ನವದೆಹಲಿ: ಇಡೀ ವಿಶ್ವಕ್ಕೆ ಕಂಟಕ ಪ್ರಾಯವಾಗಿ ಕಾಡುತ್ತಿರುವ ಕರೋನಾವೈರಸ್ ವಿಶ್ವಾದ್ಯಂತ ಹಲವು ಬದಲಾವಣೆಗಳನ್ನು ತಂದಿದೆ. ಭಾರತದಲ್ಲಿ ಕೊರೊನಾವೈರಸ್‌ನಿಂದಾಗಿ ಕಳೆದ ಮಾರ್ಚ್‌ನಿಂದ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು ಇದುವರೆಗೂ ಶಾಲೆಗಳನ್ನು ತೆರೆಯಲಾಗಿಲ್ಲ. ಆದರೂ ಮಕ್ಕಳು ಅಧ್ಯಯನದಿಂದ ದೂರ ಉಳಿಯಬಾರದು ಎಂಬ ಕಾರಣಕ್ಕೆ ಮಕ್ಕಳ ಅಧ್ಯಯನ ಮತ್ತು ಪರೀಕ್ಷೆಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಹಿಂದಿನ ಪದ್ದತಿಯಂತೆ ತರಗತಿಗಳು ನಡೆಯದಿದ್ದರೂ ಸಹ ಪ್ರಸ್ತುತ ಎಲ್ಲರೂ ಆನ್‌ಲೈನ್ ಶಿಕ್ಷಣದತ್ತ ಗಮನ ಹರಿಸಿದ್ದಾರೆ. ದೇಶಾದ್ಯಂತದ ವರ್ಕ್ ಫ್ರಮ್ ಹೋಂ ನಂತೆಯೇ ಮಕ್ಕಳು ಆನ್‌ಲೈನ್ ತರಗತಿಗಳಲ್ಲಿ ಮನೆಯಲ್ಲಿಯೇ ಕುಳಿತು ಕಲಿಯುತ್ತಿದ್ದಾರೆ. ಆದರೆ ಕೆಲವು ಪೋಷಕರು ನಮ್ಮ ಮಕ್ಕಳು ಸರಿಯಾಗಿ ಓದುತ್ತಲೇ ಇಲ್ಲ. ಅವರಿಗೆ ಏನೂ ಅರ್ಥವೇ ಆಗುತ್ತಿಲ್ಲ ಎಂದು ಹಲವು ರೀತಿಯ ದೂರುಗಳನ್ನು ನೀಡುತ್ತಿದ್ದಾರೆ. 


ನಿಮ್ಮ ಮನೆಯಲ್ಲೂ ಮಕ್ಕಳಿದ್ದರೆ ಮಕ್ಕಳ ಕೋಣೆಯನ್ನು ವಾಸ್ತು (ವಾಸ್ತು) ಪ್ರಕಾರ ಅಲಂಕರಿಸಿ. ಇದರಿಂದ ಅವರ ಏಕಾಗ್ರತೆ ಹೆಚ್ಚಾಗಿ ಅವರು ಚೆನ್ನಾಗಿ ಓದುತ್ತಾರೆ. ಓದಿದ್ದು ಅವರ ತಲೆಗೆ ಹಿಡಿಯುತ್ತದೆ ಎಂದು ಹಲವು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.


ಹೌದು ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಚಟುವಟಿಕೆಗಳ ಮೂಲಕ ಮಾಡುವ ಪಾಠಕ್ಕೂ ಮಕ್ಕಳು ಆನ್‌ಲೈನ್ನಲ್ಲಿ ಕಲಿಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಧೈರ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ. ಆದರೆ ನಮಗಿರುವ ಮಿತಿಯಲ್ಲಿಯೇ ನಮ್ಮ ಮಕ್ಕಳನ್ನು ಏಕಾಗ್ರತೆಯಿಂದ ಓದಲು ಅನುವು ಮಾಡಿಕೊಡಬೇಕಾಗುತ್ತದೆ. 


