US Car Crash: ಭೀಕರ ಕಾರು ಅಪಘಾತದಲ್ಲಿ ಭಾರತ ಮೂಲದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಅಮೆರಿಕಾದ ಜಾರ್ಜಿಯಾ ರಾಜ್ಯದಲ್ಲಿ ನಡೆದಿದೆ ಎಂದು ವರಿದಿಯಾಗಿದೆ.


COMMERCIAL BREAK
SCROLL TO CONTINUE READING

ಮೃತ ಮೂವರು ಹಾಗೂ ಗಾಯಗೊಂಡಿರುವ ಇಬ್ಬರು ವಿದ್ಯಾರ್ಥಿಗಳು 18 ವರ್ಷ ವಯೋಮಾನದವರಾಗಿದ್ದು, ಇವರು ಅಲ್ಫರೆಟ್ಟಾ ಪ್ರೌಢ ಶಾಲೆ ಹಾಗೂ ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 


ಇದನ್ನೂ ಓದಿ: ಪುರಿ ಜಗನಾಥ್ ದೇವರನ್ನು ಮೋದಿ ಭಕ್ತ ಎಂದ ಸಂಭಿತ್ ಪಾತ್ರಾ..!


ಈ ಭೀಕರ ಅಪಘಾತದಲ್ಲಿ ಆರ್ಯನ್ ಜೋಶಿ, ಶ್ರೀಯಾ ಅವಸರಲ ಎಂಬ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದರೆ, ಅನ್ವಿ ಶರ್ಮಾ ಎಂಬ ವಿದ್ಯಾರ್ಥಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಗಾಯಾಳುಗಳನ್ನು ರಿತ್ವಿಕ್ ಸೋಮೆಪಲ್ಲಿ ಹಾಗೂ ಮುಹಮ್ಮದ್ ಲಿಯಾಕತ್ ಎಂದು ಗುರುತಿಸಲಾಗಿದ್ದು, ಅವರಿಗೆ ಅಲ್ಫರೆಟ್ಟಾದಲ್ಲಿರುವ ನಾರ್ತ್ ಫುಲ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡಿದ್ದರಿಂದ ರಸ್ತೆ ಬದಿಯ ಮರಗಳ ಸಾಲಿನ ಬಳಿ ಮಗುಚಿ ಬಿದ್ದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಭಾರೀ ಗಾಳಿಗೆ ನದಿಯಲ್ಲಿ ಮಗುಚಿದ ದೋಣಿ :ವಿಹಾರಕ್ಕೆ ತೆರಳಿದ್ದ 6 ಜನ ನೀರು ಪಾಲು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews