ನವದೆಹಲಿ: ಪುರಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಂಬಿತ್ ಪಾತ್ರಾ ಅವರು ಜಗನ್ನಾಥ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಂಬಿತ್ ಪಾತ್ರಾ ಅವರು ಪುರಿಯ ಭಗವಾನ್ ಜಗನ್ನಾಥ ಪ್ರಧಾನಿ ಮೋದಿಯ ಭಕ್ತ ಎಂದು ಹೇಳುವುದನ್ನು ಕೇಳಬಹುದು. ಆದರೆ ವಿವಾದ ತಾರಕಕ್ಕೇರುತ್ತಿದ್ದಂತೆ ಸಂಬಿತ್ ಕ್ಷಮೆಯಾಚಿಸಿದ್ದು, ಬಾಯಿತಪ್ಪಿ ಈ ಹೇಳಿಕೆ ನೀಡಿರುವುದಾಗಿ ಅವರು ಸಮಜಾಯಿಸಿ ನೀಡಿದ್ದಾರೆ.
ಇದನ್ನೂ ಓದಿ: ಮುಂದಿನ ಏಳು ದಿನಗಳ ಕಾಲ ರಾಜ್ಯದೆಲ್ಲೆಡೆ ಭಾರಿ ಮಳೆ- ಹವಾಮಾನ ಇಲಾಖೆ ಮೂನ್ಸೂಚನೆ
ಸೋಮವಾರದಂದು ಒಡಿಶಾದ ಪುರಿಯಲ್ಲಿ ಪ್ರಧಾನಿ ಮೋದಿಯವರ ರೋಡ್ ಶೋ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಂಬಿತ್ ಪಾತ್ರಾ ಅವರು ಪುರಾತನ ನಗರದ ಪೂಜ್ಯ ದೇವರು ಜಗನ್ನಾಥ ಪ್ರಧಾನಿ ಮೋದಿಯ ಭಕ್ತ ಎಂದು ಹೇಳಿದ್ದರು.
ಅವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂಬಿತ್ ಪಾತ್ರಾ ಹೇಳಿಕೆಯನ್ನು ಖಂಡಿಸಿದ್ದಾರೆ.
Mahaprabhu Shree Jagannatha is the Lord of Universe.
Calling Mahaprabhu a bhakt of another human being is an insult to the Lord. This has hurt the sentiments and demeaned the faith of crores of Jagannatha bhaktas and Odias across the world.
The Lord is the greatest Symbol of…
— Naveen Patnaik (@Naveen_Odisha) May 20, 2024
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು "ಮಹಾಪ್ರಭು ಶ್ರೀ ಜಗನ್ನಾಥರು ಬ್ರಹ್ಮಾಂಡದ ಅಧಿಪತಿ. ಮಹಾಪ್ರಭುಗಳನ್ನು ಇನ್ನೊಬ್ಬ ಮಾನವನ ಭಕ್ತ ಎಂದು ಕರೆಯುವುದು ದೇವರಿಗೆ ಮಾಡುವ ಅವಮಾನ. ಇದು ಸಂಪೂರ್ಣವಾಗಿ ಖಂಡನೀಯ. ಇದು ಜಗತ್ತಿನಾದ್ಯಂತ ಇರುವ ಕೋಟ್ಯಂತರ ಜಗನ್ನಾಥ ಭಕ್ತರು ಮತ್ತು ಒರಿಯಾ ಜನರ ಭಾವನೆಗಳಿಗೆ ಮತ್ತು ನಂಬಿಕೆಗೆ ಧಕ್ಕೆ ತಂದಿದೆ.ಭಗವಾನ್ ಜಗನ್ನಾಥನನ್ನು ರಾಜಕೀಯಕ್ಕೆ ಎಳೆದು ತರಬೇಡಿ' ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಜೆಪಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಎಸ್‌ಐಟಿ ಮನವಿ
ಇನ್ನೂ ಮುಂದುವರೆದು " ಪುರಿ ಜಗನಾಥ್ ಒರಿಯಾದ ಅತಿ ದೊಡ್ಡ ಅಸ್ಮಿತೆಯಾಗಿದೆ.ನಾನು ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ ಮತ್ತು ಯಾವುದೇ ರಾಜಕೀಯ ಚರ್ಚೆಯಲ್ಲಿ ದೇವರನ್ನು ಸೇರಿಸಬೇಡಿ ಎಂದು ಬಿಜೆಪಿಗೆ ಮನವಿ ಮಾಡುತ್ತೇನೆ. ಇದನ್ನು ಮಾಡುವ ಮೂಲಕ ನೀವು ಒಡಿಯಾ ಅಸ್ಮಿತೆಯನ್ನು ತೀವ್ರವಾಗಿ ನೋಯಿಸಿದ್ದೀರಿ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
I strongly condemn this statement of BJP. They have started thinking that they are above God. This is height of arrogance. Calling God bhakt of Modi ji is an insult to God. https://t.co/cOP23BpOqh
— Arvind Kejriwal (@ArvindKejriwal) May 20, 2024
ಮತ್ತೊಂದೆಡೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಬಿಜೆಪಿ ಅಭ್ಯರ್ಥಿ ಹೇಳಿಕೆಯನ್ನು ಖಂಡಿಸಿದ್ದಾರೆ. ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ “ಬಿಜೆಪಿ ನಾಯಕರ ಈ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ತಾವು ದೇವರಿಗಿಂತ ಮೇಲಿದ್ದೇವೆ ಎಂದು ಯೋಚಿಸತೊಡಗಿದ್ದಾರೆ. ಇದು ಅಹಂಕಾರದ ಪರಮಾವಧಿ. ದೇವರನ್ನು ಮೋದಿ ಭಕ್ತ ಎಂದು ಕರೆಯುವುದು ದೇವರಿಗೆ ಮಾಡುವ ಅವಮಾನ'' ಎಂದು ಕಿಡಿ ಕಾರಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.