Sanjay Raut to Appear Before ED: ಶಿವಸೇನೆಯ ವಕ್ತಾರ ಸಂಜಯ್ ರಾವತ್ ಇಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ. ಪತ್ರಾ ಚಾಲ್ ಭೂ ಹಗರಣ ಪ್ರಕರಣದ ವಿಚಾರಣೆಗಾಗಿ ಇಡಿ ರಾವತ್‌ಗೆ ಸಮನ್ಸ್ ನೀಡಿದೆ. ಸಂಜಯ್ ರಾವತ್ ಅವರು ಇಡಿ ಮುಂದೆ ಹಾಜರಾಗಲಿರುವ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಸಂಜಯ್ ರಾವತ್ ಟ್ವೀಟ್ ನಲ್ಲಿ ಏನಿದೆ?
ಇಂದು ಮಧ್ಯಾಹ್ನ 12 ಗಂಟೆಗೆ ಇಡಿ ಮುಂದೆ ಹಾಜರಾಗುವುದಾಗಿ ಸಂಜಯ್ ರಾವತ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ನೀಡಿರುವ ಸಮನ್ಸ್‌ಗಳನ್ನು ನಾನು ಗೌರವಿಸುವುದಾಗಿಯೂ ಹೇಳಿದ್ದಾರೆ. ಅಲ್ಲದೆ, ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸುವುದು ನನ್ನ ಕರ್ತವ್ಯ ಎಂದಿದ್ದಾರೆ. ಇದೇ ವೇಳೆ ಇಡಿ ಕಚೇರಿ ಮುಂದೆ ಜಮಾವಣೆಯಾಗದಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಮಾತ್ರವಲ್ಲ ನಿಶ್ಚಿಂತೆಯಿಂದ ಇರಲು ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ : ಸೇನಾ ಕ್ಯಾಂಪ್ ಬಳಿ ಭೂಕುಸಿತ: 7 ಸಾವು, 45ಕ್ಕೂ ಅಧಿಕ ಸೇನಾ ಸಿಬ್ಬಂದಿ ನಾಪತ್ತೆ!
I will be appearing bfore the ED tody at 12 noon. I respect the Summons issued to me and it's my duty to co-operate with the Investigation agencies
I appeal Shivsena workers not to gather at the ED office
Don't worry !@PawarSpeaks @OfficeofUT @MamataOfficial @RahulGandhi pic.twitter.com/Vn6SeedAoU
— Sanjay Raut (@rautsanjay61) July 1, 2022
ಈ ಮೊದಲು ಇಡಿ ನೋಟಿಸ್ ನೀಡಿದ್ದರೂ ಸಂಜಯ್ ರಾವತ್ ವಿಚಾರಣೆಗೆ ಹಾಜರಾಗಿರಲಿಲ್ಲ. ವಿಚಾರಣೆಗೆ ಹಾಜರಾಗಲು ಇಡಿಯಿಂದ 14 ದಿನಗಳ ಕಾಲಾವಕಾಶ ಕೋರಿದ್ದರು. ಆದರೆ, ಇಡಿ ಇದನ್ನು ಒಪ್ಪಿಕೊಂಡಿರಲಿಲ್ಲ. ವಿಚಾರಣೆಗೆ ಹಾಜರಾಗುವಂತೆ ಎರಡನೇ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಂಜಯ್ ರಾವತ್ ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ.
ಇದನ್ನೂ ಓದಿ : 'ಮಹಾರಾಷ್ಟ್ರ ಸಿಎಂ ಆಗಿ ಏಕನಾಥ್ ಶಿಂಧೆ, ಡಿಸಿಎಂ ಆಗಿ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.