ಪ್ರಸಿದ್ಧ ಸಂಗೀತಗಾರ್ತಿ ಗೌಹರ್ ಜಾನ್ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ
ಪ್ರಸಿದ್ಧ ಶಾಸ್ತ್ರಿಯ ಸಂಗೀತಗಾರ್ತಿ ಮತ್ತು ನರ್ತಕಿ ಗೌಹರ್ ಜಾನ್ ಅವರ 145ನೇ ಜನ್ಮದಿಂದ ಅಂಗವಾಗಿ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ನವದೆಹಲಿ: ಪ್ರಸಿದ್ಧ ಶಾಸ್ತ್ರಿಯ ಸಂಗೀತಗಾರ್ತಿ ಮತ್ತು ನರ್ತಕಿ ಗೌಹರ್ ಜಾನ್ ಅವರ 145ನೇ ಜನ್ಮದಿಂದ ಅಂಗವಾಗಿ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
ಮೈಸೂರು ಸಂಸ್ಥಾನದ ಆಸ್ಥಾನ ಗಾಯಕಿಯಾಗಿದ್ದ ಗೌಹರ್ ಜಾನ್ ಅವರು ಅವರು, 26 ಜೂನ್ 1873 ರಂದು ಅಜಮ್ಗಾರ್ನಲ್ಲಿ ಅರ್ಮೇನಿಯನ್ ಮೂಲದ ಏಂಜಲೀನಾ ಯೆವಾರ್ಡ್ ಆಗಿ ಜನಿಸಿದರು. ಭಾರತದಲ್ಲಿ 78 ಆರ್ಪಿಎಂ ದಾಖಲೆಗಳಲ್ಲಿ ಸಂಗೀತವನ್ನು ಧ್ವನಿಮುದ್ರಣ ಮಾಡಿದ ಮೊದಲ ಪ್ರದರ್ಶಕರಲ್ಲಿ ಒಬ್ಬರು. ಇದನ್ನು ಗ್ರಾಮಾಫೋನ್ ಕಂಪನಿ ಆಫ್ ಇಂಡಿಯಾ ಬಿಡುಗಡೆ ಮಾಡಿದೆ. ಗ್ರಾಮಾಫೋನ್ ಕಂಪನಿಯಲ್ಲಿ ಹಾಡಿದ ಮೊದಲ ಗಾಯಕಿ ಇವರಾದ್ದರಿಂದ ಗೌಹರ್ ಜಾನ್ ಅವರನ್ನು 'ಗ್ರಾಮಾಫೋನ್ ಗರ್ಲ್' ಎಂದೇ ಕರೆಯಲಾಗಿದೆ.
ತಮ್ಮ ಜೀವಿತಾವಧಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಭಾಷೆಗಳಲ್ಲಿ 700ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಗೌಹರ್ ಜಾನ್ ನೃತ್ಯದಲ್ಲಿಯೂ ದಾಖಲೆ ನಿರ್ಮಿಸಿದ್ದಾರೆ. ಗೌಹರ್ ತಮ್ಮ ಮೊದಲ ನೃತ್ಯಪ್ರದರ್ಶನವನ್ನು 1887ರಲ್ಲಿ ದರ್ಬಾಂಗ್ ರಾಜ್ ರಾಯಲ್ ಆವರಣದಲ್ಲಿ ನೀಡಿದರು. ನಂತರ ಆಸ್ಥಾನದ ಸಂಗೀತ ಮತ್ತು ನೃತ್ಯಗಾರ್ತಿಯಾಗಿ ನೇಮಕಗೊಂಡ ಇವರನ್ನು 'ಮೊದಲ ನೃತ್ಯ ಹುಡುಗಿ' ಎಂದೇ ಕರೆಯಲಾಯಿತು. ಇವರು 1930 ಜನವರಿ 17ರಂದು ಮೈಸೂರಿನಲ್ಲಿ ನಿಧನರಾದರು. ಇಂದು ಇವರ ಜನ್ಮದಿನದ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ.