ಕಿಯೋಂಜಾರ್ (ಒಡಿಶಾ): ತನ್ನ ಸಹೋದರನೊಂದಿಗೆ ಮನೆಗೆ ಮರಳುತ್ತಿದ್ದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ನಂತರ ಸಂತ್ರಸ್ತೆ ಹಲವಾರು ಕಷ್ಟಗಳನ್ನು ಎದುರಿಸಬೇಕಾಯಿತು. ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದು, ಆಕೆಯನ್ನು 12 ಗಂಟೆ ಪೊಲೀಸ್ ವ್ಯಾನ್‌ನಲ್ಲಿಯೇ ಇರಿಸಿದ್ದರು ಎಂದು ಆರೋಪಿಲಾಗಿದೆ. ಈ ಪ್ರಕರಣವು ಒಡಿಶಾದ ಕಿಯೋಂಜಾರ್ ಜಿಲ್ಲೆಯ ಸೊಸೊ ಪೊಲೀಸ್ ಠಾಣೆಯ ಆನಂದಪುರ ಉಪವಿಭಾಗಕ್ಕೆ ಸಂಬಂಧಿಸಿದೆ.


COMMERCIAL BREAK
SCROLL TO CONTINUE READING

37 ವರ್ಷದ ಮಹಿಳೆಯನ್ನು ಗುರುವಾರ ಬೆಳಗ್ಗೆ ಪೊಲೀಸ್ ವ್ಯಾನ್‌ನಲ್ಲಿ ಆನಂದಪುರ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಈ ಅಪರಾಧದ ಘಟನೆಯು ಸಲಾನಿಯಾ ಸಮುದಾಯ ಆರೋಗ್ಯ ಕೇಂದ್ರ (CHC) ವ್ಯಾಪ್ತಿಯಲ್ಲಿ ನಡೆದಿದ್ದರಿಂದ ವೈದ್ಯರು ವೈದ್ಯಕೀಯ ಪರೀಕ್ಷೆಗೆ ನಿರಾಕರಿಸಿದ್ದರು.


ಇದಾದ ನಂತರ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ಸಲಾನಿಯಾ ಸಿಎಚ್‌ಸಿಗೆ ಕರೆದೊಯ್ದರು. ಆದರೆ ಅಲ್ಲಿ ವೈದ್ಯಕೀಯ ಪರೀಕ್ಷೆಗೆ ಮಹಿಳಾ ವೈದ್ಯರು ಇಲ್ಲದ ಕಾರಣ ಸಂತ್ರಸ್ತೆಯನ್ನು ಪೊಲೀಸ್ ವ್ಯಾನ್‌ನಲ್ಲಿಯೇ ಕೂರಿಸಲಾಗಿತ್ತು. ಬಳಿಕ ಪೊಲೀಸರು ಮಹಿಳೆಯನ್ನು ಆನಂದಪುರ ಉಪವಿಭಾಗೀಯ ಆಸ್ಪತ್ರೆಗೆ ಕರೆತಂದಿದ್ದು, ವೈದ್ಯರು ಗುರುವಾರ ರಾತ್ರಿ 9.30ರ ಸುಮಾರಿಗೆ ಪ್ರಾಥಮಿಕ ಪರೀಕ್ಷೆ ನಡೆಸಿದರು. ‘ರಾತ್ರಿ ಸಂಪೂರ್ಣ ವೈದ್ಯಕೀಯ ಪರೀಕ್ಷೆ  ಮಾಡಲಾಗುವುದಿಲ್ಲವೆಂದು ನನಗೆ ತಿಳಿಸಲಾಯಿತು. ಶುಕ್ರವಾರ ಬರುವಂತೆ ನನಗೆ ಹೇಳಲಾಗಿತ್ತು’ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾಳೆ. ಬಳಿಕ ಆಕೆಯ ಸಂಪೂರ್ಣ ವೈದ್ಯಕೀಯ ಪರೀಕ್ಷೆಯನ್ನು ಅಂತಿಮವಾಗಿ ಶುಕ್ರವಾರ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.


