Udaipur Murder : ಕನ್ಹಯ್ಯಾ ಲಾಲ್ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ!

ವರದಿಯಲ್ಲಿ ಕನ್ಹಯ್ಯಾ ಕತ್ತಿನ ಮೇಲೆ 7-8 ಭಾರಿ ಇರಿತ, ದೇಹದ ಮೇಲೆ 2 ಡಜನ್‌ಗೂ ಹೆಚ್ಚು ಗಾಯಗಳು ಪತ್ತೆಯಾಗಿವೆ. ಮಂಗಳವಾರ, ಕನ್ಹಯ್ಯಾ ಲಾಲ್ ಎಂಬ ಟೈಲರ್ ಅನ್ನು ಹಾಡು ಹಗಲಿನಲ್ಲಿ ತಾಲಿಬಾನ್ ರೀತಿಯಲ್ಲಿ ಹತ್ಯೆ ಮಾಡಲಾಗಿದೆ.

Written by - Zee Kannada News Desk | Last Updated : Jun 29, 2022, 02:28 PM IST
  • ರಾಜಸ್ಥಾನದ ಉದಯಪುರದಲ್ಲಿ ಹತ್ಯೆಗೀಡಾದ ಕನ್ಹಯ್ಯಾ ಲಾಲ್
  • ಕನ್ಹಯ್ಯಾ ಲಾಲ್ ಪ್ರಾಥಮಿಕ ಮರಣೋತ್ತರ ಪರೀಕ್ಷೆ
  • ನ್ಹಯ್ಯಾ ಕತ್ತಿನ ಮೇಲೆ 7-8 ಭಾರಿ ಇರಿತ, ದೇಹದ ಮೇಲೆ 2 ಡಜನ್‌ಗೂ ಹೆಚ್ಚು ಗಾಯ
Udaipur Murder : ಕನ್ಹಯ್ಯಾ ಲಾಲ್ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ! title=

Kanhaiyalal Postmortem Report : ರಾಜಸ್ಥಾನದ ಉದಯಪುರದಲ್ಲಿ ಹತ್ಯೆಗೀಡಾದ ಕನ್ಹಯ್ಯಾ ಲಾಲ್ ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿ ಹೊರಬಿದ್ದಿದ್ದು, ವರದಿಯಲ್ಲಿ ಕನ್ಹಯ್ಯಾ ಕತ್ತಿನ ಮೇಲೆ 7-8 ಭಾರಿ ಇರಿತ, ದೇಹದ ಮೇಲೆ 2 ಡಜನ್‌ಗೂ ಹೆಚ್ಚು ಗಾಯಗಳು ಪತ್ತೆಯಾಗಿವೆ. ಮಂಗಳವಾರ, ಕನ್ಹಯ್ಯಾ ಲಾಲ್ ಎಂಬ ಟೈಲರ್ ಅನ್ನು ಹಾಡು ಹಗಲಿನಲ್ಲಿ ತಾಲಿಬಾನ್ ರೀತಿಯಲ್ಲಿ ಹತ್ಯೆ ಮಾಡಲಾಗಿದೆ.

ಕನ್ಹಯ್ಯಾ ದೇಹದ ಮೇಲೆ 2 ಡಜನ್‌ಗೂ ಹೆಚ್ಚು ಗಾಯದ ಗುರುತುಗಳು

ಕನ್ಹಯ್ಯಾ ಲಾಲ್ ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ಅನೇಕ ಮಾಹಿತಿಗಳು ಬಹಿರಂಗವಾಗಿವೆ. ದೇಹದ ಮೇಲೆ ಎರಡು ಡಜನ್‌ಗಿಂತಲೂ ಹೆಚ್ಚು ಗಾಯದ ಗುರುತುಗಳು ಕಂಡುಬಂದಿವೆ. ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಕನ್ಹಯ್ಯಾ ಲಾಲ್ ಕುತ್ತಿಗೆಗೆ ಏಳರಿಂದ ಎಂಟು ಚಾಕುವಿನಿಂದ ಇರದಿದ್ದಾರೆ.

ಇದನ್ನೂ ಓದಿ : ನೂಪುರ್ ಶರ್ಮಾಗೆ ಬೆಂಬಲ: ರಾಜಸ್ಥಾನದಲ್ಲಿ ವ್ಯಕ್ತಿಯ ಶಿರಚ್ಛೇದ, ಪ್ರಧಾನಿ ಮೋದಿಗೂ ಬೆದರಿಕೆ..!

ಕನ್ಹಯ್ಯಾ ಅವರ ಒಂದು ಕೈ ಕೂಡ ಕತ್ತರಿಸಿದ್ದಾರೆ!

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕನ್ಹಯ್ಯಾ ಲಾಲ್‌ನ ಒಂದು ಕೈ ತುಂಡಾಗಿರುವುದು ಪತ್ತೆಯಾಗಿದೆ. ವರದಿಯ ಪ್ರಕಾರ, ಕನ್ಹಯ್ಯಾ ಲಾಲ್ ಸಾವಿಗೆ ಪ್ರಮುಖ ಕಾರಣವೆಂದರೆ ಭಾರೀ ರಕ್ತಸ್ರಾವ ಮತ್ತು ದೇಹದ ಒಂದೇ ಭಾಗದಲ್ಲಿ ಒಂದೆ ಕಡೆ ಇರಿದಿರುವುದು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News