ಬೆಂಗಳೂರಿನ ಈ ದೇವಸ್ಥಾನಕ್ಕೆ ಮಿನಿಸ್ಕರ್ಟ್ ಧರಿಸಿ ಹೋಗುವಂತಿಲ್ಲ!
ಇತ್ತೀಚೆಗೆ ದೇವಾಲಯಗಳಿಗೆ ಬರುವ ಕೆಲ ಭಕ್ತರು ಭಾರತೀಯ ಸಂಪ್ರದಾಯವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಕಾರಣದಿಂದ ನಗರದ ದೇವಾಲಯವೊಂದು ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಿದೆ.
ಬೆಂಗಳೂರು: ಇತ್ತೀಚೆಗೆ ದೇವಾಲಯಗಳಿಗೆ ಬರುವ ಕೆಲ ಭಕ್ತರು ಭಾರತೀಯ ಸಂಪ್ರದಾಯವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಕಾರಣದಿಂದ ನಗರದ ದೇವಾಲಯವೊಂದು ಭಕ್ತಾದಿಗಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಿದೆ.
ನಗರದ ರಾಜರಾಜೇಶ್ವರಿ ದೇವಾಲಯಕ್ಕೆ ಹೋಗುವವರು ಬರ್ಮುಡಾ, ಮಿನಿಸ್ಕರ್ಟ್ಸ್, ಮಿಡೀಸ್, ಸ್ಲೀವ್‌ಲೆಸ್ ಟಾಫ್ಸ್, ಲೋ ವೇಸ್ಟ್ ಜೀನ್ಸ್, ಟಿ-ಶಟ್ಸ್ ನಂತಹ ಉಡುಪುಗಳನ್ನು ಧರಿಸಿ ದೇವಾಲಯಕ್ಕೆ ಹೋಗುವಂತಿಲ್ಲ. ಒಂದು ವೇಳೆ ಹೋದರೆ, ಅಂಥವರಿಗೆ ದೇವಾಲಯದಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ.
ದೇವಾಲಯಕ್ಕೆ ಬರುವ ಪುರುಷರು ಧೋತಿ, ಶಲ್ಯ ಅಥವಾ ಪ್ಯಾಂಟ್ ಮತ್ತು ಶರ್ಟ್‌ಗಳನ್ನು ಧರಿಸಿ ಬರಬಹುದು. ಮಹಿಳೆಯರು ಸೀರೆ ಮತ್ತು ರವಿಕೆ ಅಥವಾ ಚೂಡಿದಾರ್ ಧರಿಸಿ, ದುಪ್ಪಟ್ಟಾ ಹೊದ್ದು ಬರಬೇಕು. ಅಲ್ಲದೆ, ತಲೆಕೂದಲನ್ನು ಬಿಡದೆ, ಜಡೆಯನ್ನು ಹಾಕಿರಬೇಕು ಅಥವಾ ಪೂರ್ತಿಯಾಗಿ ಕಟ್ಟಿರಬೇಕು ಎಂಬ ನಿಯಮವನ್ನು ಜಾರಿ ಮಾಡಲಾಗಿದೆ. ವಸ್ತ್ರ ಸಂಹಿತೆ ಕುರಿತಾಗಿ ದೇವಾಲಯದ ಆವರಣದಲ್ಲಿ ಸೂಚನಾ ಫಲಕಗಳನ್ನೂ ದೇವಾಲಯದ ಆಡಳಿತ ಮಂಡಳಿ ಹಾಕಿದೆ. ಈ ಮೂಲಕ ಖಾಸಗಿ ದೇವಾಲಯವೊಂದು ಇದೇ ಮೊದಲ ಬಾರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಿದೆ.