Temple At Home: ಮನೆಯಲ್ಲಿ ದೇವರ ಕೋಣೆಯ ಕುರಿತಾದ ಈ ಸಂಗತಿಗಳ ವಿಶೇಷ ಕಾಳಜಿ ವಹಿಸಿ

ಪ್ರತಿಯೊಂದು ಮನೆಯಲ್ಲಿ ದೇವರಮನೆ ಇರುತ್ತದೆ  ಮತ್ತು ಜನರು ಅಲ್ಲಿ ನಿತ್ಯ ದೇವರನ್ನು ಪೂಜಿಸುತ್ತಾರೆ. 

Last Updated : Sep 19, 2020, 05:25 PM IST
  • ಪ್ರತಿಯೊಂದು ಮನೆಯಲ್ಲಿ ದೇವರಮನೆ ಇರುತ್ತದೆ.
  • ಮನೆಯ ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆ ನಿರ್ಮಿಸುವುದು ಉತ್ತಮ.
  • ವಿಗ್ರಹ ಚೌರಸದ ಮೇಲೆ ಸ್ಥಾಪನೆಯಾಗುತ್ತಿದೆ ಎಂಬುದರ ಬಗ್ಗೆ ಕಾಳಜಿ ವಹಿಸಿ.
Temple At Home: ಮನೆಯಲ್ಲಿ ದೇವರ ಕೋಣೆಯ ಕುರಿತಾದ ಈ ಸಂಗತಿಗಳ ವಿಶೇಷ ಕಾಳಜಿ ವಹಿಸಿ  title=

ನವದೆಹಲಿ: ಪ್ರತಿಯೊಂದು ಮನೆಯಲ್ಲಿ ದೇವರಮನೆ (Puja Room) ಇರುತ್ತದೆ  ಮತ್ತು ಜನರು ಅಲ್ಲಿ ನಿತ್ಯ ದೇವರನ್ನು ಪೂಜಿಸುತ್ತಾರೆ. ಆದರೆ ಅನೇಕ ಬಾರಿ ಜನರು ದೇವಾಲಯವನ್ನು ಅಲಂಕರಿಸುವಾಗ ಮತ್ತು ಅದನ್ನು ಮನೆಯಲ್ಲಿ ಸ್ಥಾಪಿಸುವಾಗ ಕೆಲವು ತಪ್ಪುಗಳು ನಡೆದುಹೋಗುತ್ತವೆ ಮತ್ತು ಅವುಗಳ ಬಗ್ಗೆ ಜನರು ಅನಭಿಗ್ಯರಾಗಿರುತ್ತಾರೆ. ಒಂದು ವೇಳೆ ನೀವೂ ಕೂಡ  ಮನೆಯಲ್ಲಿ ದೇವರ ಕೋಣೆ ಹೊಂದಿದ್ದರೆ,  ನಿಮ್ಮ ಪೂಜಾ ಸ್ಥಳವು ಮನೆಯ ಸೌಂದರ್ಯವನ್ನು ಹೆಚ್ಚಿಸಬೇಕು ಎಂಬುದನ್ನು ನೆನಪಿನಲ್ಲಿಡಿ.

Also Read- ಶಿವನ ಪ್ರಸಾದ ಎಂದೇ ಪರಿಗಣಿಸಲ್ಪಡುವ ಈ ಬೀಜದಲ್ಲಿವೆ ಚಮತ್ಕಾರಿಕ ಗುಣಗಳು

ಮನೆಯಲ್ಲಿ ದೇವರ ಕೋಣೆ ಇದ್ದರೆ ಅದು  ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಜನರಿಗೆ ದೇವರ ಬಗ್ಗೆ ಪ್ರೀತಿ ಮತ್ತು ನಂಬಿಕೆ ಇದೆ. ಅಲ್ಲದೆ, ಮನೆಯ ಶಕ್ತಿಯೂ ಉತ್ತಮವಾಗಿರುತ್ತದೆ. ಆದರೆ ನಿಮ್ಮ ಮನೆಯಲ್ಲಿ ನೀವು ತಪ್ಪಾದ ಸ್ಥಳದಲ್ಲಿ ದೇವರ ಕೋಣೆ ನಿರ್ಮಿಸಿದ್ದರೆ, ಅದರಿಂದಾಗುವ ಶುಭ ಫಲ ನಿಮಗೆ ಸಿಗುವುದಿಲ್ಲಆದ್ದರಿಂದ ಇಂದು ನಾವು ನಿಮ್ಮ ಮನೆಯಲ್ಲಿ ದೇವರು ಮತ್ತು ದೇವತೆಗಳನ್ನು ಹೇಗೆ ಪೂರ್ಣ ಪ್ರೀತಿ ಮತ್ತು ಗೌರವದಿಂದ ಸ್ಥಾಪಿಸಬಹುದು ಎಂದು ಹೇಳಲಿದ್ದೇವೆ.

