ವ್ಯಾಪಾರೋದ್ಯಮದ ದಿಗ್ಗಜ್ಜ ಮುಖೇಶ್, ಅನಿಲ್ ಅಂಬಾನಿ ಸಹೋದರಿ ಇವರೇ ! 9 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡ ಇವರ ಸ್ಥಿತಿ ಹೇಗಿದೆ ಗೊತ್ತಾ ?

ಅಂಬಾನಿ ಸಹೋದರರ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಸದಾ ತೆರೆ ಮರೆಯಲ್ಲಿಇರುವ ಇವರ ಸಹೋದರಿ ಇದ್ದಾರೆ. ೯ ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಇವರು ಯಾರು ಹೇಗಿದ್ದಾರೆ ಗೊತ್ತಾ ? 

Ambani Sisiter : ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವದ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಇಡೀ  ಬಾಲಿವುಡ್ ಅಲ್ಲಿ ನೆಲೆಸಿತ್ತು.ಅಂಬಾನಿ ಕುಟುಂಬದ ಸರ್ವ ಸದಸ್ಯರೂ ಇಲ್ಲಿ ಕಾಣಿಸಿಕೊಂಡಿದ್ದರು.  
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ಅನಂತ್ ಅಂಬಾನಿ ಸಂಗೀತ ಸಮಾರಂಭ ಆಯೋಜಿಸಲಾಗಿತ್ತು.ಅನಂತ್ ರಾಧಿಕಾ ಅವರ ಮದುವೆಯನ್ನು ಆಚರಿಸಲು ಇಡೀ ಬಾಲಿವುಡ್ ಸೇರಿದ್ದರೆ, ಅನಂತ್ ಮತ್ತು ಆಕಾಶ್ ಅಂಬಾನಿ ಅವರ ಸೋದರತ್ತೆ ದೀಪ್ತಿ ಕೂಡಾ ಎಲ್ಲರ ಗಮನ ಸೆಳೆದರು.ಆದರೆ ಅವರ ಇನ್ನೊಬ್ಬ ಸಹೋದರಿ ನೀನಾ ಕೊಠಾರಿ ಮಾತ್ರ ಕ್ಯಾಮರಾ ಕಣ್ಣುಗಳಿಂದ ದೂರವೇ ಉಳಿದಿದ್ದಾರೆ.

2 /7

ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿಗೆ ಇಬ್ಬರು ಸಹೋದರಿಯರು.  ಒಬ್ಬರು ದೀಪ್ತಿ ಮತ್ತು ಇನ್ನೊಬ್ಬರು ನೀನಾ ಕೊಠಾರಿ.ಇಲ್ಲಿ ನಾವು ನೀನಾ ಕೊಠಾರಿ ಬಗ್ಗೆ ಮಾತನಾಡುತ್ತೇವೆ.   

3 /7

ನೀನಾ ಕೊಠಾರಿ ತನ್ನ ಸ್ವಂತ ವ್ಯವಹಾರ ನಡೆಸುತ್ತಿದ್ದು, ಕುಟುಂಬವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.ಜನ ಮಾನಸದಿಂದ ಸದಾ ದೂರವೇ ಉಳಿಯುತ್ತಾರೆ. ಅಪರೂಪಕ್ಕೊಮೆ ಕ್ಯಾಮೆರಾ ಕಣ್ಣಿಗೆ ಬೀಳುತ್ತಾರೆ. 

4 /7

ಧೀರೂಭಾಯಿ ಅಂಬಾನಿ ಮತ್ತು ಕೋಕಿಲಾಬೆನ್ ಅಂಬಾನಿ ಅವರ ಪುತ್ರಿ ನೀನಾ 2003 ರಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸಿದರು.ಅಂಬಾನಿ ಕುಟುಂಬದಂತೆ, ನೀನಾ ಕೂಡಾ ಯಶಸ್ವಿ ಉದ್ಯಮಿ.ಕೋಟಿಗಟ್ಟಲೆ ಮೌಲ್ಯದ ಸಾಮ್ರಾಜ್ಯವನ್ನು ಕಟ್ಟಿದವರು. ಅವರು ಜಾವಗ್ರೀನ್ ಕಾಫಿ ಮತ್ತು ಫೂಟ್ ಫ್ರ್ಯಾಂಚೈಸ್ ಅನ್ನು ನಡೆಸುತ್ತಾರೆ. 

5 /7

ನೀನಾ ಕೊಠಾರಿ 1986 ರಲ್ಲಿ ವಿವಾಹವಾದರು.ಅವರ ಪತಿ ಕೂಡಾ ಉದ್ಯಮಿಯಾಗಿದ್ದರು.ಆದರೆ 9 ವರ್ಷಗಳ ಹಿಂದೆ ಭದ್ರಶ್ಯಾಮ್ ಕೊಠಾರಿ  ಕ್ಯಾನ್ಸರ್ ನಿಂದ ನಿಧನರಾದರು.ಪ್ರಸ್ತುತ,ನೀನಾ ಕೊಠಾರಿ ಮಗ ಅರ್ಜುನ್ ಮತ್ತು ಮಗಳು ನಯನತಾರಾ ಜೊತೆ ಇದ್ದಾರೆ.    

6 /7

ಪತಿಯ ನಿಧನದ ನಂತರ,ನೀನಾ ಕೊಠಾರಿ ತನ್ನ ಗಂಡನ ವ್ಯವಹಾರಕ್ಕೆ ಹೆಗಲು ಕೊಡುತ್ತಾರೆ. HC ಕೊಠಾರಿ ಸಮೂಹವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದರು. ಕಾರ್ಪೊರೇಟ್ ಷೇರುಗಳ ಪ್ರಕಾರ,ಅವರ ನಿವ್ವಳ ಮೌಲ್ಯ 52.4 ಕೋಟಿ ರೂ. ಈ ಡೇಟಾವು ಹಲವಾರು ವರ್ಷಗಳಷ್ಟು ಹಳೆಯದು ಎನ್ನುವುದು ಗಮನಿಸಬೇಕಾದ ಅಂಶ.  

7 /7

ನೀನಾ ಕೊಠಾರಿ ತನ್ನ ಸಹೋದರರೊಂದಿಗೆ ಮಾತ್ರವಲ್ಲದೆ ತನ್ನ ಅತ್ತಿಗೆಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅದರಲ್ಲೂ ಟೀನಾ ಅಂಬಾನಿ ಜೊತೆ ವಿಶೇಷ ಒಡನಾಟವಿದೆ.