೇಹದ ತಳಹದಿ ಮೇಲೆ, ಅನೇಕ ಸ್ನೇಹಿತರ ಪಾಲ್ಗೊಳ್ಳುವಿಕೆಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಉತ್ತಮ ಹಾಡನ್ನು ಯೋಗರಾಜ್ ಸರ್ ಬರೆದುಕೊಟ್ಟಿರುವುದಕ್ಕೆ ಧನ್ಯವಾದ. ಇನ್ನು ‘ಪದವಿ ಪೂರ್ವ’ 1995-96ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಸೋಶಿಯಲ್ ಮೀಡಿಯಾ ಬರುವುದಕ್ಕೆ ಮುಂಚಿನ ಸ್ನೇಹವನ್ನು ನಮ್ಮ ಚಿತ್ರದಲ್ಲಿ ನೋಡಬಹುದು. ಚಿತ್ರೀಕರಣ ಬಹುತೇಕ ಮುಗಿದಿದ್ದು, ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ’ ಎಂದು ನಿರ್ದೇಶಕ ಹರಿಪ್ರಸಾದ್ ಹೇಳಿದರು.

ನಾವು ಮಕ್ಕಳಿಗೆ ಇಂತಹದ್ದೇ ಮಾಡು ಎನ್ನುವುದಕ್ಕಿಂತ ಅವರಿಗೆ ಇಷ್ಟವಿರುವ ಕಡೆ ಮುಂದುವರೆಯಲು ಬಿಡಬೇಕು. ನನ್ನ ಮಗ ನಾಯಕನಾಗುತ್ತೀನಿ ಅಂದ. ನಾನು ಸರಿ ಎಂದೆ. ನಾನೇ ನಿರ್ಮಾಪಕನೂ ಆದೆ ಎಂದು ಇದೇ ವೇಳೆ ನಿರ್ಮಾಪಕ ರವಿ ಶಾಮನೂರು ತಿಳಿಸಿದರು. ಕಲಾವಿದನಾಗಬೇಕು.. ಅದರಲ್ಲೂ ನಾಯಕನಾಗಬೇಕೆಂಬ ಕನಸು ಹೊತ್ತು ಬಂದವನು ನಾನು. ಮೊದಲ ಚಿತ್ರದಲ್ಲೇ ಇಂತಹ ಉತ್ತಮ ತಂಡ ಸಿಕ್ಕಿರುವುದು ನನ್ನ ಪುಣ್ಯ. ‘ಪದವಿ ಪೂರ್ವ’ ದಲ್ಲಿ ಪಿಯುಸಿ ಹುಡುಗನಾಗಿ ಕಾಣಿಸಿಕೊಂಡಿದ್ದೀನಿ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಚಿತ್ರದ  ನಾಯಕ ಪೃಥ್ವಿ ಶಾಮನೂರು ಖುಷಿ ಹಂಚಿಕೊಂಡರು.

ಇದನ್ನೂ ಓದಿ: Bigg Boss OTT: ‘ಬಿಗ್ ಬಾಸ್’ ಮನೆಗೆ ಕಾಲಿಟ್ಟ ಸೋನು ಶ್ರೀನಿವಾಸ್ ಗೌಡ ‘ಕಿಚ್ಚ’ನಿಗೆ ಹೇಳಿದ್ದೇನು?

ಛಾಯಾಗ್ರಹಕರ ಸಂತೋಷ್ ರೈ ಪಾತಾಜೆ, ಸಂಕಲನಕಾರ ಮಧು, ಕಾಸ್ಟಿಂಗ್ ಡೈರೆಕ್ಟರ್ ಯೋಗಿ, ನಟ ನಟರಾಜ್ ಹಾಗೂ  ನೃತ್ಯ ನಿರ್ದೇಶಕ ಧನು "ಪದವಿಪೂರ್ವ" ಚಿತ್ರದ ಬಗ್ಗೆ ಮಾತನಾಡಿದರು. "ಗರಡಿ" ಚಿತ್ರದ ನಾಯಕ ಯಶಸ್ ಸೂರ್ಯ ಹಾಗೂ ನಾಯಕಿ ಸೋನಾಲ್ ಮೊಂತೆರೊ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಪೃಥ್ವಿ ಶಾಮನೂರುಗೆ ಅಂಜಲಿ ಅನೀಶ್ ಹಾಗೂ ಯಶ ಶಿವಕುಮಾರ್ ನಾಯಕಿಯರಾಗಿದ್ದಾರೆ.  ‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News