Diwali 2020: ಈ ದೀಪಾವಳಿ ವಾಸ್ತುಶಾಸ್ತ್ರದ ಪ್ರಕಾರ ತೋರಣ ಹಚ್ಚಿ, ಸಫಲತೆ ಹಾಗೂ ಸಮೃದ್ಧಿಯ ಬಾಗಿಲು ತೆರೆಯಿರಿ
ದೀಪಾವಳಿಯ ಶುಭ ದಿನದಂದು, ಮನೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ವಿವಿಧ ರೀತಿಯ ತೋರಣಗಳಿಂದ ಅಲಂಕರಿಸಲಾಗುತ್ತದೆ. ಇದರಿಂದ ಲಕ್ಷ್ಮಿ ದೇವಿಯು ಬಂದಾಗ ಆಕೆಗೆ ಭರ್ಜರಿ ಸ್ವಾಗತ ನೀಡಿದಂತಾಗುತ್ತದೆ ಮತ್ತು ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.
ನವದೆಹಲಿ: ಐದು ದಿನಗಳ ದೀಪೋತ್ಸವದ ಹಬ್ಬ ಕದತಟ್ಟಲು ದಿನಗಣನೆ ಆರಂಭವಾಗಿದೆ. ಇದಕ್ಕಾಗಿ ಜನರು ಎಲ್ಲಾ ರೀತಿಯ ಸಿದ್ಧತೆಗಳಲ್ಲಿ ನಿರತರಾಗಿದ್ದಾರೆ. ಮನೆ ಸ್ವಚ್ಛಗೊಳಿಸುವಿಕೆಯಿಂದ ಹಿಂದಿದು ಅಲಂಕಾರದವರೆಗೆ ಎಲ್ಲಾ ರೀತಿಯ ಕೆಲಸ ನಡೆಯುತ್ತಿದೆ. ಕೆಲವರು ಹೊಸ ಬಣ್ಣಗಳಿಂದ ಮನೆಯನ್ನು ಅಲಂಕರಿಸುತ್ತಿದ್ದರೆ, ಉಳಿದವರು ಮತ್ತು ಕೆಲವರು ಪ್ರಕಾಶಮಾನವಾದ ದೀಪಗಳ ಮಾಲೆಗಳಿಂದ ಮನೆಯನ್ನು ಸಿನ್ಗರಿಸುತ್ತಿದ್ದಾರೆ. ದೀಪಾವಳಿಯಂದು ವಿವಿಧ ರೀತಿಯ ತೋರನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.
ಇದನ್ನು ಓದಿ- ಮನೆಯಲಿ ಸುಖ-ಶಾಂತಿ ಹಾಗೂ ಧನ-ಧಾನ್ಯ ಅಭಿವೃದ್ಧಿಗೆ ಮನೆಯ ಮುಖ್ಯದ್ವಾರದ ಕಾಳಜಿ ವಹಿಸಿ
ದೀಪಾವಳಿಯ ಶುಭ ದಿನದಂದು ಮನೆಯ ಕಿಟಕಿ ಹಾಗೂ ಬಾಗಿಲುಗಳನ್ನು ವಿವಿಧ ರೀತಿಯ ತೋರಣಗಳಿಂದ ಅಲಂಕರಿಸಲಾಗುತ್ತದೆ. ಇದರಿಂದ ಲಕ್ಷ್ಮಿ ದೇವಿಯು ಮನೆಗೆ ಬಂದಾಗ ಆಕೆಗೆ ಭರ್ಜರಿ ಸ್ವಾಗತ ನೀಡಿದಂತಾಗುತ್ತದೆ ಮತ್ತು ದೇವಿ ಲಕ್ಷ್ಮಿಯ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಯಾವ ತೋರಣ ಎಲ್ಲಿ ಹಚ್ಚಬೇಕು?
- ಒಂದು ವೇಳೆ ನಿಮ್ಮ ಮನೆಯ ಮುಖ್ಯದ್ವಾರ ಪೂರ್ವ ದಿಕ್ಕಿಗೆ ಮುಖ ಮಾಡಿದ್ದರೆ, ಹಸಿರು ಬಣ್ಣದ ಹೂವುಗಳು ಹಾಗೂ ಎಲೆಗಳಿಂದ ತಯಾರಿಸಲಾಗುವ ತೋರಣವನ್ನು ಹಚ್ಚಿ. ಇದರಿಂದ ಮನೆಯಲ್ಲಿ ಸದಾ ಸುಖ-ಸಮೃದ್ಧಿ ನೆಲೆಸಿರುತ್ತದೆ. ಇದಲ್ಲದೆ ಮಾವಿನ ಎಲೆ ಅಥವಾ ಅಶೋಕಾ ಮರದ ಎಲೆಗಳ ತೋರಣವನ್ನು ನೀವು ಬಳಸಬಹುದು.
