ನವದೆಹಲಿ: ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಧನತ್ರಯೋದಶಿ ಆಚರಿಸಲಾಗುತ್ತದೆ. ಧನತ್ರಯೋದಶಿ (Dhanteras) ದೀಪಾವಳಿಗೂ ಮುನ್ನ ಬರುವ ಹಬ್ಬ. ಈ ಬಾರಿ ನವೆಂಬರ್ 13ರಂದು ಈ ಹಬ್ಬ ಆಚರಿಸಲಾಗುತ್ತಿದೆ. ಧನತ್ರಯೋದಶಿಯ ದಿನ ಖರೀದಿಗೆ ವಿಶೇಷ ಮಹತ್ವ ನೀಡಲಾಗಿದೆ. ಈ ಶುಭದಿನದ ಅವಸರದಂದು ಚಿನ್ನ, ಬೆಳ್ಳಿ ಹಾಗೂ ಪಾತ್ರೆಗಳನ್ನು ಖರೀದಿಸುವುದರಿಂದ ಇಡೀ ವರ್ಷ ಸಂಪದ್ಭರಿತವಾಗಿ ಕಳೆಯುತ್ತದೆ ಎಂಬ ನಂಬಿಕೆ ಇದೆ. ಧನತ್ರಯೋದಶಿಯ ದಿನ ಯಾವ ವಸ್ತುಗಳನ್ನು ಖರೀದಿಸಬೇಕು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇಂದು ನಾವು ನಿಮಗೆ ಧನತ್ರಯೋದಶಿ ಅಥವಾ ಧನ್ವಂತರಿ ಜಯಂತಿಯಂದು ಯಾವ ವಸ್ತುಗಳನ್ನು ಮನೆಗೆ ಖರೀದಿಸಿ ತರಬಾರದು ಎಂಬುದರ ಕುರಿತು ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಈ ಬಾರಿಯ ಧನತ್ರಯೋದಶಿಯಂದು ನಿಮ್ಮ ರಾಶಿಗೆ ಅನುಗುಣವಾಗಿ ಖರೀದಿ ಮಾಡಿ, ಸಿಗಲಿದೆ ಶುಭ ಲಾಭ


ಕಬ್ಬಿಣದಿಂದ ತಯಾರಿಸಲಾಗಿರುವ ವಸ್ತುಗಳು
ಧನತ್ರಯೋದಶಿಯ ದಿನ ಕಬ್ಬಿಣದಿಂದ ತಯಾರಿಸಲಾಗಿರುವ ವಸ್ತುಗಳನ್ನು ಮನೆಗೆ ತರಬಾರದು. ಈ ಶುಭದಿನದಂದು ಕಬ್ಬಿಣದಿಂದ ತಯಾರಿಸಲಾಗಿರುವ ವಸ್ತುಗಳನ್ನು ಮನೆಗೆ ತಂದರೆ ರಾಹುವಿನ ಅಶುಭ ಛಾಯೆ ಮನೆಯ ಮೇಲೆ ಆವರಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ರಾಹುವಿನ ದೃಷ್ಟಿ ಮನೆಯ ಮೇಲೆ ಬಿದ್ದರೆ ಸಂಕಷ್ಟಗಳು ಎದುರಾಗುತ್ತವೆ ಎಂದು ಜೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ.


ಇದನ್ನು ಓದಿ- Dhanteras 2020: ಧನತ್ರಯೋದಶಿಯಂದು ಚಿನ್ನ-ಬೆಳ್ಳಿ ಖರೀದಿಸಲು ಸಾಧ್ಯವಾಗದಿದ್ದರೆ ಈ 5 ವಸ್ತುಗಳನ್ನು ಮನೆಗೆ ತಂದು ಲಕ್ಷ್ಮಿ ಕೃಪೆಗೆ ಪಾತ್ರರಾಗಿ


ಗಾಜಿನ ವಸ್ತುಗಳನ್ನು ಮನೆಗೆ ತರಬೇಡಿ
ಗಾಜಿನ ವಸ್ತುವಿನ ಸಂಬಂಧ ಕೂಡ ರಾಹುವಿನ ಜೊತೆಗೆ ಕಲ್ಪಿಸಲಾಗುತ್ತದೆ. ಹೀಗಾಗಿ ಧನತ್ರಯೋದಶಿಯ ದಿನ ಮನೆಗೆ ಗಾಜಿನ ವಸ್ತುಗಳನ್ನು ಖರೀದಿಸಿ ಮನೆಗೆ ತರಬೇಡಿ.


ಇದನ್ನು ಓದಿ- Diwali 2020 ಶುಭ ದಿನದಂದು ಹೊಸ ಬೈಕ್ ಖರೀದಿಸಬೇಕೆ, 55,000 ಕ್ಕೂ ಕಮ್ಮಿ ಬೆಲೆಗೆ ಈ ಆಪ್ಶನ್ ಟ್ರೈ ಮಾಡಿ


ಸ್ಟೀಲ್ ವಸ್ತುಗಳನ್ನು ಖರೀದಿಸಬೇಡಿ
ಧನತ್ರಯೋದಶಿಯ ದಿನ ಪಾತ್ರೆಗಳನ್ನು ಖರೀದಿಸುವ ಪರಂಪರೆ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಸ್ಟೀಲ್ ಕೂಡ ಕಬ್ಬಿಣದ ಬೇರೆ ರೂಪವಾಗಿದೆ. ಹೀಗಾಗಿ ಸ್ಟೀಲ್ ಪಾತ್ರೆಗಳನ್ನು ಧನತ್ರಯೋದಶಿಯ ದಿನ ಖರೀದಿಸಬಾರದು. ಸ್ಟೀಲ್ ಬದಲು ತಾಮ್ರ ಅಥವಾ ಹಿತ್ತಾಳೆ ಪಾತ್ರೆಗಳನ್ನು ಖರೀದಿಸುವುದು ಶುಭಕರ ಹಾಗೂ ಉತ್ತಮ ಕೂಡ ಹೌದು.


ಇದನ್ನು ಓದಿ- ಧನತ್ರಯೋದಶಿಯ ದಿನ ಅಗ್ಗದ ಬೆಲೆಯಲ್ಲಿ Gold ಖರೀದಿಸಬೇಕೆ? ಇಲ್ಲಿದೆ ಉಪಾಯ


ಹರಿತವಾದ ವಸ್ತುಗಳು
ಧನತ್ರಯೋದಶಿಯ ದಿನ ಒಂದು ವೇಳೆ ನೀವು ಶಾಪಿಂಗ್ ಗಾಗಿ ಹೊರಟರೆ, ಕತ್ತರಿ ಚೂರಿ ಅಥವಾ ಇತರ ಯಾವುದೇ ಹರಿತವಾದ ಸಾಮಗ್ರಿಗಳನ್ನು ಖರೀದಿಸಿ ಮನೆಗೆ ತರಬೇಡಿ.