ಇದನ್ನೂ ಓದಿ: Viral Railway Ticket: ಪಾಕಿಸ್ತಾನದಿಂದ ಭಾರತಕ್ಕೆ ರೈಲು ಟಿಕೆಟ್ ಬೆಲೆ ಕೇವಲ ರೂ.4! ಇಷ್ಟೊಂದು ಕಡಿಮೆ ದರ ಯಾಕೆ ಗೊತ್ತಾ?


ಈ ಬಗ್ಗೆ ಮಾತನಾಡಿರುವ ಸೊಸೊ ಠಾಣೆ ಪ್ರಭಾರಿ ಪ್ರದೀಪ್ ಕುಮಾರ್ ಸೇಠಿ, ‘ನಾವು ಉದ್ದೇಶಪೂರ್ವಕವಾಗಿ ವೈದ್ಯಕೀಯ ಪರೀಕ್ಷೆಯನ್ನು ವಿಳಂಬ ಮಾಡಿದ್ದೇವೆ ಎಂದಲ್ಲ. ಮಹಿಳಾ ವೈದ್ಯರು ಇಲ್ಲದ ಕಾರಣ ನಮ್ಮನ್ನು ಆನಂದಪುರದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ನಾವು ಸಹ ಸಂತ್ರಸ್ತೆಗೆ ಆದಷ್ಟು ಬೇಗ ಚಿಕಿತ್ಸೆ ಸಿಗಲಿ ಎಂದು ಪ್ರಯತ್ನಿಸಿದ್ದೇವು’ ಎಂದು ಹೇಳಿದ್ದಾರೆ.


ಗುರುವಾರ ಬೆಳಗ್ಗೆ 9 ಗಂಟೆಗೆ ಆನಂದಪುರ ಉಪವಿಭಾಗದ ಆಸ್ಪತ್ರೆಯಿಂದ 40 ಕಿಮೀ ದೂರದಲ್ಲಿರುವ ಸೊಸೊ ಪೊಲೀಸ್ ಠಾಣೆಗೆ ಪೊಲೀಸರು ಸಂತ್ರಸ್ತೆಯನ್ನು ಕರೆದೊಯ್ದರು ಎಂದು ಮಹಿಳೆಯ ಕುಟುಂಬ ಆರೋಪಿಸಿದೆ. ಆದರೆ ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಅಂತಿಮವಾಗಿ 9.30ಕ್ಕೆ ಆಕೆಯನ್ನು ಡಿಸ್ಚಾರ್ಜ್ ಮಾಡಿದರು.


ಜನವರಿ 18ರಂದು ಸಂತ್ರಸ್ತೆ ತನ್ನ ಸಂಬಂಧಿಕರ ಮನೆಯಿಂದ ಸಹೋದರನೊಂದಿಗೆ ಹಿಂದಿರುಗುತ್ತಿದ್ದಾಗ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿದೆ. ಮೂವರು ಯುವಕರು ಮಹಿಳೆಯ ಸಹೋದರನಿಗೆ ಥಳಿಸಿ ಮಹಿಳೆಯನ್ನು ಬಲವಂತವಾಗಿ ಕರೆದೊಯ್ದು ಕೃತ್ಯ ಎಸಗಿದ್ದಾರೆ. ಗೋಹಿರಾಬಾಯಿ ಪ್ರದೇಶದಲ್ಲಿ ದುಷ್ಕರ್ಮಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಮಹಿಳೆ ತನ್ನ ಎಫ್‌ಐಆರ್‌ನಲ್ಲಿ ಹೇಳಿದ್ದಾರೆ. ಈ ಬಗ್ಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲವೆಂದು ತಿಳಿದುಬಂದಿದೆ.  


ಇದನ್ನೂ ಓದಿ: Weather Update: ಇಂದಿನಿಂದ ಮತ್ತೆ ಏರಲಿದೆ ಚಳಿ ಪ್ರಮಾಣ: ಈ ರಾಜ್ಯಗಳಿಗೆ ಖಡಕ್ ಸೂಚನೆ ನೀಡಿದ IMD


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.