Vastu Shastra: ಮನೆಯಲ್ಲಿ ಧನವೃಷ್ಟಿ ತರುತ್ತವೆ ಈ ಸಸ್ಯಗಳು, ನೀವು ನಿಮ್ಮ ಮನೆಯಲ್ಲಿ ನೆಟ್ಟು ಧನವಂತರಾಗಿ

ನಿಸರ್ಗ ನಮಗೆ ಹಲವಾರು ಗಿಡ ಮೂಲಿಕೆಗಳನ್ನು ನೀಡಿದ್ದು, ಅವುಗಳಲ್ಲಿ ನಾವು ಕೆಲ ಸಸಿಗಳನ್ನು ಹಣ ನೀಡುವ ಸಸಿಗಳೆಂದರೆ ತಪ್ಪಾಗಲಾರದು. ನಮ್ಮ ವಾಸ್ತುಶಾಸ್ತ್ರದಲ್ಲಿಯೂ ಕೂಡ ಇಂತಹ ಹಲವಾರು ಸಸ್ಯಗಳ ಕುರಿತು ಮಾಹಿತಿ ನೀಡಲಾಗಿದ್ದು, ಈ ಸಸ್ಯಗಳು ಧನ, ಸಮೃದ್ಧಿ ಹಾಗೂ ಆರ್ಥಿಕ ಸಂಪನ್ನತೆಯ ಜೊತೆಗೆ ನೇರ ಸಂಬಂಧ ಹೊಂದಿವೆ ಎನ್ನಲಾಗಿದೆ.

Last Updated : Nov 4, 2020, 03:37 PM IST
  • ನಿಸರ್ಗ ನಮಗೆ ಹಲವಾರು ಗಿಡ ಮೂಲಿಕೆಗಳನ್ನು ನೀಡಿದ್ದು, ಅವುಗಳಲ್ಲಿ ನಾವು ಕೆಲ ಸಸಿಗಳನ್ನು ಹಣ ನೀಡುವ ಸಸಿಗಳೆಂದರೆ ತಪ್ಪಾಗಲಾರದು.
  • ವಾಸ್ತುಶಾಸ್ತ್ರದಲ್ಲಿಯೂ ಕೂಡ ಇಂತಹ ಹಲವಾರು ಸಸ್ಯಗಳ ಕುರಿತು ಮಾಹಿತಿ ನೀಡಲಾಗಿದೆ.
  • ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಈ ಸಸಿಗಳಿಗೆ ವಿಶೇಷ ಮಹತ್ವ ನೀಡಲಾಗಿದೆ.
Vastu Shastra: ಮನೆಯಲ್ಲಿ ಧನವೃಷ್ಟಿ ತರುತ್ತವೆ ಈ ಸಸ್ಯಗಳು, ನೀವು ನಿಮ್ಮ ಮನೆಯಲ್ಲಿ ನೆಟ್ಟು ಧನವಂತರಾಗಿ title=

