ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಸಾಮರ್ಥ್ಯ ತಿಳಿದು ಜೀವನದಲ್ಲಿ ಮುಂದಕ್ಕೆ ಸಾಗಿ

ಜೋತಿಷ್ಯಶಾಸ್ತ್ರದಲ್ಲಿ ಜೀವನದ ಪ್ರತಿಯೊಂದು ಸಂಗತಿಗಳ ಕುರಿತು ಉಲ್ಲೇಖಿಸಲಾಗಿದೆ. ಹೀಗಾಗಿ ರಾಶಿಗೆ ಅನುಗುಣವಾಗಿ ನಿಮ್ಮಲ್ಲಿ ಅಡಗಿರುವ ಸಾಮರ್ಥ್ಯ ಏನು ಎಂಬುದನ್ನು ಅರಿತು ಜೀವನದಲ್ಲಿ ಮುಂದಕ್ಕೆ ಸಾಗಿ.

Last Updated : Sep 4, 2020, 01:38 PM IST
  • 1.ಜೋತಿಷ್ಯಶಾಸ್ತ್ರದಲ್ಲಿ ಜೀವನದ ಪ್ರತಿಯೊಂದು ಸಂಗತಿಯ ಉಲ್ಲೇಖವಿದೆ
    2.ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ವಿಶೇಷ ಶಕ್ತಿ ಇರುತ್ತದೆ.
    3.ರಾಶಿಗೆ ಅನುಗುಣವಾಗಿ ನಿಮ್ಮ ಶಕ್ತಿ ಎಂದು ತಿಳಿಯಿರಿ.
ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಸಾಮರ್ಥ್ಯ ತಿಳಿದು ಜೀವನದಲ್ಲಿ ಮುಂದಕ್ಕೆ ಸಾಗಿ title=

ನವದೆಹಲಿ: ಜೋತಿಷ್ಯಶಾಸ್ತ್ರ(Astrology)ದಲ್ಲಿ ಜೀವನದ ಪ್ರತಿಯೊಂದು ಸಂಗತಿಗಳ ಕುರಿತು ಉಲ್ಲೇಖಿಸಲಾಗಿದೆ. ಹೀಗಾಗಿ ರಾಶಿಗೆ ಅನುಗುಣವಾಗಿ ನಿಮ್ಮಲ್ಲಿ ಅಡಗಿರುವ ಸಾಮರ್ಥ್ಯ ಏನು ಎಂಬುದನ್ನು ಅರಿತು ಜೀವನದಲ್ಲಿ ಮುಂದಕ್ಕೆ ಸಾಗಿ. ಜೋತಿಷ್ಯಶಾಸ್ತ್ರದಲ್ಲಿ ಜನರ ವ್ಯಕ್ತಿತ್ವದಿಂದ ಹಿಡಿದು ಅವರ ಸ್ವಭಾವದಲ್ಲಿ ಅಡಗಿರುವ ವೀಕ್ ನೆಸ್ ಕುರಿತು ಕೂಡ ಉಲ್ಲೇಖಿಸಲಾಗಿದೆ. ಯಾವುದೇ ವ್ಯಕ್ತಿಯೊಬ್ಬನಲ್ಲಿರುವ ವಿಶೇಷ ಗುಣ ಮತ್ತೊಬ್ಬರ ವೀಕ್ ನೆಸ್ ಕೂಡ ಆಗಿರುವ ಸಾಧ್ಯತೆ ಇದೆ. ಕೊರೊನಾ ವೈರಸ್ ನ ಈ ಕಾಲ ಜನರ ಜೀವನದಲ್ಲಿ ಭಾರಿ ಪ್ರಮಾಣದ ಬದಲಾವಣೆಯನ್ನೇ ತಂದಿದೆ. ಹೀಗಾಗಿ ಮತ್ತಷ್ಟು ಗಟ್ಟಿಯಾಗಿ ಜೀವನದಲ್ಲಿ ಮುಂದುವರೆಯುವ ಅವಶ್ಯಕತೆ ಇದೆ. ಹಾಗಾದರೆ ಬನ್ನಿ ನಮ್ಮ ನಮ್ಮ ರಾಶಿಗಳಿಗೆ ಅನುಗುಣವಾಗಿ ನಮ್ಮ ಸಾಮರ್ಥ್ಯವನ್ನು ಅರಿತು ಜೀವನದಲ್ಲಿ ಮುಂದುವರೆಯೋಣ.

