ಹುಬ್ಬಳ್ಳಿಯಲ್ಲಿ ವೈಷ್ಣವಿ ದೇವಸ್ಥಾನದ ಅರ್ಚಕನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಜನತೆ
Crime News: ವೈಷ್ಣವಿ ದೇವಸ್ಥಾನ ನಿರ್ಮಾಣ ಮಾಡಿ ಅದರ ಅರ್ಚನೆಯನ್ನ ಸಹ ದೇವಪ್ಪಜ್ಜ ಅವರೇ ಮಾಡುತ್ತಿದ್ದರು. ಆದರೆ ಭಾನುವಾರ (ಜುಲೈ 21) ತಡರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಕೊಲೆ ಮಾಡಿದ್ದಾರೆ.
Hubli Crime News: ಇಲ್ಲಿನ ಈಶ್ವರ ನಗರದಲ್ಲಿರುವ ವೈಷ್ಣವಿ ದೇವಸ್ಥಾನದ ಸಂಸ್ಥಾಪಕ ಹಾಗೂ ಅರ್ಚಕ ದೇವಪ್ಪ ಅಲಿಯಾಸ್ ದೇವಿಂದ್ರಪ್ಪ ವನಹಳ್ಳಿಯನ್ನ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಘಟನೆಯಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.
ವೈಷ್ಣವಿ ದೇವಸ್ಥಾನ (Vaishnavi Temple) ನಿರ್ಮಾಣ ಮಾಡಿ ಅದರ ಅರ್ಚನೆಯನ್ನ ಸಹ ದೇವಪ್ಪಜ್ಜ ಅವರೇ ಮಾಡುತ್ತಿದ್ದರು. ಆದರೆ ಭಾನುವಾರ (ಜುಲೈ 21) ತಡರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಕೊಲೆ ಮಾಡಿದ್ದಾರೆ. ಆದಾಗ್ಯೂ, ಈ ಕೃತ್ಯ ಮಾಡಿದವರ್ಯಾರು? ಯಾವ ಕಾರಣಕ್ಕೆಈ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿಲ್ಲ.
ಇದನ್ನೂ ಓದಿ- Accident: ಕಾರಿಗೆ ಡಿಕ್ಕಿ ಹೊಡೆದು ತಪ್ಪಿಸಿಕೊಳ್ಳುತ್ತಿದ್ದ ವೇಳೆ ಫ್ಲೈ ಓವರ್ ನಿಂದ ನೆಲಕ್ಕೆ ಅಪ್ಪಳಿಸಿದ ಲಾರಿ
ಕೊಲೆಯಾದ ಸ್ಥಳದಲ್ಲಿ ಸರಿಯಾಗಿ ಸಿಸಿಟಿವಿ ಇಲ್ಲ. ದೇವಪ್ಪಜ್ಜ (Devappajja) ಧಾರವಾಡಕ್ಕೆ ವೀರಶೈವ ಮಹಾಸಭಾ ಚುನಾವಣೆಯಲ್ಲಿ ಮತಹಾಕಿ ಹುಬ್ಬಳ್ಳಿ ಈಶ್ವರನಗರಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ ಬಂದ ವ್ಯಕ್ತಿಯೊಬ್ಬ ದೇವಪ್ಪಜ್ಜನ ಹೊಟ್ಟೆ, ಬೆನ್ನಿಗೆ ನಾಲ್ಕು ಸಲ ಚಾಕು ಇರಿದು ಎಸ್ಕೇಪ್ ಆಗಿದ್ದಾನೆ. ದೇವಪ್ಪಜ್ಜನನ್ನು ಆಸ್ಪತ್ರೆಗೆ ಕೊಂಡೊಯ್ಯುವುದರೊಳಗಾಗಿ ಅವರು ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.
ಕಳೆದ ಒಂದು ವರ್ಷದ ಹಿಂದೆ ಅರ್ಚಕನ ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆದಿತ್ತು. ಅದೃಷ್ಟವಶಾತ್ ಆ ಸಮಯದಲ್ಲಿ ಅರ್ಚಕ ಬದುಕುಳಿದಿದ್ದರು ಎನ್ನಲಾಗಿದೆ. ಇಲ್ಲಿನ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಅಲ್ಲಿಯೇ
ಬೀಡುಬಿಟ್ಟಿದ್ದಾರೆ. ಕೊಲೆ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- ಸಕ್ಕರೆ ನಾಡಿನಲ್ಲಿ ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ ನೂತನ ಎಸ್‌ಪಿ
ಮೃತನ ದೂರದ ಸಂಬಂಧಿ ಅಜ್ಜಿ ಶ್ರೀಮತಿ ಬಾಲೇಹೂಸರು ಹಾಗೂ ಭಕ್ತರು ಮಾತ್ರ ದೇಚಪ್ಪಜ್ಜನ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ದೇವಪ್ಪಜ್ಜನ ಪತ್ನಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಹಾಗೂ ಪುತ್ರಿ ಸಹ ಬಾಗಲಕೋಟೆಯಲ್ಲಿ ವೈದ್ಯರಾಗಿದ್ದು ಯಾವುದೇ ರೀತಿಯ ಮಾಹಿತಿ ಕೊಡಲು ನಿರಾಕರಣೆ ಮಾಡಿರುವುದಾಗಿ ತಿಳಿದುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.