ಬೆಂಗಳೂರು: ಆತ್ಮೀಯವಾಗಿದ್ದ ಮಹಿಳೆಯ ಖಾಸಗಿ ಫೋಟೋ, ವಿಡಿಯೋಗ ವೈರಲ್ ಮಾಡಿದ್ದ ಆರೋಪಿಯನ್ನು  ಈಶಾನ್ಯ ಸಿಇಎನ್ ಠಾಣೆ ಪೊಲೀಸರು  ಬಂಧಿಸಿದ್ದಾರೆ. ಸಮರ್ ಪರಿಮಣಿಕನ ಬಂಧಿತ ಆರೋಪಿ. ಪಶ್ಚಿಮ ಬಂಗಾಳ ಮೂಲದವನಾದ ಆರೋಪಿ ಸಮರ್ ಪರಿಮಣಿಕನನ್ನು ಬೆಂಗಳೂರಿನ ಹಲಸೂರಿನ ಬಾಡಿಗೆ ಮನೆಯಲ್ಲಿ ಬಂಧಿಸಲಾಗಿದ್ದು, ಈತ ಮಹಿಳೆಯ ಖಾಸಗಿ ವಿಡಿಯೋ ತೋರಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ. ಅಷ್ಟೇ ಅಲ್ಲದೇ ಹಣ ನೀಡುವಂತೆ ಪದೇಪದೆ ಪೀಡಿಸುತ್ತಿದ್ದ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Bangalore temple : ದೇವಸ್ಥಾನದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ಧರ್ಮದರ್ಶಿ ಬಂಧನ


ಪರಿಮಣಿಕನ ಒತ್ತಡಕ್ಕೆ ಮಹಿಳೆ ಮಣಿಯದಿದ್ದಾಗ ಆಕೆಯ ಖಾಸಗಿ ವಿಡಿಯೋ ವೈರಲ್​ ಮಾಡಿದ್ದಾನೆ. ಹೀಗಾಗಿ ಸಂತ್ರಸ್ಥೆಯ ದೂರಿನ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಡಿಗೇಹಳ್ಳಿಯ ಬ್ಯೂಟಿ ಪಾರ್ಲರ್ ವೊಂದರಲ್ಲಿ ಕೋರ್ಸ್ ಕಲಿಯಲು ಬಂದಿದ್ದ ಮಹಿಳೆಗೆ ಆರೋಪಿ ಸಮರ್  ಗ್ರಾಹಕನಾಗಿ ಬಂದು ಪರಿಚಯವಾಗಿದ್ದ. ಒಂದೂವರೆ ವರ್ಷದ ಪರಿಚಯ ಸ್ನೇಹವಾಗಿ  ಮಹಿಳೆಯ ಖಾಸಗಿ ಫೋಟೋ, ವಿಡಿಯೋವನ್ನು ಸಂಗ್ರಹಿಸಿದ್ದ. ನಂತರ ಹೆಚ್ಚು ಹಣ ಸಂಪಾದನೆ ಆಮಿಷವೊಡ್ಡಿದ್ದ ಆರೋಪಿ ಡ್ಯಾನ್ಸ್​ ಬಾರ್​ಗೂ ಸೇರಿಸಿದ್ದ. 


ಸಮರ್​ ಕಿರುಕುಳ ಸಹಿಸಲಾಗದೇ ಪಶ್ಚಿಮ ಬಂಗಾಳಕ್ಕೆ ಮಹಿಳೆ ತೆರಳಿ ಬೆರೋಬ್ಬ ಯುವಕನ ಜೊತೆ ವಿವಾಹವಾಗಿದ್ದಳು. 6 ತಿಂಗಳ ಹಿಂದೆ ಮತ್ತೆ ಬೆಂಗಳೂರಿಗೆ ಬಂದು ಪತಿ ಜತೆ ವಾಸವಾಗಿದ್ದಳು. ಮಹಿಳೆ ಹಿಂದಿರುಗಿದ ವಿಷಯ ತಿಳಿದ ಆರೋಪಿ ಸಮರ್ ಆಕೆಯ ಖಾಸಗಿ ವಿಡಿಯೋ ತೋರಿಸಿ ಬ್ಲಾಕ್​ಮೇಲ್​ ಮಾಡಿದ್ದಾನೆ. ಹಣ ನೀಡಲು, ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಾಗ ಖಾಸಗಿ ವಿಡಿಯೋ ವೈರಲ್​ ಮಾಡಿದ್ದಾನೆ. ನೊಂದ ಮಹಿಳೆ  ಈಶಾನ್ಯ ವಿಭಾಗದ ಸಿಇಎನ್​ ಠಾಣೆಗೆ ಮಹಿಳೆ ದೂರು ನೀಡಿದ್ದರಿಂದ ಆರೋಪಿ ಸಮರ್ ಪರಿಮಣಿಕನನ್ನು ಸಿಇಎನ್​ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.


ಇದನ್ನೂ ಓದಿ : ಕೊಲೆ ಮಾಡಿ ಬೈಕ್‌ನಲ್ಲಿ ಹೆಣ ಸಾಗಿಸಿದ ಹಂತಕರು: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.