ರಾಯಚೂರು: ಚರಂಡಿ ನಿರ್ಮಾಣಕ್ಕೆ ತೋಡಿದ್ದ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಬಲಿಯಾಗಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬ್ಯಾಗವಾಟದಲ್ಲಿ ಈ ದುರ್ಘಟನೆ ನಡೆದಿದೆ.  


COMMERCIAL BREAK
SCROLL TO CONTINUE READING

ಅಜಯ್(8) ಹಾಗೂ ಯಲ್ಲಾಲಿಂಗ (6) ಮೃತ ಬಾಲಕರು. ಬ್ಯಾಗವಾಟ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಬ್ಯಾಗವಾಟ ಪಂಚಾಯತಿಯಿಂದ ಅಗೆಯಲಾಗಿದ್ದ ಗುಂಡಿಯಲ್ಲಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಬಿಜೆಪಿ ಸಂಸದ ಮನವಿ


ಭಾನುವಾರ ಸಂಜೆ ಇಬ್ಬರು ಬಾಲಕರು ಆಟವಾಡುವ ವೇಳೆ ಗುಂಡಿಯೊಳಕ್ಕೆ ಬಿದ್ದು ಪ್ರಾಣಬಿಟ್ಟಿದ್ದಾರೆ. ಚರಂಡಿ ನಿರ್ಮಾಣ ಮಾಡಲು ಈ ಗುಂಡಿಗಳನ್ನು ತೋಡಲಾಗಿತ್ತು. 2-3 ತಿಂಗಳು ಕಳೆದರೂ ಈ ಗುಂಡಿಯನ್ನು ಮುಚ್ಚಿಸಿರಲಿಲ್ಲ. ಗುಂಡಿ ಮುಚ್ಚದ ಕಾರಣ ಚರಂಡಿಯಲ್ಲಿ ನೀರು ಸಂಗ್ರಹವಾಗಿತ್ತು. ಶಾಲೆಯ ಪಕ್ಕದಲ್ಲಿಯೇ ಈ ಗುಂಡಿ ಇದ್ದು, ಆಟವಾಡಲು ಹೋಗಿದ್ದ ಬಾಲಕರು ಅದೇ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.


ಎರಡು ಕರುಳಕುಡಿಗಳ ಕಳೆದುಕೊಂಡ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ. ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯವೇ ಬಾಲಕರ ಸಾವಿಗೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: "ಬಾಕಿ ಸಾಲ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಮನ್ನಾಮಾಡ್ತಿನಿ"


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.