ನವದೆಹಲಿ: ಇಂದಿನಿಂದ ಅಧಿಕ ಮಾಸ ಆರಂಭವಾಗಿದೆ. ಅಂದರೆ ಈ ವರ್ಷ ಸೆಪ್ಟೆಂಬರ್ 18 ಮತ್ತು ಅಕ್ಟೋಬರ್ 16 ರವರೆಗೆ ಅಧಿಕ ಮಾಸ ಇರುತ್ತದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ಮತ್ತು ಹೆಚ್ಚು ಫಲವನ್ನು ನೀಡುವ ಈ ಮಾಸದಲ್ಲಿ ಜಪ, ತಪಸ್ಸು, ಪೂಜೆ, ಉಪವಾಸ ಮತ್ತು ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. 


COMMERCIAL BREAK
SCROLL TO CONTINUE READING

ಅಂತಹ ಪರಿಸ್ಥಿತಿಯಲ್ಲಿ, ಈ ತಿಂಗಳಲ್ಲಿ ನಾವು ಯಾವ ವಸ್ತುಗಳನ್ನು ದಾನ ಮಾಡಬೇಕು ಎಂಬುದನ್ನು ತಿಳಿಯುವುದು ಕೂಡ ಅತ್ಯಗತ್ಯ. ಅದರಿಂದ ನಮ್ಮ ಜೀವನಕ್ಕೆ ಸಂಬಂಧಿಸಿದ ಅಡೆತಡೆಗಳನ್ನು ತೆಗೆದುಹಾಕಲಾಗುತ್ತದೆ, ಪಾಪ ನಿವಾರಣೆಯಾಗುತ್ತದೆ ಎಂದು ಹಿರಿಯರು ಹೇಳಿರುವುದನ್ನು ಕೇಳಿರಬಹುದು.


ಉಜ್ಜಯಿನಿಯ ಮಹಾಕಾಳ್ ದೇವಾಲಯದಲ್ಲಿ ಪಂಚಾಮೃತ ಅರ್ಪಿಸಲು ಇಲ್ಲ ಅವಕಾಶ, ಇದು ಹೊಸ ನಿಯಮ


ಈ ಪರಿಹಾರದಿಂದ ಈಡೇರುತ್ತದೆ ಆಸೆ :
ಅಧಿಕ ಮಾಸವನ್ನು ವಿಷ್ಣುವಿನ ಆರಾಧನೆ ಮತ್ತು ಪೂಜೆಯ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ವಿಷ್ಣುವನ್ನು ಪೂಜಿಸುವುದು, ಮಂತ್ರಗಳನ್ನು ಪಠಿಸುವುದರಿಂದ ನಮ್ಮ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗಿ ಆಸೆ-ಆಕಾಂಕ್ಷೆಗಳು ಈಡೇರುತ್ತವೆ ಎಂಬ ನಂಬಿಕೆಯೂ ಇದೆ. ಈ ಪವಿತ್ರ ಮಾಸದಲ್ಲಿ ಭಗವಾನ್ ವಿಷ್ಣುವಿನ ಕೈಯಲ್ಲಿ ಶಂಖ ಮತ್ತು ದೀಪ ದಾನವು ವಿಷ್ಣುವಿನ ಆಶೀರ್ವಾದವನ್ನು ಮಾತ್ರವಲ್ಲದೆ ಲಕ್ಷ್ಮಿ ದೇವಿಯ ಕೃಪೆಗೂ ಪಾತ್ರವಾಗುವಂತೆ ನಮ್ಮನ್ನು ಅನುಗ್ರಹಿಸುತ್ತದೆ. ಜೊತೆಗೆ ಮನೆಯಲ್ಲಿ ಸಂಪತ್ತು ಸಮೃದ್ಧವಾಗುತ್ತದೆ ಎಂಬ ನಂಬಿಕೆಯೂ ಇದೆ.


ದುಂದು ವೆಚ್ಚದ ದಸರಾ ಇಲ್ಲ; ಸಚಿವ ಎಸ್.ಟಿ. ಸೋಮಶೇಖರ್


ಈ ವಸ್ತುಗಳನ್ನು ದಾನ ಮಾಡುವುದರಿಂದ ಸಿಗುತ್ತೆ 10 ಪಟ್ಟು ಹೆಚ್ಚಿನ ಲಾಭ:
ಸನಾತನ ಸಂಪ್ರದಾಯದಲ್ಲಿ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಉಪವಾಸ, ಹಬ್ಬ, ತಿಂಗಳು ಮತ್ತು ಆಚರಣೆಗಳು ಇತ್ಯಾದಿಗಳ ಆಧಾರದ ಮೇಲೆ ನಾವು ಹೆಚ್ಚಾಗಿ ನಮ್ಮ ಶಕ್ತಿಗೆ ಅನುಗುಣವಾಗಿ ದಾನ ಮಾಡುವ ಕಾರಣ ಇದು. 12 ತಿಂಗಳ ನಂತರ ಇದನ್ನು 13ನೇ ತಿಂಗಳು ಅಂದರೆ ಅಧಿಕ ಮಾಸ ಎಂದು ಕರೆಯಲಾಗುತ್ತದೆ, ಇದರ ಪ್ರಧಾನ ದೇವತೆ ವಿಷ್ಣು. ಈ ತಿಂಗಳಲ್ಲಿ ಶ್ರೀ ಹರಿಯ ಆಶೀರ್ವಾದ ಪಡೆಯಲು ಭಕ್ತರು ಪೂಜೆ ಮಾಡಿ ಜನರಿಗೆ ಪ್ರಸಾದದ ರೂಪದಲ್ಲಿ ದಾನ ಮಾಡಬೇಕು.


ವಾಸ್ತುವಿನ ರೀತಿ ಮಗುವಿನ ರೂಂ ಅಲಂಕರಿಸಿದರೆ ಸಿಗಲಿವೆ ಈ ಪ್ರಯೋಜನಗಳು


ವಿಶೇಷ ಫಲ ಪಡೆಯಲು ಈ ತಿಂಗಳಲ್ಲಿ ಬ್ರಾಹ್ಮಣನಿಗೆ ಬೆಲ್ಲ, ತುಪ್ಪ, ಅಕ್ಕಿ ಇತ್ಯಾದಿಗಳನ್ನು ದಾನ ಮಾಡಿ. ಈ ದಾನದಿಂದ ನಿಮ್ಮ ನೋವುಗಳು ಮಾಯವಾಗುವುದು ಮಾತ್ರವಲ್ಲ, ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಾಗುತ್ತದೆ. ನಿಮ್ಮ ಮುಂದಿನ ಜೀವನ ಸುಖಮಯವಾಗಿರುತ್ತದೆ.  ನೀವು ಜೀವನದಲ್ಲಿ ಸಂತೋಷ ಮತ್ತು ಅದೃಷ್ಟವನ್ನು ಪಡೆಯುತ್ತೀರಿ ಎಂದು ಹಿರಿಯರು ನಂಬಿಕೆ ಇಟ್ಟಿದ್ದರು.