ಈ ಬಾರಿಯ ಶಿವರಾತ್ರಿ ವಿಶೇಷವಾಗಿದೆ, ಕೂಡಿ ಬರಲಿದೆ ಈ ಶುಭಯೋಗ
ಈ ಬಾರಿಯ ಮಹಾಶಿವರಾತ್ರಿಯ ವೇಳೆ ಶನಿ ಜೊತೆಗೆ ಚಂದ್ರ ಕೂಡ ಇರಲಿದ್ದು, ವಿಷಯೋಗ ನಿರ್ಮಾಣಗೊಳ್ಳಲಿದೆ ಎನ್ನಲಾಗಿದೆ.
ನವದೆಹಲಿ: ಹಿಂದೂ ಧರ್ಮ ಶಾಸ್ತ್ರದಲ್ಲಿ ದೇವಾದಿದೇವ ಮಹಾದೇವನ ಮೇಲೆ ಭಕ್ತಾದಿಗಳು ಅಪಾರ ಭಕ್ತಿ ಹೊಂದಿದ್ದಾರೆ. ಹೀಗಾಗಿ ಶಿವನಿಗೆ ಖುಷಿ ನೀಡುವ ಮತ್ತು ಶೃದ್ಧೆಯಿಂದ ಕೂಡಿದ ಮಹಾಶಿವರಾತ್ರಿ ವೃತಕ್ಕೆ ತುಂಬಾ ಮಹತ್ವ ನೀಡಲಾಗಿದೆ. ಆದರೆ, ಈ ಬಾರಿಯ ಮಹಾಶಿವರಾತ್ರಿ ಸ್ವಲ್ಪ ವಿಶೇಷವಾಗಿದೆ. ಏಕೆಂದರೆ, ಸುಮಾರು 117 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶನಿ ಹಾಗೂ ಶುಕ್ರ ಯೋಗ ಕೂಡಿ ಬರಲಿದೆ. ಹಾಗೆ ನೋಡಿದರೆ ಶಿವರಾತ್ರಿ (ಚತುರ್ದಶಿ) ಪ್ರತಿ ತಿಂಗಳಿಗೆ ಬರುತ್ತದೆ. ಆದರೆ, ಫಾಲ್ಗುಣಿ ಮಾಸದಲ್ಲಿ ಬರುವ ಮಹಾಶಿವರಾತ್ರಿಗೆ ವಿಶೇಷ ಮಹತ್ವ ನೀಡಲಾಗಿದೆ. ಈ ಬಾರಿ ಮಹಾಶಿವರಾತ್ರಿ ವೃತವನ್ನು ಫೆಬ್ರುವರಿ 21ಕ್ಕೆ ಆಚರಿಸಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಶಿವರಾತ್ರಿಯ ಶುಭ ದಿನದಂದು ಶನಿ ತನ್ನ ಮಕರರಾಶಿಯಲ್ಲಿ ಇರಲಿದ್ದಾನೆ. ಇತ್ತ ಶುಕ್ರ ಕೂಡ ತನ್ನ ಉಚ್ಛ ರಾಶಿಯಾಗಿರುವ ಮೀನ ರಾಶಿಯಲ್ಲಿ ಇರಲಿದ್ದಾನೆ. ಇದೊಂದು ದುರ್ಲಭ ಯೋಗ ಎಂದು ಹೇಳಲಾಗುತ್ತದೆ. ಎರಡು ದೊಡ್ಡ ಗ್ರಹಗಳು ಈ ರೀತಿಯ ವಿಶಿಷ್ಟ ಸ್ಥಿತಿಯಲ್ಲಿರುವುದು ವಿಶೇಷ ಎಂದು ಹೇಳಲಾಗುತ್ತದೆ. ಇದಕ್ಕೂ ಮೊದಲು ಈ ರೀತಿಯ ಯೋಗ ಫೆಬ್ರವರಿ 25, 1903ರಲ್ಲಿ ಕೂಡಿ ಬಂದಿತ್ತು. ಅಂದೂ ಕೂಡ ಮಹಾಶಿವರಾತ್ರಿಯ ದಿನವಾಗಿತ್ತು. ಅಷ್ಟೇ ಅಲ್ಲ ಫೆಬ್ರುವರಿ 21ರ ಮಹಾಶಿವರಾತ್ರಿಯ ದಿನ ಸರ್ವಾರ್ಥ ಸಿದ್ಧಿ ಯೋಗ ಕೂಡ ಕೂಡಿಬಂದಿದೆ. ಅಂದರೆ, ಈ ಬಾರಿ ಗುರು ಕೂಡ ತನ್ನ ಧನು ರಾಶಿಯಲ್ಲಿ ವಿರಾಜಮಾನನಾಗಲಿದ್ದಾನೆ.
