ಜೂನ್ 28 ರಂದು ರಾಜಸ್ಥಾನದ ಉದಯಪುರದಲ್ಲಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ಎಂಬ ಕಾರಣಕ್ಕೆ ಟೈಲರ್ ಕನ್ಹಯ್ಯಾ ಲಾಲ್ ಎಂಬವರ ಶಿರಚ್ಛೇದ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಕೃತ್ಯ ಎಸಗಿದ ಇಬ್ಬರು ಕಿರಾತಕರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಇನ್ನು ಎನ್‌ಐಎ ತಂಡ ನಡೆಸಿದ ತನಿಖೆಯಲ್ಲಿ ಮಹತ್ತರ ಮಾಹಿತಿ ಲಭಿಸಿದ್ದು, ಹತ್ಯೆ ಮಾಡಿದ್ದು ಇಬ್ಬರಲ್ಲ ಹತ್ತು ಮಂದಿ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಳ್ಳತನದ ಹಾದಿ ಹಿಡಿದ ಗುರು: ತೊಗರಿ ಬೇಳೆ ಕದ್ದು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ


ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಎನ್‌ಐಎ ತಂಡ, ಇಂದು ಜೈಪುರದ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ಆರೋಪಿಗಳ ಪ್ರೊಡಕ್ಷನ್ ವಾರೆಂಟ್‌ಗಾಗಿ ಅರ್ಜಿ ಸಲ್ಲಿಸಲಿದೆ. 


ಮೂಲಗಳ ಪ್ರಕಾರ, ಈ ಹತ್ಯಾಕಾಂಡದಲ್ಲಿ ಮೊಹಮ್ಮದ್ ರಿಯಾಜ್ ಮತ್ತು ಗೋಸ್ ಮೊಹಮ್ಮದ್ ಮಾತ್ರವಲ್ಲದೆ ಹತ್ತಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ ಎಂಬುದು ತನಿಖೆಯಲ್ಲಿ ಕಂಡುಬಂದಿದೆ. ಅವರ ಗುಂಪಿನಲ್ಲಿ ಹಲವು ಭಯೋತ್ಪಾದಕ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಪಾಕಿಸ್ತಾನದ ವ್ಯಕ್ತಿಗಳೂ ಇದ್ದಾರೆ ಎನ್ನಲಾಗುತ್ತಿದೆ. ಕನ್ಹಯ್ಯನ ಹತ್ಯೆಯ ಹಿಂದೆ, ಭಯ ಬಿತ್ತರಿಸುವ ಉದ್ದೇಶ  ಮಾತ್ರ ಇತ್ತು ಎಂಬುದು ತಿಳಿದುಬಂದಿದೆ. ಕನ್ಹಯ್ಯಾ ಮಾತ್ರವಲ್ಲದೆ ನಿತಿನ್ ಜೈನ್ ಎಂಬ ವ್ಯಕ್ತಿಯನ್ನೂ ಸಹ ಕೊಲೆ ಮಾಡಲು ಇವರು ಪ್ಲ್ಯಾನ್‌ ಮಾಡಿದ್ದರು ಎನ್ನಲಾಗುತ್ತಿದೆ. 


ಕಳೆದ ದಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಮೃತ ಕನ್ಹಯ್ಯಾ ಲಾಲ್ ಸಂಬಂಧಿಕರನ್ನು ಭೇಟಿಯಾಗಿ ಸಾಂತ್ವನ ತಿಳಿಸಿದ್ದಾರೆ. ಇದಲ್ಲದೆ, ಕನ್ಹಯ್ಯಾ ಲಾಲ್ ಹತ್ಯೆಯನ್ನು ವಿರೋಧಿಸಿ ಇಂದು ಉದಯಪುರದಲ್ಲಿ ರ್ಯಾಲಿಯನ್ನು ಸಹ ಆಯೋಜಿಸಲಾಗಿದೆ. 


ಪೊಲೀಸರ ಅಮಾನತು: 
ಇನ್ನು ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿರ್ಲಕ್ಷ್ಯ ಮಾಡುತ್ತಿರುವ ಆರೋಪದಲ್ಲಿ ಉದಯಪುರದ ಧನಮಂಡಿ ಪೊಲೀಸ್ ಠಾಣೆಯ ಎಎಸ್‌ಐಯನ್ನು ಅಮಾನತು ಮಾಡಲಾಗಿದೆ.


ಇದನ್ನೂ ಓದಿ: Sarkari Naukri: ವಿದ್ಯುತ್ ಇಲಾಖೆಯಲ್ಲಿ ಸರ್ಕಾರಿ ಕೆಲಸ


ಈ ಹಿಂದೆ ಅಂದರೆ ಜೂನ್ 11 ರಂದು ಸೋಶಿಯಲ್‌ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕನ್ಹಯ್ಯ ಲಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ ಹೇಳಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.