ಮೇಷ ರಾಶಿ: ಮೇಷ ರಾಶಿಯ ಜನರು ಸಾಹಸಿ, ದೃಢನಿಶ್ಚಯ, ಆತ್ಮವಿಶ್ವಾಸ ಹಾಗೂ ಉತ್ಸಾಹದಿಂದ ಕೂಡಿರುತ್ತಾರೆ. ತಮ್ಮ ಈ ಗುಣಗಳ ಕಾರಣ ಅವರು ಜೀವನದಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಾರೆ.

ವೃಷಭ ರಾಶಿ: ಈ ರಾಶಿಯ ಜನರ ಮೇಲೆ ನೀವು ಸುಲಭವಾಗಿ ಭರವಸೆಯನ್ನು ಇಡಬಹುದು. ಇವರು ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ. ಸಾಮಾನ್ಯವಾಗಿ ಇವರಿಗೆ ಸಂಗೀತ ಕೇಳುವುದು ಇಷ್ಟ. ಇವರು ತುಂಬಾ ಪ್ರಾಕ್ಟಿಕಲ್ ಆಗಿರುತ್ತಾರೆ.

ಮಿಥುನ ರಾಶಿ: ಇವರಲ್ಲಿ ಎಲ್ಲವನ್ನು ತಿಳಿದುಕೊಳ್ಳುವ ತೀವ್ರ ಇಚ್ಛೆ ಹೊಂದಿರುತ್ತಾರೆ. ಇವರು ತಮ್ಮ ಪ್ರಿಯ ವ್ಯಕ್ತಿಗಳ ಕಾಳಜಿ ವಹಿಸುತ್ತಾರೆ. ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಹಾಗೂ ಶೀಘ್ರದಲ್ಲಿಯೇ ಯಾವುದೇ ಒಂದು ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ.

ಕರ್ಕ ರಾಶಿ: ಇವರು ತುಂಬಾ ದಯಾವಾದಿಗಳಾಗಿರುತ್ತಾರೆ. ಇವರು ತುಂಬಾ ಭಾವುಕ ಜೀವಿಗಳು. ಆದರೆ, ಹಲವು ಬಾರಿ ಇವರು ತಮ್ಮ ಹತ್ತಿರದ ಜನರಿಂದ ಅಸುರಕ್ಷಿತತೆಯನ್ನು ಅನುಭವಿಸುತ್ತಾರೆ. 

ಸಿಂಹ ರಾಶಿ:  ಇವರು ತೀವ್ರ ಜೋಶ್ ಹೊಂದಿರುವ ವ್ಯಕ್ತಿಗಳು. ಇವರಲ್ಲಿ ಹಾಸ್ಯ ಪ್ರಜ್ಞೆ ಹೆಚ್ಚಾಗಿರುತ್ತದೆ. ತುಂಬಾ ರಚನಾತ್ಮಕರಾಗಿರುವ ಇವರು ಉದಾರ ಜೀವಿಗಳು. ಇವರ ಸಹಜ ಜ್ಞಾನ ತುಂಬಾ ಪ್ರಬಲವಾಗಿರುವ ಕಾರಣ ಇವರು ಏನು ಬೇಕಾದರೂ ಸಾಧಿಸಬಲ್ಲರು.

ಕನ್ಯಾ ರಾಶಿ: ತುಂಬಾ ಪ್ರಾಕ್ಟಿಕಲ್ ಆಗಿರುತ್ತಾರೆ. ತಮ್ಮ ಕೆಲಸ ಹಾಗೂ ಹತ್ತಿರದ ವ್ಯಕ್ತಿಗಳಿಗೆ ತುಂಬಾ ನಿಷ್ಟಾವಂತರಾಗಿರುತ್ತಾರೆ. ಇವರು ಕಷ್ಟಪಟ್ಟು ದುಡಿಯುವವರಾಗಿರುತ್ತಾರೆ. ವಿಶ್ಲೇಷಣೆ ಇವರ ಸ್ವಭಾವದಲ್ಲಿರುತ್ತದೆ  ಹಾಗೂ ಇವರು ದಯಾಶಾಲಿಗಳು.

ತುಲಾ ರಾಶಿ: ಇವರು ತುಂಬಾ ಸೋಶಿಯಲ್ ಆಗಿರುತ್ತಾರೆ. ನಿಸ್ಪಕ್ಷರಾಗಿರುತ್ತಾರೆ ಹಾಗೂ ತುಂಬಾ ಸಹಕಾರ ನೀವುವವರಾಗಿರುತ್ತಾರೆ. ಇವರಲ್ಲಿ ಬಲಿಷ್ಠ ರಾಜತಾಂತ್ರಿಕ ಗುಣಗಲಿವೆ. ತುಂಬಾ ಮೃದು ಸ್ವಭಾವದವರಾಗಿರುತ್ತಾರೆ.

ವೃಶ್ಚಿಕ ರಾಶಿ: ಇವರಲ್ಲಿ ತುಂಬಾ ಜೋಶ್ ಇರುತ್ತದೆ. ಈ ಕಾರಣದಿಂದ ಇವರು ಕೆಲವೊಮ್ಮೆ ತುಂಬಾ ಹಠವಾದಿಗಳಾಗಿರುತ್ತಾರೆ. ಇವರ ಬಳಿ ಸಂಪನ್ನೂಲಗಳ ಕೊರತೆ ಇರುವುದಿಲ್ಲ. ತಮ್ಮ ಕೆಲಸ ಹೇಗೆ ಮಾಡಬೇಕು ಎಂಬುದು ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ತುಂಬಾ ಸಾಹಸಿಗಳಾಗಿರುವ ಇವರು ಉತ್ತಮ ಸ್ನೇಹಿತರೂ ಕೂಡ ಆಗಿರುತ್ತಾರೆ.

ಧನು ರಾಶಿ: ಇವರ ಹಾಸ್ಯಪ್ರಜ್ಞೆ ತುಂಬಾ ಚೆನ್ನಾಗಿರುತ್ತದೆ. ಯಾವುದೇ ವ್ಯಕ್ತಿಯ ಮುಖದ ಮೇಲೆ ಇವರು ನಗು ತರಿಸಬಲ್ಲರು. ತುಂಬಾ ಆದರ್ಶವಾದಿಗಳಾಗಿರುವ ಇವರು ವಿನಮ್ರರೂ ಕೂಡ ಹೌದು.

ಮಕರ ರಾಶಿ: ತುಂಬಾ ಜವಾಬ್ದಾರಿಯುತ ಜೀವಿಗಳಿವರು, ಉತ್ತಮ ನಿರ್ವಾಹಕರಾಗಿರುತ್ತಾರೆ. ಶಿಸ್ತು ಪ್ರಿಯರಾಗಿರುವ ಇವರು ತಮ್ಮ ಮೇಲೆ ನಿಯಂತ್ರಣ ಹೊಂದಿರುವುದನ್ನು ಅರಿತಿರುತ್ತಾರೆ.

ಕುಂಭ ರಾಶಿ: ಇವರು ತುಂಬಾ ಪ್ರಗತಿಪರರು. ಮಾನವೀಯ ಗುಣಗಳ ಆಗರ ಇವರು. ತುಂಬಾ ವಾಸ್ತವಿಕತೆಯಲ್ಲಿ ಬದುಕುತ್ತಾರೆ ಸ್ವತಂತ್ರರಾಗಿ ಬಾಳುವುದು ಇವರ ಸ್ವಭಾವದಲಿದೆ.

ಮೀನ ರಾಶಿ: ಇವರ ಸಾಮಾನ್ಯ ಜ್ಞಾನ ತುಂಬಾ ಗಟ್ಟಿಯಾಗಿರುತ್ತದೆ. ಇವರು ತುಂಬಾ ದಯಾಶಾಲಿ ಹಾಗೂ ರಚನಾತ್ಮಕ ಸ್ವಭಾವದವರು. ಬುದ್ಧಿಶಾಲಿಗಲಾಗಿರುವ ಇವರು ತುಂಬಾ ಸಜ್ಜನರಾಗಿರುತ್ತಾರೆ.

Trending News