ನವದೆಹಲಿ: ತಮ್ಮ ಮನೆಯನ್ನು ಮತ್ತಷ್ಟು ಸುಂದರವಾಗಿಸಲು ಜನರು ಹಲವಾರು ಕಸರತ್ತುಗಳನ್ನು ನಡೆಸುತ್ತಾರೆ. ಇದರದೇ ಒಂದು ಭಾಗವಾಗಿ ತಮ್ಮ ಮನೆಯನ್ನು ಸಿಂಗರಿಸಲು ಜನರು ತಮ್ಮ ಮನೆಯಲ್ಲಿ ಇಂಡೋರ್ ಮತ್ತು ಔಟ್ ಡೋರ್ ಸಸಿಗಳನ್ನು ನೆಡುತ್ತಾರೆ. ಆದರೆ, ನಿಸರ್ಗ ನಮಗೆ ಹಲವಾರು ಗಿಡ ಮೂಲಿಕೆಗಳನ್ನು ನೀಡಿದ್ದು, ಅವುಗಳಲ್ಲಿ ನಾವು ಕೆಲ ಸಸಿಗಳನ್ನು ಹಣ ನೀಡುವ ಸಸಿಗಳೆಂದರೆ ತಪ್ಪಾಗಲಾರದು. ನಮ್ಮ ವಾಸ್ತುಶಾಸ್ತ್ರ (Vastu Shastra)ದಲ್ಲಿಯೂ ಕೂಡ ಇಂತಹ ಹಲವಾರು ಸಸ್ಯಗಳ ಕುರಿತು ಮಾಹಿತಿ ನೀಡಲಾಗಿದ್ದು, ಈ ಸಸ್ಯಗಳು ಧನ, ಸಮೃದ್ಧಿ ಹಾಗೂ ಆರ್ಥಿಕ ಸಂಪನ್ನತೆಯ ಜೊತೆಗೆ ನೇರ ಸಂಬಂಧ ಹೊಂದಿವೆ ಎನ್ನಲಾಗಿದೆ. ಇಂದಿನ ನಾವು ನಮ್ಮ ರಿಪೋರ್ಟ್ ನಲ್ಲಿ ಅಂತಹುದೇ ಕೆಲ ಸಸ್ಯಗಳ ಕುರಿತು ನಿಮಗೆ ಮಾಹಿತಿ ನೀಡಲಿದ್ದೇವೆ.

ಮನಿಪ್ಲಾಂಟ್
ಇಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿ ಮನಿಪ್ಲಾಂಟ್ ನೆಡುವುದು ಆವಶ್ಯಕವಾಗಿದೆ. ಜನರು ತಮ್ಮ ತಮ್ಮ ಮನೆಯಲ್ಲಿ ಈ ಸಸಿಯನ್ನು ತಪ್ಪದೆ ನೆಡುತ್ತಾರೆ. ಏಕೆಂದರೆ ನೋಡಲು ತುಂಬಾ ಸುಂದರವಾಗಿರುವ ಈ ಸಸ್ಯವನ್ನು ನೀವು ಇಂಡೋರ್ ಅಥವಾ ಔಟ್ ಡೋರ್ ಎಲ್ಲಿ ಬೇಕಾದರೂ ನೆಡಬಹುದು. ಆದರೆ, ಇದರ ಜೊತೆಗೆ ಈ ಸಸ್ಯವನ್ನು ಮನೆಯ ಆರ್ಥಿಕ ಸಂಪನ್ನತೆಯ ಜೊತೆಗೂ ಕೂಡ ಸಂಬಂಧ ಕಲ್ಪಿಸಲಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಈ ಸಸ್ಯ ಇರುವ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲ ಎನ್ನಲಾಗಿದೆ.

ಇದನ್ನು ಓದಿ- ಕಾಯಿಲೆಗಳ ಜೊತೆಗೆ ವಾಸ್ತುದೋಷದಿಂದಲೂ ಕೂಡ ಮುಕ್ತಿ ನೀಡುತ್ತವೆ ಈ ಸಸ್ಯಗಳು

ಶಮಿ ಮರ
ವಾಸ್ತುಶಾಸ್ತ್ರದ ಪ್ರಕಾರ ಶಮಿ ಮರ ಕೂಡ ಉತ್ತಮ ಎಂದು ಹೇಳಲಾಗಿದೆ. ಜೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಈ ಮರಕ್ಕೆ ವಿಶೇಷ ಮಹತ್ವವಿದೆ. ಈ ಮರದ ಹೂವು ದೇವಾದಿ ದೇವ ಶಿವನಿಗೆ ಪ್ರಿಯ ಎಂದು ಹೇಳಲಾಗುತ್ತದೆ. ಈ ಹೂವನ್ನು ಶಿವನಿಗೆ ಅರ್ಪಿಸಿದರೆ, ಸುಖ -ಸಮೃದ್ಧಿ ಹೆಚ್ಚಾಗುತ್ತದೆ ಮತ್ತು ಇದರಿಂದ ಈ ಮರವನ್ನು ಹಣದ ವೃಕ್ಷ ಎಂದೂ ಕೂಡ ಕರೆಯಲಾಗುತ್ತದೆ.

