ನವದೆಹಲಿ: ಕರ್ನಾಟಕ ಸಂಗೀತದ ಪ್ರಖ್ಯಾತ ಗಾಯಕಿ  ಎಂ.ಎಸ್.ಸುಬ್ಬುಲಕ್ಷ್ಮಿ ಇಂದು ಬದುಕಿದ್ದರೆ ಅವರಿಗೆ 105 ವರ್ಷಗಳು ತುಂಬುತ್ತಿತ್ತು, ಅವರು ಭಾರತ ರತ್ನ ಹಾಗೂ ಪ್ರತಿಷ್ಠಿತ ರಾಮನ್ ಮ್ಯಾಗಸಸ್ಸೇ ಪುರಸ್ಕಾರವನ್ನು ಪಡೆದ ಮೊದಲ ಗಾಯಕಿ ಎನ್ನುವ ಶ್ರೇಯವನ್ನು ಹೊಂದಿದ್ದಾರೆ.


COMMERCIAL BREAK
SCROLL TO CONTINUE READING

 ಎಂ.ಎಸ್.ಸುಬ್ಬುಲಕ್ಷ್ಮಿ (M S Subbulakshmi) ಸೆಪ್ಟೆಂಬರ್ 16, 1916 ರಂದು ಮಧುರೈನಲ್ಲಿ ವೀಣಾ ವಾದಕರಾದ ಷಣ್ಮುಖವಡಿವೆರ್ ಅಮ್ಮಾಳ್ ಮತ್ತು ಸುಬ್ರಹ್ಮಣ್ಯ ಅಯ್ಯರ್ ದಂಪತಿಗೆ ಜನಿಸಿದರು. ಅವರು ಚಿಕ್ಕ ವಯಸ್ಸಿನಲ್ಲಿಯೇ ಕರ್ನಾಟಕ ಸಂಗೀತದಲ್ಲಿ, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರ ಅಡಿಯಲ್ಲಿ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪಂಡಿತ್ ನಾರಾಯಣರಾವ್ ವ್ಯಾಸರವರಲ್ಲಿ ತರಬೇತಿಯನ್ನು ಪಡೆದರು. ಮುಂದೆ 1929 ರಲ್ಲಿ 13ನೇ ವಯಸ್ಸಿನಲ್ಲಿ ಮೊದಲ ಕಾರ್ಯಕ್ರಮವನ್ನು ನೀಡಿದರು.ನಂತರ ಅವರು 1940 ರಲ್ಲಿ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ಮತ್ತು ಪತ್ರಕರ್ತರಾದ ಕಲ್ಕಿ ಸದಾಶಿವಂ ಅವರನ್ನು ವಿವಾಹವಾದರು.


ಇದನ್ನೂ ಓದಿ: ಎಂ ಜಿ ಆರ್ & ಎಂ.ಎಸ್.ಸುಬ್ಬಲಕ್ಷ್ಮೀ ನೆನಪಿಗಾಗಿ 100ರೂ. ನಾಣ್ಯಗಳ ಮುದ್ರಣ


ಸುಬ್ಬುಲಕ್ಷ್ಮಿ ಮದ್ರಾಸ್‌ಗೆ ತೆರಳಿ1938 ರಲ್ಲಿ ಸೇವಾಸದನ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಅವರು ಚಿತ್ರದಲ್ಲಿಯೂ ನಟಿಸಿದರು.ಅವರ ಇತರ ಚಿತ್ರಗಳಲ್ಲಿ ಸಾವಿತ್ರಿ ಮತ್ತು ಮೀರಾ ಸೇರಿವೆ.ಆದಾಗ್ಯೂ, ಅವರು ಸಂಗೀತದ ಮೇಲೆ ವಿಶೇಷ ಗಮನಹರಿಸಲು ಕೆಲವು ವರ್ಷಗಳ ನಂತರ ಚಲನಚಿತ್ರಗಳನ್ನು ತೊರೆದರು.


ಸುಬ್ಬುಲಕ್ಷ್ಮಿ ಅವರ ಕೆಲವು ಪ್ರಮುಖ ಗಾಯನದಲ್ಲಿ ಸುಪ್ರಭಾತಂ, ಕುರೈ ಒನ್ರುಮ್ ಇಲ್ಲೈ, ಭಜಗೋವಿಂದಂ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ, ಇತರ ಭಕ್ತಿಗೀತೆಗಳು ಸೇರಿವೆ.


ಇದನ್ನೂ ಓದಿ: IPL 2021 ರ ಆದಾಯದಿಂದ 100 ಕೋಟಿ ಕ್ಲಬ್‌ಗೆ ಸೇರಿದ ಈ ಆಟಗಾರರು!


ಸುಬ್ಬುಲಕ್ಷ್ಮಿ ಅವರು ತಮಿಳು, ಕನ್ನಡ, ಸಂಸ್ಕೃತ, ಪಂಜಾಬಿ, ಹಿಂದಿ, ಮಲಯಾಳಂ, ತೆಲುಗು, ಬಂಗಾಳಿ, ಗುಜರಾತಿ ಮತ್ತು ಮರಾಠಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಭಕ್ತಿ ಸಂಗೀತದ ರೂಪಗಳನ್ನು ಪ್ರದರ್ಶಿಸಿದರು.ಅವರು ಲಂಡನ್, ನ್ಯೂಯಾರ್ಕ್, ಕೆನಡಾ ಮತ್ತು ಇತರ ಸ್ಥಳಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಪ್ರಯಾಣಿಸಿದರು ಮತ್ತು 1966 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿಯೂ ಅವರು ಸಂಗೀತ ಕಚೇರಿಯನ್ನು ನೀಡಿದರು. 


ಎಂ.ಎಸ್ ಸುಬ್ಬುಲಕ್ಷ್ಮಿ ಅವರು ಡಿಸೆಂಬರ್ 11, 2004 ರಂದು ತಮ್ಮ 88 ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.