ಈ ಯೋಗದಲ್ಲಿ ಶಿವನ ಆರಾಧನೆ ಮಾಡಿದ ಭಕ್ತಾದಿಗಳು ಶನಿ, ಗುರು, ಶುಕ್ರ ದೋಷಗಳಿಂದ ಮುಕ್ತರಾಗಲಿದ್ದಾರೆ. ಈ ಬಾರಿಯ ಶಿವರಾತ್ರಿ ದಿನದಂದು ಯಾವುದೇ ಹೊಸ ಕಾರ್ಯ ಆರಂಭಿಸುವುದು ಶುಭ ಫಲ ನೀಡಲಿದೆ ಎನ್ನಲಾಗಿದೆ. ಶಿವರಾತ್ರಿಯ ಈ ಶುಭ ದಿನದಂದು ಶನಿಯ ಜೊತೆ ಚಂದ್ರ ಕೂಡ ಇರಲಿದ್ದು ವಿಷಯೋಗ ನಿರ್ಮಾಣಗೊಳ್ಳಲಿದೆ. ಇದಕ್ಕೂ ಮೊದಲು 28 ವರ್ಷಗಳ ಹಿಂದೆ ಶಿವರಾತ್ರಿಯ ದಿನದಂದು ವಿಷಯೋಗ ಕೂಡಿ ಬಂದಿತ್ತು.
ಮಹಾ ಶಿವರಾತ್ರಿಯ ದಿನ ಶಿವ ಭಕ್ತರು ಬಮ್-ಬಮ್ ಭೋಲೆ ಹೇಳಿ ಜೈಕಾರ ಹಾಕುತ್ತಾರೆ. ಈ ದಿನ ಶಿವಾಲಯಕ್ಕೆ ಭಕ್ತಾದಿಗಳ ದಂಡೆ ಹರಿದು ಬರುತ್ತದೆ. ಈ ದಿನ ಭಕ್ತರು ಶಿವಲಿಂಗಕ್ಕೆ ಅಭಿಷೇಕ ಕೂಡ ನೆರವೇರಿಸುತ್ತಾರೆ.
ಆದರೆ ಶಿವರಾತ್ರಿಯ ದಿನ ಶಿವನ ವಿಗ್ರಹದ ಬಳಿಕ ಶಿವಲಿಂಗದ ಪೂಜೆ ಏತಕ್ಕಾಗಿ ಮಾಡಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?
ಶಿವಲಿಂಗವನ್ನು ಮಹಾದೇವನ ರೂಪವೆಂದೆ ಪರಿಗಣಿಸಲಾಗುತ್ತದೆ. ಇದೆ ಕಾರಣದಿಂದ ಶಿವಲಿಂಗದ ಪೂಜೆ-ಅರ್ಚನೆ ನೆರವೇರಿಸಲಾಗುತ್ತದೆ. ಶಿವರಾತ್ರಿಯ ಪಾವನ ದಿನದಂದು ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ.
ಶಿವಲಿಂಗದ ಉತ್ಪತ್ತಿ
ಶಿವಲಿಂಗ ಭಗವಾನ್ ಶಿವನ ಪ್ರತೀಕವಾಗಿದೆ. ಶಿವನ ಅರ್ಥ ಕಲ್ಯಾಣ ಎಂದು ಹೇಳಲಾಗಿದ್ದರೆ, ಶಿವಲಿಂಗದ ಅರ್ಥ ಸೃಷ್ಟಿಕರ್ತ ಎಂದು ಹೇಳಲಾಗುತ್ತದೆ. ಶಿವರಾತ್ರಿಯ ದಿನ ಶಿವನನ್ನು ಸೃಷ್ಟಿಕರ್ತನ ರೂಪದಲ್ಲಿ ಪೂಜಿಸಲಾಗುತ್ತದೆ.
ಸಂಸ್ಕೃತದಲ್ಲಿ ಲಿಂಗದ ಅರ್ಥ ಪ್ರತೀಕ. ಹೀಗಾಗಿ ಮಹಾದೇವ ಶಿವನನ್ನು ಅನಂತಕಾಲದ ಪ್ರತೀಕ ಎಂದು ಹೇಳಲಾಗುತ್ತದೆ. ಮಾನ್ಯತೆಗಳ ಅನುಸಾರ ಲಿಂಗದ ಅರ್ಥ ವಿಶಾಲ ಬ್ರಹ್ಮಾಂಡ. ಹೀಗಾಗಿ ಲಿಂಗವನ್ನು ಬ್ರಹ್ಮಾಂಡದ ಪ್ರತೀಕವಾಗಿ ಪೂಜಿಸಲಾಗುತ್ತದೆ.
