ಹೈದರಾಬಾದ್: ಎಟಿಎಂನಲ್ಲಿ ಪೆಪ್ಪರ್ ಸ್ಪ್ರೇ ಬಳಸಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ದರೋಡೆಕೋರರು 7 ಲಕ್ಷ ರೂ. ದೋಚಿ ಎಸ್ಕೇಪ್ ಆಗಿರುವ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. ಈ ಭಯಾನಕ ದೃಶ್ಯವು ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಖತ್ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಎಟಿಎಂನಲ್ಲಿ ವ್ಯಕ್ತಿಯೊಬ್ಬರು ಹಣ ಠೇವಣಿ ಮಾಡುತ್ತಿದ್ದರು. ಈ ವೇಳೆ ಅವರ ಮೇಲೆ ಇದ್ದಕ್ಕಿದ್ದಂತೆಯೇ ಅಟ್ಯಾಕ್ ಮಾಡಿದ ಖತರ್ನಾಕ್ ಗ್ಯಾಂಗ್, ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆ ನಡೆಸಿದ್ದಾರೆ. ಬಳಿಕ 7 ಲಕ್ಷ ರೂ. ದೋಚಿ ಸ್ಥಳದಿಂದ ಎಸ್ಕೇಪ್ ಆಗಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ನಾಲ್ವರು ಖದೀಮರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದೆ ಬಂಧಿಸಲಾಗಿದೆ.


ಬಂಧಿತರನ್ನು ಕೇರಳ ಮೂಲದ ತಾನ್ಸಿಫ್ ಅಲಿ (24), ಮುಹಮ್ಮದ್ ಸಹದ್ (26), ತನ್ಸೀಹ್ ಬಾರಿಕಲ್ (23), ಅಬ್ದುಲ್ ಮುಹೀಸ್ (23) ಎಂದು ಗುರುತಿಸಲಾಗಿದೆ. ಜುಲೈ 3ರಂದು ನಗರದ ಹಿಮಾಯತ್‌ನಗರ ಪ್ರದೇಶದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ANI ವರದಿ ಮಾಡಿದೆ.


ಇದನ್ನೂ ಓದಿ: ಐದು ರಾಜ್ಯಗಳಿಗೆ ಆರೆಂಜ್ ಅಲರ್ಟ್ ಘೋಷಣೆ..! ನಾಳೆ ಭಾರೀ ಮಳೆ ಸಾಧ್ಯತೆ


ಭಯಾನಕ ಹಲ್ಲೆಯ ವಿಡಿಯೋ


ಹೈದರಾಬಾದ್ ಕಮಿಷನರ್ ಟಾಸ್ಕ್ ಫೋರ್ಸ್, ದೋಮಲ್‌ಗುಡಾ ಪೊಲೀಸರ ಸಹಕಾರದೊಂದಿಗೆ ದರೋಡೆಕೋರರನ್ನು ಬಂಧಿಸಲಾಗಿದೆ. ದರೋಡೆ ವೇಳೆ ಪೆಪ್ಪರ್ ಸ್ಪ್ರೇ ಬಳಸಿ ಒಟ್ಟು 7 ಲಕ್ಷ ರೂ.ವನ್ನು ಕಳ್ಳತನ ಮಾಡಲಾಗಿತ್ತು. ಆರೋಪಿಗಳಿಂದ 3.25 ಲಕ್ಷ ರೂ. ನಗದು, ಪೆಪ್ಪರ್ ಸ್ಪ್ರೇ ಬಾಟಲಿ ಮತ್ತು ದರೋಡೆಕೋರರು ಬಳಸಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಐದು ರಾಜ್ಯಗಳಿಗೆ ಆರೆಂಜ್ ಅಲರ್ಟ್ ಘೋಷಣೆ..! ನಾಳೆ ಭಾರೀ ಮಳೆ ಸಾಧ್ಯತೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.