ಗೃಹ ಪ್ರವೇಶ ಮಾಡುವ ಮುನ್ನ ಈ ಸಂಗತಿಗಳನ್ನು ನೆನಪಿಡಿ, ಸುಖ ಹಾಗೂ ಸಮೃದ್ಧಿ ನಿಮ್ಮದಾಗುತ್ತದೆ
ಹಿಂದೂ ಧರ್ಮದಲ್ಲಿ ನೂತನ ಗೃಹ ಪ್ರವೇಶ ಮಾಡುವ ವೇಳೆ ಹಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಲಾಗುತ್ತದೆ. ಈ ಸಂಗತಿಗಳು ಮನೆಯ ಸುಖ-ಶಾಂತಿಗಾಗಿ ಅತ್ಯಾವಶ್ಯಕವಾಗಿವೆ.
ನವದೆಹಲಿ: ಹೊಸ ಮನೆಗೆ ಪ್ರವೇಶಿಸುವ(Grihapravesh) ಸಮಯದಲ್ಲಿ, ನಮ್ಮ ಮನಸ್ಸಿನಲ್ಲಿ ನಿರೀಕ್ಷೆಗಳ ಅಲೆಯೇ ಸೃಷ್ಟಿಯಾಗಿರುತ್ತದೆ. ಹೊಸ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಮತ್ತು ಸಂಪತ್ತಿನ ಕೊರತೆ ಇರಬಾರದು ಎಂದು ಎಲ್ಲರೂ ಬಯಸುತ್ತಾರೆ. ಹಿಂದೂ ಧರ್ಮದಲ್ಲಿ ಹೊಸ ಗ್ರಹವನ್ನು ಪ್ರವೇಶಿಸುವಾಗ, ಮನೆಯ ಸಂತೋಷ ಮತ್ತು ಶಾಂತಿಗೆ ಅಗತ್ಯವಾದ ಅನೇಕ ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆ. ಇಂದು ನಾವು ಇದೇ ರೀತಿಯ ವಿಷಯಗಳ ಬಗ್ಗೆ ಹೇಳುತ್ತಿದ್ದೇವೆ.
ಇದನ್ನು ಓದಿ- ಕರಿಕೆಯ ಈ ಅದ್ಭುತ ಗುಣಗಳಿಂದ ದೂರವಾಗಲಿದೆ ದೌರ್ಭಾಗ್ಯ, ಸಕಲ ಸಿದ್ಧಿ ನಿಮ್ಮದಾಗಲಿದೆ
ಸನಾತನ ಸಂಸ್ಕೃತಿಯಲ್ಲಿ
ಗೃಹ ಪ್ರವೇಶಕ್ಕಾಗಿ ಶುಭ ಮುಹೂರ್ತವನ್ನು ಗಮನದಲ್ಲಿಟ್ಟುಕೊಳ್ಳಿ. ದಿನ, ತಿಥಿ, ವಾರ ಹಾಗೂ ನಕ್ಷತ್ರ ಇತ್ಯಾದಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ಗೃಹ ಪ್ರವೇಶಕ್ಕೆ ಮಾಘ, ವೈಶಾಖ, ಜೇಷ್ಠ ಹಾಗೂ ಫಾಲ್ಗುಣ ಮಾಸಗಳು ಶುಭ ಎಂದು ಹೇಳಲಾಗುತ್ತದೆ. ಆಶಾಢ, ಭಾದ್ರಪದ, ಅಷಿವಿನಿ, ಪೌಷ್ಯ ಹಾಗೂ ಶ್ರಾವಣ ಮಾಸಗಳನ್ನು ಗೃಹ ಪ್ರವೇಶಕ್ಕೆ ಉತ್ತಮ ಎಂದು ಹೇಳಲಾಗುವುದಿಲ್ಲ.
