ಕೇತುವಿನ ರಾಶಿ ಪರಿವರ್ತನೆಯಿಂದ ಕಿರಿಕಿರಿಗೋಳ್ಳಬೇಡಿ, ಈ ಉಪಾಯ ಅನುಸರಿಸಿ
ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ರಾಹು ಮತ್ತು ಕೇತು ಗ್ರಹಗಳನ್ನು ಪಾಪ ಗ್ರಹಗಳೆಂದು ಪರಿಗಣಿಸಲಾಗಿದ್ದು, ಇವೆರಡು ಯಾವಾಗಲು ಗ್ರಹಗಳು ವಕ್ರ ನಡೆಯನ್ನು ಅನುಸರಿಸುತ್ತವೆ. ಇಂದು ಸೆಪ್ಟೆಂಬರ್ 23, 18 ತಿಂಗಳುಗಳ ಬಳಿಕ ಇವರದು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಿವೆ.
ನವದೆಹಲಿ: ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ರಾಹು ಮತ್ತು ಕೇತು ಗ್ರಹಗಳನ್ನು ಪಾಪ ಗ್ರಹಗಳೆಂದು ಪರಿಗಣಿಸಲಾಗಿದ್ದು, ಇವೆರಡು ಯಾವಾಗಲು ಗ್ರಹಗಳು ವಕ್ರ ನಡೆಯನ್ನು ಅನುಸರಿಸುತ್ತವೆ. ಇಂದು ಸೆಪ್ಟೆಂಬರ್ 23, 18 ತಿಂಗಳುಗಳ ಬಳಿಕ ಇವರದು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಿವೆ. ರಾಹು ವಕ್ರ ನಡೆಯ ಮೂಲಕ ವೃಷಭ ರಾಶಿಗೆ ಪ್ರವೇಶಿಸುತ್ತಿದ್ದರೆ, ಕೇತು ವಕ್ರವಾಗಿ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಈ ಎರಡು ಗ್ರಹಗಳ ರಾಶಿ ಪರಿವರ್ತನೆ ನಿಶ್ಚಿತವಾಗಿ ದೇಶ, ಸಮಾಜ ಹಾಗೂ ವಿಭಿನ್ನ ರಾಶಿಗಳ ಜಾತಕಗಳ ಮೇಲೆ ಪ್ರಭಾವ ಬೀರಲಿದೆ.
ಇದನ್ನು ಓದಿ- ರಾಶಿಗಳ ಅನುಸಾರ ನಿಮ್ಮ ದುರ್ಬಲತೆ ಏನು? ತಿಳಿದುಕೊಳ್ಳಿ... ಲಾಭ ನಿಮ್ಮದಾಗಲಿದೆ
ಕೇತುವಿನ ಪ್ರಭಾವ
ಪೌರಾಣಿಕದಲ್ಲಿ ಕೆತುವನ್ನು ರಾಹು ಗ್ರಹದ ಶರೀರ ಎಂದು ಹೇಳಲಾಗಿದೆ. ಸಮುದ್ರ ಮಂಥನದ ವೇಳೆ ಮೋಹಿನಿ ಅವತಾರದಲ್ಲಿ ಬರುವ ವಿಷ್ಣು ರಾಹುವಿನ ಮುಂಡ ಶರೀರದಿಂದ ಬೇರ್ಪಡಿಸುತ್ತಾನೆ ಎಂದು ಉಲ್ಲೇಖಿಸಲಾಗಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಕೇತು ಕೂಡ ಮಂಗಳನ ಹಾಗೆಯೇ ಪ್ರಭಾವ ಬೀರುತ್ತಾನೆ ಎನ್ನಲಾಗಿದೆ. ಒಂದು ವೇಳೆ ನಿಮ್ಮ ಜಾತಕದಲ್ಲಿ ಕೇತು ಅಶುಭ ಫಲ ನೀಡುತ್ತಿದ್ದು ಹಾಗೂ ನೀವು ಹಲವು ರೀತಿಯ ಸಂಕಷ್ಟಗಳಿಂದ ಸುತ್ತುವರೆದಿದ್ದರೆ, ಕೇತುವಿನ ಕೆಟ್ಟ ಪ್ರಭಾವದಿಂದ ಪಾರಾಗಲು ನೀವು ಹಲವು ಉಪಾಯಗಳನ್ನು ಕೈಗೊಳ್ಳಬೇಕಾಗಿದೆ.
ಇದನ್ನು ಓದಿ- ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಸಾಮರ್ಥ್ಯ ತಿಳಿದು ಜೀವನದಲ್ಲಿ ಮುಂದಕ್ಕೆ ಸಾಗಿ
ಕೇತುವಿನ ಪ್ರಭಾವದಿಂದ ಪಾರಾಗಲು ಈ ಉಪಾಯಗಳನ್ನು ಮಾಡಿ
ಕೇತುಗಳ ಕೆಟ್ಟ ಅಥವಾ ಋಣಾತ್ಮಕ ಪ್ರಭಾವದಿಂದ ಪಾರಾಗಲು ಈ ಕೆಳಗಿನ ಉಪಾಯಗಳನ್ನು ನೀವು ಪ್ರಯತ್ನಿಸಬಹುದು.