ಮಾರ್ಚ್‌ನಿಂದ ಶಾಲೆ, ಓದು, ಟೆಸ್ಟ್, ಪರೀಕ್ಷೆ ಹೀಗೆ ಯಾವುದೇ ತಲೆಬಿಸಿ ಇಲ್ಲದೆ ಮನೆಯಲ್ಲಿಯೇ ಕಾಲಕಳೆಯುತ್ತಿರುವ ಮಕ್ಕಳಿಗೆ ತಕ್ಷಣ ಓದುವುದು, ಬರೆಯುವ ಅಭ್ಯಾಸಕ್ಕೆ ಹೊಂದಿಕೊಳ್ಳುವುದು ಸುಲಭದ ಮಾತಲ್ಲ. ನಿಮ್ಮ ಮಕ್ಕಳೂ ಕೂಡ ಅಧ್ಯಯನದಲ್ಲಿ ಹಿಂದುಳಿದಿದ್ದರೆ ಅಥವಾ ಮೊದಲಿನಂತೆ ಅಧ್ಯಯನದಲ್ಲಿ ಗಮನಹರಿಸಲು ಸಾಧ್ಯವಾಗದಿದ್ದರೆ ಜ್ಯೋತಿಷಿ ಮತ್ತು ವಾಸ್ತು ತಜ್ಞ ಡಾ.ಆರ್ಥಿ ದಹಿಯಾ ಅವರ ಈ ವಾಸ್ತು ಸಲಹೆಗಳ ಸಹಾಯದಿಂದ ಅವರ ಕೊಠಡಿಯನ್ನು ಅಲಂಕರಿಸಿ. ನಿಮ್ಮ ಮಕ್ಕಳ ಅಧ್ಯಯನದಲ್ಲಿ ಏನಾದರೂ ಬದಲಾವಣೆ ಆಗಬಹುದೇ ಎಂದು ಪ್ರಯತ್ನಿಸಿ...


1. ಮಕ್ಕಳು ಬೆಳಿಗ್ಗೆ ಎದ್ದ ಕೂಡಲೇ ಹಾಲು ಬೆರೆಸಿದ ನೀರಿನಿಂದ ಸ್ನಾನ ಮಾಡುವ ಅಭ್ಯಾಸ ಮಾಡಿ ಇದು ಅವರಿಗೆ ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಮೂಡಿಸುತ್ತದೆ.
2. ಮಕ್ಕಳನ್ನು ಪೂರ್ವ ದಿಕ್ಕಿನಲ್ಲಿ ಉತ್ತರ ದಿಕ್ಕಿಗೆ ಮುಖ ಮಾಡಿ ಕೂರಿಸಿ ಅಧ್ಯಯನ ಮಾಡಿಸಿ. ಹೀಗೆ ಮಾಡುವುದರಿಂದ ಅವರ ಏಕಾಗ್ರತೆ ಹೆಚ್ಚಾಗುತ್ತದೆ ಎಂದು ಜ್ಯೋತಿಷಿ ಮತ್ತು ವಾಸ್ತು ತಜ್ಞ ಡಾ.ಆರ್ಥಿ ದಹಿಯಾ ಹೇಳುತ್ತಾರೆ.
3. ಮಕ್ಕಳು ಅಧ್ಯಯನ ಮಾಡುವ ಮೇಜಿನ ಮೇಲೆ ಹಳದಿ ಹೂವುಗಳ ಪುಷ್ಪಗುಚ್ಛವನ್ನು ಇರಿಸಿ.
4. ಓದುವಾಗ ಮಕ್ಕಳ ಬಲಭಾಗದಲ್ಲಿ ಒಂದು ಲೋಟ ನೀರನ್ನು ಇರಿಸಿ, ಅವರ ಅಧ್ಯಯನ ಮುಗಿದ ಬಳಿಕ ಆ ನೀರನ್ನು ಸಸ್ಯಕ್ಕೆ ಹಾಕಿ.
5. ಮಕ್ಕಳ ಸ್ಟಡಿ ಟೇಬಲ್ ಮೇಲೆ ಮಾತೆ ಸರಸ್ವತಿಯ ಸಾಧನವನ್ನು ಇರಿಸಿ.