ಲಿಂಗ ಮಹಾಪುರಾಣ ಏನು ಹೇಳುತ್ತದೆ
ಲಿಂಗ ಮಹಾಪುರಾನದ ಪ್ರಕಾರ ಒಮ್ಮೆ ಬ್ರಹ್ಮ ಹಾಗೂ ವಿಷ್ಣು ದೇವರ ಮಧ್ಯೆ ಯಾರು ಶ್ರೇಷ್ಠ ಎಂಬ ಕುರಿತು ವಿವಾದ ಉಂಟಾಗುತ್ತದೆ. ಇಬ್ಬರು ಕೂಡ ತಮ್ಮ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಲು ಪರಸ್ಪರರನ್ನು ದೂಷಿಸಲು ಆರಂಭಿಸುತ್ತಾರೆ. ಈ ಇಬ್ಬರ ವಿವಾದ ತನ್ನ ಅಂತಿಮ ಘಟ್ಟಕ್ಕೆ ತಲುಪಿದಾಗ, ಅಗ್ನಿ ಜ್ವಾಲೆಯಿಂದ ಆವೃತ್ತಗೊಂಡ ಒಂದು ವಿಶಾಲ ಲಿಂಗ ಉತ್ಪತ್ತಿಯಾಗಿ ಇಬ್ಬರ ಮಧ್ಯೆ ಸ್ಥಾಪಿತಗೊಳ್ಳುತ್ತದೆ.
ಆಗ ಈ ಇಬ್ಬರೂ ಕೂಡ ಲಿಂಗದ ರಹಸ್ಯದ ಕುರಿತು ಅರಿಯಲು ಮುಂದಾಗುತ್ತಾರೆ. ಈ ವೇಳೆ ಬ್ರಹ್ಮ ದೇವ ಲಿಂಗದ ಮೇಲ್ಭಾಗದ ಕಡೆಗೆ ಚಲಿಸಲು ಪ್ರಾರಂಭಿಸುತ್ತಾರೆ ಮತ್ತು ವಿಷ್ಣು ದೇವ ಲಿಂಗದ ಕೆಳಭಾಗದ ಕಡೆಗೆ ಚಲಿಸಲು ಪ್ರಾರಂಭಿಸುತ್ತಾರೆ. ಸಾವಿರಾರು ವರ್ಷಗಳ ಬಳಿಕವೂ ಕೂಡ ಈ ಉಭಯರು ಕುರಿತಾದ ರಹಸ್ಯ ಪತ್ತೆಹಚ್ಚುವಲ್ಲಿ ವಿಫಲರಾಗುತ್ತಾರೆ ಹಾಗೂ ತಮ್ಮ ತಮ್ಮ ಸೋಲನ್ನು ಒಪ್ಪಿಕೊಳ್ಳುತ್ತಾರೆ. ಅವರು ಪುನಃ ತಾವು ಲಿಂಗವನ್ನು ನೋಡಿದ ಸ್ಥಾನಕ್ಕೆ ಬಂದು ತಲುಪುತ್ತಾರೆ.
ಲಿಂಗದ ಬಳಿ ಈ ಉಭಯರು ತಲುಪಿದ ಬಳಿಕ ಅವರಿಗೆ ಲಿಂಗದ ಒಳಗಿನಿಂದ 'ಓಂ' ಸ್ವರ ಕೇಳಿಬರಲು ಆರಂಭಿಸುತ್ತದೆ. ಬಳಿಕ ಈ ಇಬ್ಬರು ಲಿಂಗವನ್ನು ಆರಾಧಿಸುತ್ತಾರೆ. ಇದರಿಂದ ಮಹಾದೇವ ಪ್ರಸನ್ನರಾಗಿ ಲಿಂಗದಿಂದ ಪ್ರಕಟಗೊಳ್ಳುತ್ತಾರೆ ಮತ್ತು ಬ್ರಹ್ಮ ಹಾಗೂ ವಿಷ್ಣು ದೇವರಿಗೆ ಸದ್ಭುದ್ಧಿಯ ವರದಾನ ನೀಡುತ್ತಾರೆ. ಅಂದಿನಿಂದ ಲಿಂಗ ರೂಪದಲ್ಲಿಯೇ ಶಿವನ ಆರಾಧನೆ ಮಾಡಲಾಗುತ್ತದೆ.