ಇದನ್ನು ಓದಿ- ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಲು ಈ Vastu ಟಿಪ್ಸ್ ಗಳನ್ನು ನೆನಪಿಡಿ
- ವಾಸ್ತುಶಾಸ್ತ್ರದ(Vastu Shastra) ಪ್ರಕಾರ ಉತ್ತರ ದಿಕ್ಕನ್ನು ಧನದ ದಿಕ್ಕು ಎಂದು ಹೇಳಲಾಗುತ್ತದೆ ಹಾಗೂ ನೀಲಿ ಬಣ್ಣ ಅಥವಾ ಆಕಾಶ ನೀಲಿ ಬಣ್ಣ ಈ ದಿಕ್ಕಿನ ಶುಭ ಭಂನ ಎಂದು ಹೇಳಲಾಗುತ್ತದೆ. ಒಂದು ವೇಳೆ ನಿಮ್ಮ ಮನೆಯ ಮುಖ್ಯದ್ವಾರ ಉತ್ತರ ದಿಕ್ಕಿನಲ್ಲಿದ್ದರೆ, ಆಕಾಶ ನೀಲಿ ಬಣ್ಣದ ಹೂವುಗಳಿಂದ ತಯಾರಿಸಲಾಗಿರುವ ತೋರಣವನ್ನು ಮನೆ ಬಾಗಿಲಿಗೆ ಬಳಸಿ. ಒಂದು ವೇಳೆ ನಿಮಗೆ ತಾಜಾ ಹೂಗಳು ಸಿಗದೇ ಹೋದಲ್ಲಿ ನಕಲಿ ಅಥವಾ ಪ್ಲಾಸ್ಟಿಕ್ ನಿಂದ ತಯಾರಿಸಲಾಗಿರುವ ಹೂವುಗಳನ್ನು ಸಹ ನೀವು ಬಳಸಬಹುದು.
ಇದನ್ನು ಓದಿ- Vastu Shastra: ಮನೆಯಲ್ಲಿ ಧನವೃಷ್ಟಿ ತರುತ್ತವೆ ಈ ಸಸ್ಯಗಳು, ನೀವು ನಿಮ್ಮ ಮನೆಯಲ್ಲಿ ನೆಟ್ಟು ಧನವಂತರಾಗಿ
- ಒಂದು ವೇಳೆ ನಿಮ್ಮ ಮನೆಯ ಪ್ರವೇಶ ದ್ವಾರ ದಕ್ಷಿಣ ದಿಕ್ಕಿನಲ್ಲಿದ್ದರೆ, ಕೆಂಪು ಅಥವಾ ನಾರಂಗಿ ಬಣ್ಣದ ಹೂವುಗಳಿಂದ ತಯಾರಿಸಲಾಗಿರುವ ತೋರಣವನ್ನು ಬಳಸಿ. ಇದರಿಂದ ದೇವಿ ಲಕ್ಷ್ಮಿ ಮನೆಗೆ ಆಗಮಿಸುತ್ತಾಳೆ ಹಾಗೂ ಮನೆಯ ಸದಸ್ಯರು ಆರ್ಥಿಕವಾಗಿ ಸಮೃದ್ಧರಾಗುತ್ತಾರೆ ಎನ್ನಲಾಗಿದೆ.
- ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕನ್ನು ಅತ್ಯಂತ ಮಹತ್ವಪೂರ್ಣ ದಿಕ್ಕು ಎಂದು ಹೇಳಲಾಗುತ್ತದೆ ಹಾಗೂ ಈ ದಿಕ್ಕಿನಲ್ಲಿ ಹಳದಿ ಬಣ್ಣದ ಹೂವುಗಳಿಂದ ತಯಾರಿಸಲಾಗಿರುವ ತೋರಣ ಬಳಸುವುದು ಶುಭ ಫಲ ನೀಡುತ್ತದೆ ಎನ್ನಲಾಗುತ್ತದೆ. ಇದರಿಂದ ಉನ್ನತಿಯ ಮಾರ್ಗ ತೆರೆದುಕೊಳ್ಳುತ್ತದೆ. ಇನ್ನೊಂದೆಡೆ ಕೆಲ ವಿಶೇಷ ಸಂಗತಿಗಳ ಕುರಿತು ಕೂಡ ಗಮನ ಹರಿಸುವುದು ಆವಶ್ಯಕವಾಗಿದೆ.
ಈ ದಿಕ್ಕಿನಲ್ಲಿ ಧಾತುವಿನಿಂದ ತಯಾರಿಸಲಾಗಿರುವ ತೋರಣ ಬಳಸಬೇಡಿ
ಪೂರ್ವ ಹಾಗೂ ದಕ್ಷಿಣ ದಿಕ್ಕಿನಲ್ಲಿ ಧಾತುವಿನಿಂದ ತಯಾರಿಸಲಾಗಿರುವ ತೋರಣವನ್ನು ಬಳಸಬೇಡಿ. ಪಶ್ಚಿಮ ಹಾಗೂ ಉತ್ತರ ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರ ಇದ್ದರೆ, ಧಾತುವಿನಿಂದ ತಯಾರಿಸಲಾಗಿರುವ ತೋರಣ ಬಳಸಬೇಡಿ. ಪಶ್ಚಿಮ ದಿಕ್ಕಿನಲ್ಲಿ ಕಟ್ಟಿಗೆಯನ್ನು ಬಳಸಿ ತಯಾರಿಸಲಾಗಿರುವ ತೋರಣವನ್ನು ಬಳಸಬೇಡಿ.