ಬಹುಮಾನದ ಹೆಸರಿನಲ್ಲಿ ಬರೋಬ್ಬರಿ ₹52.67 ಲಕ್ಷ ವಂಚನೆ; ಆನ್‌ಲೈನ್ ವಂಚನೆ ಎಚ್ಚರ.. ಎಚ್ಚರ..!
Bagalkote Crime News: ಆರಂಭದಲ್ಲಿ ಸ್ವಲ್ಪ ಹಣ ಕಟ್ಟಿಸಿಕೊಳ್ಳುವ ವಂಚಕರು, ವಿವಿಧ ಹಂತಗಳಲ್ಲಿ ಲಕ್ಷ ಲಕ್ಷ ಹಣ ಕಟ್ಟಿಸಿಕೊಳ್ಳುತ್ತಾರೆ. ಯಾವುದೇ ರೀತಿ ಹಣ ವಾಪಸ್ ನೀಡದಿರುವುದರಿಂದ ಮೋಸ ಹೋಗಿದ್ದು ಗೊತ್ತಾಗಿದೆ.
Bagalkote Crime News: ಬಹುಮಾನದ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ₹52.67 ಲಕ್ಷ ವಂಚಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ನಿಮಗೆ ₹15.51 ಲಕ್ಷ ಬಹುಮಾನ ಬಂದಿದೆ ಅಂತಾ ಹೇಳಿ ₹52.67 ಲಕ್ಷ ವಂಚನೆ ಮಾಡಲಾಗಿದೆ.
ಹುನಗುಂದ ನಿವಾಸಿ, ಕಾರ್ಪೆಂಟರ್ ಆಗಿರುವ ವ್ಯಕ್ತಿಯೊಬ್ಬರಿಗೆ ವಿವಿಧ ರೀತಿಯ ಸುಳ್ಳು ಹೇಳಿ 8 ತಿಂಗಳಲ್ಲಿ ವಿವಿಧ ಖಾತೆಗಳಿಗೆ ಹಣ ಜಮಾ ಮಾಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಕಂಪನಿಯ 8ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ನಿಮಗೆ ₹15.51 ಲಕ್ಷ ಬಹುಮಾನ ಬಂದಿದೆ ಎಂದು ವಂಚನೆಗೊಳಗಾದ ವ್ಯಕ್ತಿಗೆ ನಂಬಿಸಲಾಗಿತ್ತು.
ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ₹2,100; ವರ್ಷಕ್ಕೆ 2 ಉಚಿತ LPG ಸಿಲಿಂಡರ್..!
ವಂಚಕರ ಮಾತನ್ನು ನಂಬಿದ ಆ ವ್ಯಕ್ತಿ ಹಾಗೂ ಅವರ ಪತ್ನಿ, ಬಹುಮಾನದ ಹಣ ಪಡೆಯಲು ಮುಂದಾಗುತ್ತಾರೆ. ಈ ಬಹುಮಾನದ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಲು ವಿವಿಧ ಶುಲ್ಕ ಹಾಗೂ ತೆರಿಗೆ ಕಟ್ಟಬೇಕೆಂದು ನಂಬಿಸಲಾಗುತ್ತದೆ.
ಆರಂಭದಲ್ಲಿ ಸ್ವಲ್ಪ ಹಣ ಕಟ್ಟಿಸಿಕೊಳ್ಳುವ ವಂಚಕರು, ವಿವಿಧ ಹಂತಗಳಲ್ಲಿ ಲಕ್ಷ ಲಕ್ಷ ಹಣ ಕಟ್ಟಿಸಿಕೊಳ್ಳುತ್ತಾರೆ. ಯಾವುದೇ ರೀತಿ ಹಣ ವಾಪಸ್ ನೀಡದಿರುವುದರಿಂದ ಮೋಸ ಹೋಗಿದ್ದು ಗೊತ್ತಾಗಿದೆ. ಕೂಡಲೇ ಬಾಗಲಕೋಟೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ: ಪ್ರತಿಪಕ್ಷ ನಾಯಕ ಆರ್. ಅಶೋಕ
ಆನ್‌ಲೈನ್ ವಂಚನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆನ್‌ಲೈನ್ ವಂಚನೆ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಅಂತಾ ಖಾಕಿಪಡೆ ಸಲಹೆ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