ಮಂಗಳವಾರವನ್ನು ಬಿಟ್ಟು ಉಳಿದ ಯಾವುದೇ ವಾರದಂದು ನೀವು ಗೃಹ ಪ್ರವೇಶ ಮಾಡಬಹುದು. ಆದರೆ, ಕೆಲ ವಿಶಿಷ್ಠ ಪರಿಸ್ಥಿತಿಗಳಲ್ಲಿ ಶನಿವಾರ ಹಾಗೂ ಭಾನುವಾರ ಕೂಡ ಗೃಹ ಪ್ರವೇಶ ಉಚಿತ ಎಂದು ಹೇಳಲಾಗುವುದಿಲ್ಲ.
ಇದನ್ನು ಓದಿ- ಹಿಂದೂ ಧರ್ಮಶಾಸ್ತ್ರದಲ್ಲಿ ಯಜ್ಞದ ಮಹತ್ವವೇನು? ಹವನಕ್ಕಿಂತ ಹೇಗೆ ಭಿನ್ನ?
ಮನೆಯನ್ನು ತೋರಣ, ರಂಗೋಲಿ, ಹೂವುಗಳಿಂದ ಅಲಂಕರಿಸಿ ಹಾಗೂ ಮಂಗಳ ಕಲಶದೊಂದಿಗೆ ಮನೆಯನ್ನು ಪ್ರವೇಶಿಸಿಸಬೇಕು. ಮಂಗಳ ಕಲಶದಲ್ಲಿ ಶುದ್ಧ ನೀರು ತುಂಬಿ ಶ್ರೀಫಲ (ತೆಂಗಿನ ಕಾಯಿ ) ಇರಿಸಬೇಕು. ತೆಂಗಿನ ಕಾಯಿಯನ್ನು ಅಶೋಕ ಮರ ಅಥವಾ ಮಾವಿನ ಮರದ 8 ಎಳೆಗಳ ಮಧ್ಯೆ ಇರಿಸಬೇಕು. ಕಲಶ ಹಾಗೂ ತೆಂಗಿನ ಕಾಯಿಯ ಮೇಲೆ ಕುಂಕುಮದಿಂದ ಸ್ವಸ್ತಿಕ್ ಚಿನ್ಹೆಯನ್ನು ಬಿಡಿಸಿ.
ಮನೆ ಪ್ರವೇಶದ ವೇಳೆ ಮನೆಯ ಒಡೆಯ ಹಾಗೂ ಒಡತಿ ತೆಂಗಿನ ಕಾಯಿ, ಅರಿಶಿಣ, ಬೆಲ್ಲ, ಅಕ್ಕಿ, ಹಾಲನ್ನು ತಮ್ಮೊಂದಿಗೆ ತೆಗೆದುಕೊಂಡು ಮನೆ ಪ್ರವೇಶ ಮಾಡಬೇಕು.
ಗೃಹ ಪ್ರವೇಶದ ದಿನ ಹೊಸ ಮನೆಯಲ್ಲಿ ಶ್ರೀಗಣೇಶನ ವಿಗ್ರಹವನ್ನು ಮನೆಗೆ ಕೊಂಡೊಯ್ಯಬೇಕು.
ಇದನ್ನು ಓದಿ- ಮನೆಯಲಿ ಸುಖ-ಶಾಂತಿ ಹಾಗೂ ಧನ-ಧಾನ್ಯ ಅಭಿವೃದ್ಧಿಗೆ ಮನೆಯ ಮುಖ್ಯದ್ವಾರದ ಕಾಳಜಿ ವಹಿಸಿ
ಗೃಹ ಪ್ರವೇಶದ ಪೂಜಾ ಸಾಮಗ್ರಿ
ಕಲಶ, ತೆಂಗಿನಕಾಯಿ, ದೀಪ, ಪುಷ್ಪಗಳು, ಶುಧ ಜಲ, ಕುಂಕುಮ, ಅಕ್ಕಿ, ಅಬಿರ್- ಗುಲಾಲ್, ಧೂಪ ಬತ್ತಿ, ಐದು ಶುಭ ಮಾಂಗಲಿಕ ವಸ್ತುಗಳು, ಮಾವು ಅಥವಾ ಅಶೋಕ ಮರದ ಎಳೆಗಳು, ಅರಿಶಿಣ, ಬೆಲ್ಲ, ಹಾಲು ಇತ್ಯಾದಿ.