ನವದೆಹಲಿ: ಸನಾತನ ಸಂಸ್ಕೃತಿಯಲ್ಲಿ ನಡೆಸಲಾಗುವ ವಿವಿಧ ಪೂಜೆಗಳ ಪೂಜಾ (Puja) ಸಾಮಗ್ರಿಗಳಲ್ಲಿ ಕರಿಕೆಗೆ ಅತ್ಯಂತ ಪವಿತ್ರ ಎಂದು ಭಾವಿಸಲಾಗಿದೆ. ಹಾಗಾದರೆ ಬನ್ನಿ ಈ ಪವಿತ್ರ ಕರಿಕೆಯ ಮೂಲಕ ಸುಖ-ಸಮೃದ್ಧಿ ಹಾಗೂ ಸೌಭಾಗ್ಯವನ್ನು ಪಡೆಯಬೇಕು ಎಂಬುದನ್ನು ತಿಳಿಯೋಣ. ಕರಿಕೆಯನ್ನು ದುರ್ವಾ, ಅಮೃತಾ, ಅನಂತಾ, ಮಹಾಔಷಧಿ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತವೆ. ನಮ್ಮ ದೇಶದಲ್ಲಿ ಅರಿಶಿನ ಹಾಗೂ ಕರಿಕೆಯನ್ನು ಬಳಸದೆ ಇರುವ ಯಾವುದೇ ಶುಭಕಾರ್ಯಗಲಿಲ್ಲ. ವಿವಾಹ ಸಮಾರಂಭಗಳಲ್ಲಿ ಕರಿಕೆಯ ಕಡ್ಡಿಯಿಂದ ಅರಿಶಿಣವನ್ನು ಸಿಂಪಡಿಸಲಾಗುತ್ತದೆ. ಸೌಭಾಗ್ಯ ಎಲ್ಲ ದಿಕ್ಕುಗಳಲ್ಲಿ ಪಸರಿಸಲಾಗುತ್ತಿದೆ ಎಂಬುದು ಇದರ ಹಿಂದಿನ ನಂಬಿಕೆ. ವಿಘ್ನವಿನಾಶಕ ಎಂದೇ ಕರೆಯಲಾಗುವ ಶ್ರೀಗಣೇಶನ ಪೂಜೆಯಲ್ಲಿ ಕರಿಕೆಗೆ ವಿಶೇಷ ಮಹತ್ವವಿದೆ. ಕರಿಕೆಯಿಂದ ಹೇಗೆ ಸುಖ-ಸಮೃದ್ಧಿ ಹಾಗೂ ಸೌಭಾಗ್ಯವನ್ನು ಸಾಧಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ


COMMERCIAL BREAK
SCROLL TO CONTINUE READING

ಇದನ್ನು ಓದಿ- Temple At Home: ಮನೆಯಲ್ಲಿ ದೇವರ ಕೋಣೆಯ ಕುರಿತಾದ ಈ ಸಂಗತಿಗಳ ವಿಶೇಷ ಕಾಳಜಿ ವಹಿಸಿ


ಸಮುದ್ರ ಮಂಥನದ ಜೊತೆಗೆ ಸಂಬಂಧ ಹೊಂದಿದೆ ಮಂಗಳಕಾರಿ ಕರಿಕೆಯ ಕಥೆ
ಸಮುದ್ರ ಮಂಥನದ ವೇಳೆ ದೇವತೆಗಳು  ರಾಕ್ಷಸರಿಂದ ಅಮೃತದ ಕಲಶವನ್ನು  ಹೊತ್ತೊಯ್ಯುತ್ತಿದ್ದಾಗ, ಅದರ ಕೆಲವು ಹನಿಗಳು ಭೂಮಿಯಲ್ಲಿ ಬೆಳೆದ ಕರಿಕೆ ಹುಲ್ಲಿನ ಮೇಲೆ ಬಿದ್ದವು ಎಂದು ಹೇಳಲಾಗುತ್ತದೆ. ಇದೆ ಕಾರಣಕ್ಕೆ ನೀವು  ಪದೇ ಪದೇ ಕಿತ್ತುಹಾಕಿದ ನಂತರವೂ ಕರಿಕೆ ಪುನರುಜ್ಜೀವನಗೊಳ್ಳುತ್ತದೆ ಎನ್ನಲಾಗಿದೆ.


ಇದನ್ನು ಓದಿ- ಅಧಿಕ ಮಾಸದಲ್ಲಿ ಈ 10 ವಸ್ತುಗಳನ್ನು ದಾನ ಮಾಡುವುದರಿಂದ ಸಿಗುತ್ತೆ 10 ಪಟ್ಟು ಲಾಭ


ಕರಿಕೆಯಿಂದ ಗಣೇಶ ದುಃಖಗಳನ್ನು ದೂರಗೊಳಿಸುತ್ತಾರೆ
ಪಂಚ ದೇವರಲ್ಲಿ ಮೊದಲು ಪೂಜಿಸಲ್ಪಡುವ ಗಣಪತಿಯ ಅರ್ಚನೆಯ ವೇಳೆ ಕರಿಕೆಯನ್ನು ವಿಶೇಷವಾಗಿ ಅರ್ಪಿಸಲಾಗುತ್ತದೆ. ಮಾನ್ಯತೆಗಳ ಪ್ರಕಾರ ಯಾರು ಗಣೇಶನ ಪೂಜೆಯವೆಲೆ ಗಣೇಶನಿಗೆ ಕರಿಕೆಯನ್ನು ಅರ್ಪಿಸುತ್ತಾರೋ ಅವರಿಗೆ ಕುಬೇರನಂತೆಯೇ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಎಲ್ಲೆಡೆ ಸುಲಭವಾಗಿ ಕಂಡುಬರುವ ಈ ದುರ್ವಾ ಗಣಪತಿಗೆ ಅರ್ಪಿಸುವ ಮೂಲಕ ವಿಶೇಷ ಅನುಗ್ರಹವನ್ನು ಪಡೆಯಬಹುದುದುರ್ವಾವನ್ನು ಅರ್ಪಿಸುವ ಮೂಲಕ ಸಂತಸಗೊಂಡ ಗಣಪತಿ ಎಲ್ಲಾ ಸಂಕಷ್ಟ ಹಾಗೂ ಅಡೆತಡೆಗಳನ್ನು ನಿವಾರಿಸುತ್ತಾನೆ ಎಂಬುದು ಕೂಡ ಒಂದು ಧಾರ್ಮಿಕ ನಂಬಿದೆ.


ಇದನ್ನು ಓದಿ- ಮನೆಯಲಿ ಸುಖ-ಶಾಂತಿ ಹಾಗೂ ಧನ-ಧಾನ್ಯ ಅಭಿವೃದ್ಧಿಗೆ ಮನೆಯ ಮುಖ್ಯದ್ವಾರದ ಕಾಳಜಿ ವಹಿಸಿ