Also Read- Gayatri Mantraದ ಈ 7 ಲಾಭಗಳು ನಿಮಗೂ ತಿಳಿದಿರಲಿ

ದೇವರ ಕೋಣೆ ಯಾವ ಸ್ಥಳದಲ್ಲಿ ಇರಬೇಕು?
ಮನೆಯ ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆ ನಿರ್ಮಿಸುವುದು ಉತ್ತಮ. ಒಂದು ವೇಳೆ ಇದು ಸಾಧ್ಯವೇ ಇಲ್ಲ ಎಂದಾದಲ್ಲಿ ನೀವು ಪೂಜೆ ಮಾಡುವಾಗ ನಿಮ್ಮ ಮುಖ ಪೂರ್ವ ದಿಕ್ಕಿನೆಡೆಗೆ ಇರುವಂತೆ ಕಾಳಜಿ ವಹಿಸಿ. ಒಂದು ಬಾರಿ ಪೂಜಾ ಸ್ಥಳವನ್ನು ನೀವು ನಿಗದಿಪಡಿಸಿದರೆ ಅದನ್ನು ಪದೆ ಪದೆ ಬದಲಾಯಿಸಬೇಡಿ. ಒಂದು ವೇಳೆ ನೀವು ದೇವರ ಕೊಠಡಿಗೆ ಬಣ್ಣ ಹಚ್ಚಲು ನಿರ್ಧರಿಸಿದ್ದಾರೆ ಗೋಡೆಗಳಿಗೆ ತಿಳಿ ಹಳದಿ ಬಣ್ಣ ಉತ್ತಮ. ಇಲ್ಲದಿದ್ದರೆ. ಬಣ್ಣ ಗಾಢವಾಗಿರಬಾರದು ಎಂಬ ಎಚ್ಚರಿಕೆ ವಹಿಸಿ.

Also Read- ಜೀವನದಲ್ಲಿ ಶಾಂತಿಯ ಜೊತೆಗೆ ಸೌಭಾಗ್ಯ ನಿಮ್ಮದಾಗಿಸಲು ವಾಸ್ತುಶಾಸ್ತ್ರದ ಪ್ರಕಾರ ಮನೆಯನ್ನು ಪೇಂಟ್ ಮಾಡಿ

ದೇವರ ಸ್ಥಾಪನೆಯ ವೇಳೆ ಇವುಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
ಪ್ರತಿಯೊಬ್ಬರಿಗೂ ತಮ್ಮ ಇಷ್ಟದ ದೇವ-ದೇವತೆಗಳಿರುತ್ತಾರೆ. ಒಂದು ವೇಳೆ ನೀವೂ ಕೂಡ ಅವರಲ್ಲಿ ಒಬ್ಬರಾಗಿದ್ದರೆ, ನಿಮ್ಮ ಇಷ್ಟ ದೇವರ ವಿಗ್ರಹ ಅಥವಾ ಭಾವಚಿತ್ರವನ್ನು ಪ್ರತಿಷ್ಠಾಪಿಸಲು ಮರೆಯಬೇಡಿ.  ವಿಗ್ರಹ ಚೌರಸದ ಮೇಲೆ ಸ್ಥಾಪನೆಯಾಗುತ್ತಿದೆ ಎಂಬುದರ ಬಗ್ಗೆ ಕಾಳಜಿ ವಹಿಸಿ. ಉಳಿದ ದೇವ-ದೇವತೆಗಳನ್ನು ನಿಮ್ಮ ಇಷ್ಟದ ಹಾಗೆ ದೇವರ ಕೋಣೆಯಲ್ಲಿ ಪ್ರತಿಷ್ಟಾಪಿಸಿ. ಪೂಜಾಸ್ಥಳದಲ್ಲಿ ಶಂಖ, ಗೋಮತಿ ಚಕ್ರ ಹಾಗೂ ಪಾತ್ರೆಯಲ್ಲಿ ನೀರನ್ನು ಕೂಡ ಇರಿಸಬಹುದು.

Also Read- ಕಂಕಣ ಬಲ ಕೂಡಿ ಬರಲು ತಡವಾಗುತ್ತಿದ್ದರೆ, ಈ ಗ್ರಹವನ್ನು ಬಲಪಡಿಸುವುದು ಅಗತ್ಯ

Trending News