ಇದನ್ನು ಓದಿ- ಮನೆಯಲಿ ಸುಖ-ಶಾಂತಿ ಹಾಗೂ ಧನ-ಧಾನ್ಯ ಅಭಿವೃದ್ಧಿಗೆ ಮನೆಯ ಮುಖ್ಯದ್ವಾರದ ಕಾಳಜಿ ವಹಿಸಿ

ಮನಿ ಟ್ರೀ
ಅಮೇರಿಕಾದಲ್ಲಿ ಹೆಚ್ಚಾಗಿ ಕಂಡುಬರುವ ಈ ಮರಕ್ಕೆ ವಾಸ್ತುಶಾಸ್ತ್ರದಲ್ಲಿ ವಿಶೇಷ ಮಹತ್ವವಿದೆ. ಆರ್ಥಿಕ ಲಾಭಕ್ಕಾಗಿ ಜನರು ಈ ಮರವನ್ನು ತಮ್ಮ ಮನೆಯಲ್ಲಿ ಬೆಳೆಸುತ್ತಾರೆ ಎನ್ನಲಾಗುತ್ತದೆ. ನೀವು ಕೂಡ ಈ ಮರವನ್ನು ನಿಮ್ಮ ಮನೆಯ ಆವರಣದಲ್ಲಿ ಬೆಳೆಸಬಹುದಾಗಿದೆ.

ಇದನ್ನು ಓದಿ- ನೀವೂ ಸಹ ಸುಖ-ಸಮೃದ್ಧಿ ಜೀವನ ಬಯಸಿದರೆ ಇಂದೇ ನಿಮ್ಮ ಮನೆಯ ವಾಸ್ತು ದೋಷ ಸರಿಪಡಿಸಿ

ಅಶ್ವಗಂಧ
ವಾಸ್ತುಶಾಸ್ತ್ರದಲ್ಲಿ ಅಶ್ವಗಂಧ ಸಸಿಯನ್ನುಅತ್ಯಂತ ಸಮೃದ್ಧಶೀಲ ಸಸಿ ಎಂದು ಪರಿಗಣಿಸಲಾಗಿದೆ. ಇದು ಸುಖ ಮತ್ತು ಸಮೃದ್ಧಿಯ ದ್ಯೋತಕವಾಗಿದೆ. ಅಷ್ಟೇ ಅಲ್ಲ ಇದನ್ನು ನೀವು ಔಷಧಿಯ ರೂಪದಲ್ಲಿಯೂ ಕೂಡ ಬಳಸಬಹುದಾಗಿದೆ. 

ಇದನ್ನು ಓದಿ- Vastu Shastraದ ನಿಯಮಗಳ ಅನುಸಾರ Kitchen ನಿರ್ಮಿಸಿ, ಕೌಟುಂಬಿಕ ಆರೋಗ್ಯ ಸೌಖ್ಯ ನಿಮ್ಮದಾಗಿಸಿಕೊಳ್ಳಿ

ಶ್ವೆತಾರ್ಕ್
ಆಡುಭಾಷೆಯಲ್ಲಿ ಈ ಸಸಿಯನ್ನು ಹಾಲಿನ ಸಸಿ ಎಂದು ಹೇಳಲಾಗುತ್ತದೆ. ಇದು ಸೌಭಾಗ್ಯದ ಸಂಕೇತವೂ ಹೌದು. ಆದರೆ, ಬಿಳಿ ಪದಾರ್ಥ ಹೊರ ಹಾಕುವ ಯಾವುದೇ ಸಸ್ಯವನ್ನು ಮನೆಯಲ್ಲಿ ಇಡಬಾರದು ಎಂದೂ ಕೂಡ ಹೇಳಲಾಗುತ್ತದೆ. ಹೀಗಾಗಿ ಈ ಸಸ್ಯವನ್ನು ನೀವು ಮನೆಯ ಒಳಗೆ ತರದೇ ಬಾಲ್ಕನಿ ಅಥವಾ ಹೊರಾವರಣದಲ್ಲಿ ನೆಡಬಹುದು.

Trending News