1. ಕೇತುವಿನ ಕಷ್ಟಗಳನ್ನು ತೊಡೆದುಹಾಕಲು ಗಣಪತಿ ಪೂಜೆಯನ್ನು ಅತ್ಯಂತ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಇಂದಿನಿಂದ ಅಂದರೆ ಬುಧವಾರದಿಂದ, ನೀವು ಗಣಪತಿಯ ಅಥರ್ವಶಿರ್ಷ ಪಠಿಸಲು ಪ್ರಾರಂಭಿಸಿ. ಖಂಡಿತವಾಗಿಯೂ ಗಣಪತಿ ನಿಮ್ಮ ಜೀವನದಿಂದ ಎಲ್ಲ ಅಡೆತಡೆಗಳನ್ನು ಹಾಗೂ ಸಂಕಷ್ಟಗಳನ್ನು ತೊಡೆದುಹಾಕುತ್ತಾರೆ ಹಾಗೂ ಶುಭ ಫಲಿತಾಂಶಗಳನ್ನು ಶುಭ ಫಲಗಳನ್ನುನೀಡುತ್ತಾರೆ.
2. ಸಾಧ್ಯವಾದರೆ, ಕಪ್ಪು ಹಸುವನ್ನು ಬ್ರಾಹ್ಮಣನಿಗೆ ದಾನ ಮಾಡಿ ಅಥವಾ ಅದರ ಸೇವೆ ಮಾಡಿ. ಮಹಾನಗರದಲ್ಲಿ ವಾಸಿಸುವವರಿಗೆ ಇದು ಸಾಧ್ಯವಾಗದಿದ್ದರೆ, ನೀವು ಹಣ ನೀಡುವ ಮೂಲಕ ಯಾವುದೇ ಗೌಶಲಾದಲ್ಲಿ ಹಸುವಿಗೆ ಮೇವನ್ನು ಪೂರೈಸಬಹುದು.
3. ಬಡವರು, ಅಸಹಾಯಕರು, ಅಂಗವಿಕಲರಿಗೆ ಆಹಾರ, ಹಣ ಇತ್ಯಾದಿಗಳನ್ನು ದಾನ ಮಾಡಿ. ಅವರನ್ನು ಎಂದಿಗೂ ಅವಮಾನಿಸಬೇಡಿ. ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ, ನಯವಾಗಿ ಕೈ ಜೋಡಿಸಿ.
4. ಸರೋವರ ಅಥವಾ ಕೊಳದಲ್ಲಿ, ಮೀನುಗಳಿಗೆ ಹಿಟ್ಟಿನಿಂದ ತಯಾರಿಸಲಾಗಿರುವ ಉಂಡೆಯನ್ನು ತಿನ್ನಿಸಿ. ಇದೇ ರೀತಿ, ಇರುವೆಗಳು ಎಲ್ಲಿ ಕಾಣಿಸಿಕೊಂಡರೂ ಅವುಗಳಿಗೆ ತಿನ್ನಲು ಹಿಟ್ಟು ಹಾಕಿ.
5. ಕಪ್ಪು-ಬಿಳಿ ನಾಯಿ ವಿಶೇಷವಾಗಿ ನಿಮ್ಮ ಆಹಾರದ ಸ್ವಲ್ಪ ಭಾಗವನ್ನು ತಿನ್ನಲು ಬಿಡಿ. ಇದು ಸಾಧ್ಯವಾಗದಿದ್ದರೆ, ಹರಿಯುವ ನೀರಿನಲ್ಲಿ ಕಪ್ಪು ಮತ್ತು ಬಿಳಿ ಎಳ್ಳನ್ನು ಹರಿಬಿಡಿ.
6. ಜಾತಕದಲ್ಲಿ ವಿನ ಅಶುಭಾತೆಯನ್ನು ತೊಡೆದು ಹಾಕಲು ಕೇತುವಿನ ವೈದಿಕ ಮತ್ತು ತಾಂತ್ರಿಕ ಮಂತ್ರವನ್ನು ಪಠಿಸಿ.
ಕೇತುವಿನ ಮಂತ್ರ
ಕೇತು ಪ್ರಭಾವವನ್ನು ಕಡಿಮೆ ಮಾಡಲು, ಹಲವು ರೀತಿಯ ಮಂತ್ರಗಳನ್ನು ಜಪಿಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆ ಮಂತ್ರಗಳ ಬಗ್ಗೆ ತಿಳಿಯೋಣ ಬನ್ನಿ.
ಕೇತುವಿನ ವೈದಿಕ ಮಂತ್ರ
ಓಂ ಕೇತು ಕೃಣ್ವನ್ನಕೆತವೇ ಪೇಷೋ ಮರ್ಯಾ ಅಪೇಶ ಸೆ. ಸುಮುಷದ್ಭಿರಜಾಯತಃ
ಕೇತುವಿನ ಪೌರಾಣಿಕ ಮಂತ್ರ
'ಪಲಾಶಪುಷ್ಪಸಂಕಾಶಃ ತಾರಕಾಗೃಹಮಸ್ತಕಂ
ರೌದ್ರಂ ರೌದ್ರಾತ್ಮಕಂ ಘೋರಂ ತಮ್ ಕೇತು ಪ್ರನಮಾಮ್ಯಹಮ್
ಕೇತುವಿನ ತಾಂತ್ರಿಕ ಮಂತ್ರ
ಓಂ ಸ್ತ್ರಂ ಸ್ತ್ರಿಂ ಸ್ತ್ರೌಂ ಸಃ ಕೆತವೇನಮಃ
ಕೇತುವಿನ ಏಕಾಕ್ಷರಿ ಮಂತ್ರ
ಓಂ ಕೆತವೇನಮಃ