ಬೆಂಗಳೂರು: ಅವ್ರು ಬಿಜೆಪಿ ಪಕ್ಷದಿಂದ ಆಯ್ಕೆಯಾದ ಸಂಸದ. ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸುವಂತೆ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಸಂಸದ ಮಾತು ಕಲ್ಪತರು ನಾಡಿನಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಕಮಲ ಪಾಳಯಕ್ಕೆ ಮುಜುಗರ ತಂದೊಡ್ಡಿದೆ. ಸಂಸದರ ಮಾತಿನ ಮರ್ಮ ಏನು ಅಂತಿರಾ ಇಲ್ಲಿದೆ ಅದರ ಡಿಟೈಲ್ಸ್....
ಇದನ್ನೂ ಓದಿ : Ind Vs SL : ಇಶಾನ್ ಕಿಶನ್ ಮೇಲೆ ಮುನಿಸಿಕೊಂಡ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ!
2023 ರ ವಿಧಾನಸಭಾ ಚುನಾವಣೆಯ ಕಾವು ದಿನೇ ದಿನೇ ರಂಗೇರ ತೊಡಗಿದೆ. ತುಮಕೂರು ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ಮೂಲಕ ಜೆಡಿಎಸ್ ಶಕ್ತಿ ಪ್ರದರ್ಶಿಸಿದೆ. ಇನ್ನೊಂದೆಡೆ ಜನ ಸಂಕಲ್ಪಯಾತ್ರೆ ಮೂಲಕ ಬಿಜೆಪಿ ರಣಕಹಳೆ ಮೊಳಗಿಸಿದೆ. ಭಾರತ್ ಜೋಡೋ.. ಸಮಾವೇಶಗಳ ಮೂಲಕ ಕಾಂಗ್ರೆಸ್ ಟ್ರೆಂಡ್ ಸೆಟ್ ಮಾಡುತ್ತಿದೆ. ಈ ಮೂಲಕ ಮೂರು ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಜಿಲ್ಲೆಯಲ್ಲಿ ಪ್ರವಾಸ ಮುಗಿಸಿದ್ದಾರೆ. ಆದ್ರೆ ಜಿಲ್ಲಾ ಮಟ್ಟದ ನಾಯಕರು ಮಾತ್ರ ಮ್ಯಾಚ್ ಫಿಕ್ಸಿಂಗ್ ರಾಜಕೀಯ ಮೂಡ್ ನಿಂದ ಹೊರ ಬಂದಿಲ್ಲ. ತಮ್ಮ ತಮ್ಮಲ್ಲೇ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಚುನಾವಣೆ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ ಮಗ್ನರಾಗಿದ್ದಾರೆ. ತುಮಕೂರು ಲೋಕಸಭೆ ಸದಸ್ಯ ಜಿ.ಎಸ್ ಬಸವರಾಜು ಮಾತು ಜಿಲ್ಲೆಯಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯ ರಾಜಕಾರಣಿಗಳು ಋಣ ಸಂದಾಯದ ಸೊಲ್ಲೆತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಸಹಕಾರದ ಸ್ಮರಣೆ ಮುಂದುವರೆಸಿರುವ ಜಿ.ಎಸ್ ಬಸವರಾಜು ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ರಾಜಣ್ಣ ಪರವಾಗಿ ಬಹಿರಂಗವಾಗಿ ಮತಯಾಚಿಸಿದ್ದಾರೆ. ಈ ಮೂಲಕ ನಾವು ಕಾಂಗ್ರೆಸ್-ಬಿಜೆಪಿ ಪಕ್ಷದವರಾದ್ರೂ ಇಬ್ರ ನಡುವಿನ ದೋಸ್ತೀನೇ ಗ್ರೇಟ್ ಅನ್ನೋ ಸಂದೇಶ ರವಾನಿಸಿದ್ದಾರೆ.
ಇದನ್ನು ಓದಿ: 2A ಮೀಸಲಾತಿ ವಿಚಾರ: ಸರ್ಕಾರಕ್ಕೆ ಮತ್ತೆ ಗಡುವು ನೀಡಿದ ಜಯಮೃತ್ಯುಂಜಯ ಸ್ವಾಮೀಜಿ!
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಸುದ್ದೇಕುಂಟೆಯ ವೇಣುಗೋಪಾಲ್ ಸ್ವಾಮಿ ದೇವಸ್ಥಾನದ ವಿಶೇಷ ಪೂಜಾ ಕಾರ್ಯಕ್ರಮ ರಾಜಕೀಯ ಪ್ರಚಾರಕ್ಕೆ ವೇದಿಕೆಯಾಗಿತ್ತು. ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಿದ್ದರೂ ಸಹ, ಬಿಜೆಪಿ ಸಂಸದರೊಬ್ಬರು ಹೀಗೆ ಕಾಂಗ್ರೆಸ್ ಮುಖಂಡ ಪರ ನಿಲ್ಲಲ್ಲು ಕಾರಣ ಕೂಡ ಉಂಟು. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತುಮಕೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸ್ಪರ್ಧಿಸಿದ್ರು.., ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ದೇವೇಗೌಡರಿಗೆ ಬಿಜೆಪಿಯ ಎಂ.ಪಿ ಬಸವರಾಜು ನೇರ ಸ್ಪರ್ಧಿಯಾಗಿದ್ರು. ಈ ಅಖಾಡದಲ್ಲಿ ದೇವೇಗೌಡರಿಗೆ ಸೋಲ್ನುಂಟಾದ್ರೆ ಜಿ.ಎಸ್ ಬಸವರಾಜು ಗೆಲುವು ಸಾಧಿಸಿದ್ರು.. ಇದಕ್ಕೆ ನೇರ ಕಾರಣ ಕೆ.ಎನ್ ರಾಜಣ್ಣ ಹಾಗೂ ಮಧುಗಿರಿಯ ಮತದಾರರು ಅನ್ನೋದು ರಾಜಕೀಯ ವಲಯದಲ್ಲಿ ಗುಟ್ಟಾಗಿ ಉಳಿದಿಲ್ಲ. ಕಳೆದ ಬಾರಿ ಸೋಲಿನಿಂದ ಕಂಗೆಟ್ಟಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣಗೆ ಈ ಬಾರಿ ಗೆಲುವು ಅನಿವಾರ್ಯ. ಈ ಬಾರಿಗೆ ಗೆದ್ದರೆ ಪ್ರತ್ಯೇಕ ಜಿಲ್ಲೆ.. ಸೇರಿದಂತೆ ಹಲವು ವಿಷಯಗಳನ್ನು ಜನರ ಮುಂದೆ ಹೇಳಿಕೊಂಡಿದ್ದಾರೆ.
ದೇವೇಗೌಡರನ್ನು ಮಣಿಸಿ ದೇಶದ ಗಮನ ಸೆಳೆದಿದ್ದರು ಜಿಎಸ್ ಬಿ. ಆ ಚುನಾವಣೆಯಲ್ಲಿ ಮಧುಗಿರಿಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜುಗೆ 79 ಸಾವಿರ ಮತಗಳು ಬಂದಿದ್ವು.
ಆ ಉಪಕಾರ ಸ್ಮರಿಸಿರುವ ಜಿ.ಎಸ್ ಬಸವರಾಜು. ನನ್ನ ಸ್ನೇಹಿತನ ಸಹಕಾರದಿಂದ ನಾನು ಪಾರ್ಲಿಮೆಂಟ್ ಸದಸ್ಯನಾಗಿದ್ದೇನೆ ಹೊರತು, ನನ್ನ ವೈಯಕ್ತಿಕ ಶಕ್ತಿಯಿಂದ ಅಲ್ಲ ಎಂದಿದ್ದಾರೆ ಅನ್ನೋ ಹೇಳಿಕೆ ಸಾಕಷ್ಟು ಸಂಚಲನ ಮೂಡಿಸಿದೆ.. ಪಕ್ಷ ಯಾವುದಾದರೇನು.. ನಮ್ಮ ದೋಸ್ತಿ ಮುಂದೆ ಅಂತಾ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆದಿದ್ದಾರೆ.
ಟಿ.ಯೋಗೀಶ್ ಜೀ ಕನ್ನಡ ನ್ಯೂಸ್, ತುಮಕೂರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.