Udaipur Murder Case: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ತನಿಖೆಯನ್ನ ಎನ್‌ಐಎ ಕೈಗೆತ್ತಿಕೊಂಡಿದ್ದೆ. ಈ ಪ್ರಕರಣದಲ್ಲಿ ರಿಯಾಜ್ ಮತ್ತು ಮೊಹಮ್ಮದ್ ಗೌಸ್ ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ಈ ಇಡೀ ಘಟನೆಯಲ್ಲಿ ಪಾಕಿಸ್ತಾನ ಭಾಗಿಯಾಗಿರುವುದು ಬಯಲಾಗಿದೆ. ವಾಸ್ತವವಾಗಿ, ಈ ಇಬ್ಬರೂ ಆರೋಪಿಗಳು ಪಾಕಿಸ್ತಾನಲ್ಲಿರುವ ಕೆಲವು ಜನರೊಂದಿಗೆ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲ, ಮೂಲಗಳ ಪ್ರಕಾರ ಇಬ್ಬರೂ ಆರೋಪಿಗಳು ಕನ್ಹಯ್ಯಾ ಲಾಲ್ ಹತ್ಯೆಗೆ ಐಸಿಸ್‌ನ ವೀಡಿಯೋಗಳನ್ನು ನೋಡಿದ್ದರು ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

NIA ಮೂಲಗಳು ಏನು ಹೇಳುತ್ತವೆ?


ಮೂಲಗಳ ಪ್ರಕಾರ, ಎನ್‌ಐಎ ಶೀಘ್ರದಲ್ಲೇ ಇಬ್ಬರೂ ಆರೋಪಿಗಳನ್ನು ದೆಹಲಿಗೆ ಕರೆತರಲಿದೆ. ಆರೋಪಿಗಳು ಹತ್ಯೆ ಮಾಡಲು ಭಯೋತ್ಪಾದಕ ಸಂಘಟನೆ ಐಸಿಸ್‌ನ ವೀಡಿಯೊಗಳನ್ನು ವೀಕ್ಷಿಸಿದ್ದರು ಎಂದು ತನಿಖಾ ಸಂಸ್ಥೆ ಶಂಕಿಸಿದೆ. ಆರೋಪಿಗಳು ಕೊಲೆಗೂ ಮುನ್ನ ಮತ್ತು ನಂತರ ಪಾಕಿಸ್ತಾನದಲ್ಲಿ ಕುಳಿತಿದ್ದ ಕೆಲವರ ಜತೆ ಸಂಪರ್ಕದಲ್ಲಿದ್ದರು.


ಇದನ್ನೂ ಓದಿ : ಔರಂಗಾಬಾದ್ ನಗರವನ್ನು ಸಂಭಾಜಿ ನಗರ ಎಂದು ಮರುನಾಮಕರಣ ಮಾಡಿದ್ದೇಕೆ ಗೊತ್ತೇ?


ಆರೋಪಿಯಿಂದ ಪತ್ತೆಯಾದ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಎನ್‌ಐಎ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಿದೆ. ಇಬ್ಬರು ಆರೋಪಿಗಳ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಚಾಟಿಂಗ್‌ಗಳ ವಿವರಗಳನ್ನು ಪಡೆಯಲು ಎನ್‌ಐಎ ತಂಡ ಸೈಬರ್ ಮತ್ತು ಫೋರೆನ್ಸಿಕ್ ತಂಡದಿಂದ ಸಹಾಯ ಪಡೆಯುತ್ತಿದೆ.


ಆರೋಪಿಗಳಾದ ರಿಯಾಜ್ ಮತ್ತು ಮೊಹಮ್ಮದ್ ಗೌಸ್ ಪಾಕಿಸ್ತಾನ ಮೂಲದ ಇಸ್ಲಾಮಿಕ್ ಸಂಘಟನೆ ದಾವತೆ-ಎ-ಇಸ್ಲಾಮ್‌ಗೆ ಸಂಬಂಧ ಹೊಂದಿದ್ದಾರೆ. ಮೂಲಗಳ ಪ್ರಕಾರ, ಎನ್‌ಐಎ ಈ ಆರೋಪಿಗಳು ಮತ್ತು ದಾವತೆ ಇಸ್ಲಾಮಿಯೊಂದಿಗೆ ಸಂಬಂಧ ಹೊಂದಿರುವ ಇತರ ಜನರ ಸಂಪರ್ಕವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ.


ಇದನ್ನೂ ಓದಿ : ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಉದ್ಧವ್ ಠಾಕ್ರೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.