ಮುಂಬೈ: ಇನ್ನೇನು ಶ್ರಾವಣ ಮಾಸದ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹಿಂದೂ ಸಂಪ್ರದಾಯದಲ್ಲಿ ಈ ಮಾಸಕ್ಕೆ ತನ್ನದ ಆದ ಮಹತ್ವವಿರುವುದರಿಂದ ಈ ಸಂದರ್ಭದಲ್ಲಿ ನಾವು ಗಾಯತ್ರಿ ಮಂತ್ರದ ಪ್ರಯೋಜನಗಳನ್ನು ತಿಳಿದುಕೊಳ್ಳುವುದು  ಅತ್ಯಂತ ಉಪಯುಕ್ತ  ಸಂಗತಿ ಎಂದು ಹೇಳಬಹುದು.


COMMERCIAL BREAK
SCROLL TO CONTINUE READING

 ಶ್ರಾವಣ ಮಾಸದಲ್ಲಿ ಬಹುತೇಕ ಭಕ್ತರು ಯಾತ್ರೆಗಳಿಗೆ ಹೋಗುವ ಅಥವಾ ಉಪವಾಸ ವ್ರುತಗಳನ್ನು ಆಚರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ. ಅದರಲ್ಲೂ ಈ ಮಾಸದಲ್ಲಿ ದೇಶದಲ್ಲೆಡೆ ಶಿವನ ದೇವಸ್ತಾನಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ, ಅದರಲ್ಲೂ ಜ್ಯೋತಿರ್ಲಿಂಗವೆಂದರೆ ಅಂತಹ ಧಾರ್ಮಿಕ ಸ್ಥಳಗಳಲ್ಲಿ  ಹೆಚ್ಚಿನ ರೀತಿಯಲ್ಲಿ ಜನರು ಸೇರುತ್ತಾರೆ.


ಉತ್ತರ ಭಾರತದ ಕ್ಯಾಲೆಂಡರ್ ಅನ್ವಯದಂತೆ ಶ್ರಾವಣ ಮಾಸ ಈ ಬಾರಿ  ಜುಲೈ 28 ರಂದು ಪ್ರಾರಂಭವಾಗುತ್ತದೆ. ಈ ಮಾಸದಲ್ಲಿ  ಶಿವನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುತ್ತಾರೆ.ಈ ಮಂತ್ರಗಳನ್ನು ಈ ಮಾಸದಲ್ಲಿ ಪಠಿಸುವುದರಿಂದ ಎಲ್ಲ ದುಷ್ಟ ಶಕ್ತಿಗಳಿಂದಲೂ ರಕ್ಷಿಸಲಾಗುತ್ತದೆ ಎನ್ನುವ ನಂಬಿಕೆ ಇದೆ. 


 ರುದ್ರ ಗಾಯತ್ರಿ ಮಂತ್ರ 


ಓಂ ತತ್ಪುರುಷಾಯ ವಿದ್ಮಹೇ,


ಮಹಾದೇವಾಯ ಧೀಮಹೀ ತನ್ನೋ ರುದ್ರ ಪ್ರಚೋದಯಾತ್ ||


ರುದ್ರ ಗಾಯತ್ರಿ ಮಂತ್ರದ ಅರ್ಥ:


ನಾನು ದೇವತೆಗಳ ಅತ್ಯಂತ ಮಹತ್ವಾಕಾಂಕ್ಷ ಆದರ್ಶ ಪುರುಷ ಮಹಾದೇವನನ್ನು ಪ್ರಾರ್ಥಿಸುತ್ತೇನೆ. ಜ್ಞಾನದಿಂದ ನನ್ನನ್ನು ಆಶೀರ್ವದಿಸು ಮತ್ತು ಜ್ಞಾನದಿಂದ ನನನ್ನು ಬೆಳಗುವಂತೆ ಮಾಡು


ರುದ್ರ ಗಾಯತ್ರಿ ಮಂತ್ರ ಪಠಣದಿಂದಾಗುವ ಪ್ರಯೋಜನಗಳು:


*ಈ ಮಂತ್ರವನ್ನು ಪಠಿಸುವುದರಿಂದ  ನಮ್ಮಲ್ಲಿರುವ ಉದ್ವೇಗವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಇದು ನಮ್ಮಲ್ಲಿರುವ  ಭಯವನ್ನು ತೊಡೆದುಹಾಕಲು ನಮಗೆ ಸಹಾಯ ಮಾಡುತ್ತದೆ.


*ಜೀವನದ ಅಂತಿಮ ಸತ್ಯವನ್ನು ಅರಿತುಕೊಳ್ಳಲು ನಮಗೆ ಸಹಾಯ ಮಾಡುತ್ತದೆ, ನಮ್ಮ ಮನಸ್ಸನ್ನು ಜಾಗೃತಗೊಳಿಸುತ್ತದೆ ಮತ್ತು ಪ್ರಕಾಶಿಸುತ್ತದೆ.


*ದೇಹ, ಮನಸ್ಸು ಮತ್ತು ಆತ್ಮವನ್ನು ಆರೋಗ್ಯವನ್ನಾಗಿ ಇಡುತ್ತದೆ.