ನವದೆಹಲಿ: ಇಂದು ವಿಶ್ವ ತಾಯಂದಿರ ದಿನ. ಈ ಹಿನ್ನೆಲೆಯಲ್ಲಿ ಗೂಗಲ್ ತನ್ನ ವಿಶೇಷ ಡೂಡಲ್ ಮೂಲಕ ವಿಶ್ವ ಎಲ್ಲಾ ತಾಯಂದಿರಿಗೂ ಶುಭಾಶಯ ಕೋರಿದೆ. 


COMMERCIAL BREAK
SCROLL TO CONTINUE READING

ಮಕ್ಕಳ ಅಂಗೈ ಚಿತ್ರಗಳನ್ನು ಪುಟಾಣಿ ಡೈನೋಸಾರ್ ಮತ್ತು ತಾಯಿ ಡೈನೋಸಾರ್ ಮೇಲೆ ಬಿಡಿಸುವ ಮೂಲಕ ಗೂಗಲ್ ತಾಯಂದಿರ ದಿನಕ್ಕೆ ವಿಶೇಷ ಡೂಡಲ್ ತಯಾರಿಸಿದೆ. ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಮಿಗಿಲಾದ ತಾಯಿ ಪ್ರೀತಿ, ನಿಸ್ವಾರ್ಥ ಮನೋಭಾವದ ತಾಯಿಗೆ ಈ ಮೂಲಕ ಡೂಡಲ್ ಗೌರವ ಸೂಚಿಸಿದೆ. 


ವಿಶ್ವ ತಾಯಂದಿರ ದಿನವನ್ನು ಪ್ರತೀ ವರ್ಷ ಮೇ 2ನೇ ಭಾನುವಾರದಂದು ಆಚರಿಸಲಾಗುತ್ತದೆ. ಅನ್ನಾ ಮಾರೀ ಜಾರ್ವಿಸ್ ಎಂಬ ಮಹಿಳೆ ಅಮೇರಿಕಾದಲ್ಲಿ ತಾಯಿಗಾಗಿ ಒಂದು ದಿನವನ್ನು ಮೀಸಲಿಡಬೇಕೆಂದು ನಿರಂತರವಾಗಿ ಸರ್ಕಾರವನ್ನು ಒತ್ತಾಯಿಸಿದ ಫಲವಾಗಿ ಅಮೇರಿಕಾದ 28ನೇ ಅಧ್ಯಕ್ಷರಾದ ಥೋಮಸ್ ವೂಡ್ರೂ ವಿಲ್ಸನ್ ಸರ್ಕಾರ 1914, ಮೇ 9 ರಂದು ಅಮ್ಮಂದಿರಿಗೆ ಸಾರ್ವಜನಿಕವಾಗಿ ಪ್ರೀತಿ ಮತ್ತು ಗೌರವವನ್ನು ತೋರಿಸಲು ಪ್ರತೀ ವರ್ಷ ಮೇ ತಿಂಗಳ 2ನೇ ಭಾನುವಾರವನ್ನು ವಿಶ್ವ ತಾಯಂದಿರ ದಿನವಾಗಿ ಘೋಷಿಸಿತು. ಅಂದಿನಿಂದ ವಿಶ್ವದಾದ್ಯಂತ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ.