Diwali 2020 ಶುಭ ದಿನದಂದು ಹೊಸ ಬೈಕ್ ಖರೀದಿಸಬೇಕೆ, 55,000 ಕ್ಕೂ ಕಮ್ಮಿ ಬೆಲೆಗೆ ಈ ಆಪ್ಶನ್ ಟ್ರೈ ಮಾಡಿ

ದೀಪಾವಳಿಯಂದು ಎಲ್ಲ ರೀತಿಯ ಶಾಪಿಂಗ್ ನಡೆಯುತ್ತದೆ, ದ್ವಿಚಕ್ರ ವಾಹನ ಖರೀದಿ ಕೂಡ ಇದರಿಂದ ಹೊರತಾಗಿಲ್ಲ.

  • Nov 08, 2020, 15:25 PM IST

ನವದೆಹಲಿ: ಕರೋನಾ ಪ್ರಕೋಪದ ಹಿನ್ನೆಲೆ ವಿಧಿಸಲಾಗಿದ್ದ  ಲಾಕ್‌ಡೌನ್ ಅನ್ನು ತೆಗೆದುಹಾಕಿದ ನಂತರ, ಖರೀದಿ ಕ್ರಮೇಣ ಹೆಚ್ಚುತ್ತಿದೆ. ಹಬ್ಬದ ಋತುವಿನ ಆರಂಭ ಮತ್ತು ದೀಪಾವಳಿ (Diwali) ಸಮೀಪಿಸುತ್ತಿರುವುದರಿಂದ , ಮಾರುಕಟ್ಟೆಗಳಲ್ಲಿ ಹೆಚ್ಚಿನ ಹಲ್-ಚಲ್ ಕಂಡುಬರಲಾರಂಭಿಸಿದೆ. ಜನರು ತಮ್ಮ ನಿರ್ಬಂಧಿತ ಶಾಪಿಂಗ್ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದ್ದಾರೆ. ದೀಪಾವಳಿಯಂದು ಪ್ರತಿಯೊಂದು ರೀತಿಯ ಶಾಪಿಂಗ್ ನಡೆಯುತ್ತದೆ. ದ್ವಿಚಕ್ರ ವಾಹನ ಇದರಿಂದ ಹೊರತಾಗಿಲ್ಲ. ಹಬ್ಬದ ಋತುವಿನಲ್ಲಿ ಘೋಶಿಸಲಾಗುತ್ತಿರುವ ಕೊಡುಗೆಯಿಂದಾಗಿ, ಈ ಸಮಯದಲ್ಲಿ ಅನೇಕ ಜನರು ಬೈಕು ಮನೆಗೆ ತರುತ್ತಾರೆ. ಬಜೆಟ್‌ನಲ್ಲಿ ಲಭ್ಯವಿರುವ ಬೈಕ್‌ಗಳ ಕುರಿತು ಮಾತನಾಡುವುದಾದರೆ, ಮಾರುಕಟ್ಟೆಯಲ್ಲಿ 55000 ರೂ ಎಕ್ಸ್‌ಶೋರೂಂ ಬೆಲೆಯಲ್ಲಿ ಮೋಟರ್‌ಸೈಕಲ್‌ಗಳಿವೆ. ಈ ಬಜೆಟ್‌ನಲ್ಲಿ ಹೀರೋ ಮೊಟೊಕಾರ್ಪ್, ಟಿವಿಎಸ್ ಮತ್ತು ಬಜಾಜ್‌ನ 4 ಮಾದರಿಗಳನ್ನು ನೀವು ಆಯ್ಕೆ ಮಾಡಬಹುದು.

ಇದನ್ನು ಓದಿ- Diwali 2020: ಆರ್ಥಿಕ ಸಮಸ್ಯೆ, ಸಾಲದಿಂದ ಮುಕ್ತಿ ಪಡೆಯಲು ದೀಪಾವಳಿಯಂದು ಈ 4 ಉಪಾಯಗಳನ್ನು ಮಾಡಿ

1 /4

ಬಜಾಜ್ CT100 ES ALLOY ಹಾಗೂ  KS ALLOY ಎಂಬ ಎರಡು ವಿಧಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ES ALLOY ನ ಎಕ್ಸ್ ಶೋರ್ ರೂಂ ಬೆಲೆ ರೂ.44,890 ಆಗಿದೆ. ಇನ್ನೊಂದೆಡೆ KS ALLOY ವೇರಿಯಂಟ್ ನ ಮಾರುಕಟ್ಟೆ ಬೆಲೆ ರೂ.51,802 ಆಗಿದೆ. CT100 ನಲ್ಲಿ BS6, 102 CC, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಇಂಜಿನ್ ಇದೆ. ಇವು 7.9HP ಪಾವರ್ ಹಾಗೂ 8.34Nm ನ ಟಾರ್ಕ್ ಜನರೆತ್ ಮಾಡುತ್ತವೆ. ಇದರ ಜೊತೆಗೆ 4 ಸ್ಪೀಡ್ ಗಳ ಗಿಯರ್ ಬಾಕ್ಸ್ ಇದೆ. ಈ ಬೈಕ್ ನ ಟಾಪ್ ಸ್ಪೀಡ್ 90 KMPH ಆಗಿದೆ.

2 /4

ಬಜಾಜ್ CT110 ಈ ಬೈಕ್ ನ ES ALLOY ವೇರಿಯಂಟ್ ನ ದೆಹಲಿ ಎಕ್ಸ್ ಷೋರೂಂ ಬೆಲೆ ರೂ.52,890 ರಷ್ಟಿದೆ. CT110 ನಲ್ಲಿ BS6, 115.45 CC, 4 ಸ್ಟ್ರೋಕ್ , ಸಿಂಗಲ್ ಸಿಲಿಂಡರ್ ಇಂಜಿನ್ ಇದೆ. ಇವು 8.6 HP ಪಾವರ್ ಹಾಗೂ 9.8 Nm ಟಾರ್ಕ್ ಜನರೆತ್ ಮಾಡುತ್ತವೆ. ಜೊತೆಗೆ 4 ಸ್ಪೀಡ್ ಗಿಯರ್ ಬಾಕ್ಸ್ ಕೂಡ ಇದೆ.

3 /4

ಹೀರೋ HF Deluxe ನ ದೆಹಲಿ ಎಕ್ಸ್ ಷೋರೂಂ ಬೆಲೆ ರೂ.48,950  ರಿಂದ ರೂ.59,800 ರಷ್ಟಿದೆ. ಹೀರೋ HF Deluxe ನಲ್ಲಿ BS6, 97.2CC, ಏರ್ ಕೋಲ್ಡ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಇಂಜಿನ್ ಇದೆ. ಇವು 7.94 HP ಪಾವರ್ ಹಾಗೂ 8.05Nmನ ಪೀಟ್ ಟಾರ್ಕ್ ಜನರೆತ್ ಮಾಡುತ್ತವೆ. ಜೊತೆಗೆ ಇದರಲ್ಲಿ 4 ಸ್ಪೀಡ್ ಗಿಯರ್ ಬಾಕ್ಸ್ ನೀಡಲಾಗಿದೆ.

4 /4

ಈ ಬೈಕ್ ನಲ್ಲಿ BS6, 110 CC, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೋಲ್ಡ್ ಸ್ಪಾರ್ಕ್ ಇಗ್ನಿಷನ್ ಫ್ಯುಯೆಲ್ ಇಂಜೆಕ್ಟೆಡ್ ಇಂಜಿನ್ ಇದೆ. ಈ ಇಂಜಿನ್ 8.1 HP ಪಾವರ್ ಹಾಗೂ 8.7 Nm ಟಾರ್ಕ್ ಜನರೆತ್ ಮಾಡುತ್ತದೆ. ಜೊತೆಗೆ 4 ಸ್ಪೀಡ್ ಗಿಯರ್ ಬಾಕ್ಸ್ ನೀಡಲಾಗಿದೆ. TVS ಸ್ಪೋರ್ಟ್ಸ್ ನ ಕಿಕ್ ಸ್ಟಾರ್ ವೇರಿಯಂಟ್ ನ ದೆಹಲಿ ಎಕ್ಸ್ ಷೋರೂಂ ಬೆಲೆ ರೂ.54,850ರಷ್ಟಿದೆ ಹಾಗೂ ಸೆಲ್ಫ್ ಸ್ಟಾರ್ಟ್ ವೇರಿಯಂಟ್ ನ ಬೆಲೆ ರೂ.51,525 ರಷ್ಟಿದೆ.