ನವದೆಹಲಿ: 2019 ರ ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 26 ರಂದು ವರ್ಷದ ಕೊನೆಯಲ್ಲಿ ಸಂಭವಿಸಲಿದೆ. ಇದನ್ನು ವಾರ್ಷಿಕ ಸೂರ್ಯಗ್ರಹಣ ಎಂದೂ ಕೂಡ ಕರೆಯುತ್ತಾರೆ. ಈ ಸೂರ್ಯಗ್ರಹಣ(Solar Eclipse) ಭಾರತದಲ್ಲಿ ಮಾತ್ರವಲ್ಲದೆ ಆಸ್ಟ್ರೇಲಿಯಾ, ಆಫ್ರಿಕಾದ ಜೊತೆಗೆ ಏಷ್ಯಾದ ಇತರ ಅನೇಕ ಸ್ಥಳಗಳಲ್ಲಿಯೂ ಕಂಡುಬರುತ್ತದೆ. ವರ್ಷದ ಕೊನೆಯ ಸೂರ್ಯಗ್ರಹಣದಲ್ಲಿ ಕೇವಲ ಒಂದು ತಿಂಗಳು ಮಾತ್ರ ಉಳಿದಿದೆ. ವಿಶೇಷವಾಗಿ, ಇದು ಭಾರತದ ಕೇರಳದ ಚೆರುವಾತೂರ್ನಲ್ಲಿ ಕಾಣಿಸುತ್ತದೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING


ಸೂರ್ಯಗ್ರಹಣ ಹೇಗೆ ಮತ್ತು ಯಾವಾಗ ಸಂಭವಿಸುತ್ತದೆ?
ಭೂಮಿಯ ಮತ್ತು ಸೂರ್ಯನ ನಡುವೆ ಚಂದ್ರನು ತನ್ನ ಸ್ಥಳದಿಂದ ಚಲಿಸಿದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಇದರಲ್ಲಿ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋಗುತ್ತಾನೆ ಮತ್ತು ಭೂಮಿಯಿಂದ ನೋಡಿದಾಗ ಸೂರ್ಯನು ಸಂಪೂರ್ಣವಾಗಿ ಅಥವಾ ಭಾಗಶಃ ಚಂದ್ರನಿಂದ ಆವೃತವಾಗಿರುತ್ತದೆ. ಈ ಸಮಯದಲ್ಲಿ, ಭೂಮಿಯು ಸೂರ್ಯ ಮತ್ತು ಚಂದ್ರನ ಸುತ್ತ ಸುತ್ತುತ್ತದೆ.



ಸೂರ್ಯ ಗ್ರಹಣದ ಸಮಯ?
ಸೂರ್ಯ ಗ್ರಹಣ ಡಿಸೆಂಬರ್ 26 ರಂದು ಬೆಳಿಗ್ಗೆ 8.17 ರಿಂದ ಪ್ರಾರಂಭವಾಗಲಿದ್ದು, 2 ಗಂಟೆಗಳ 4 ನಿಮಿಷಗಳ ನಂತರ ಅಂದರೆ  ಬೆಳಿಗ್ಗೆ 10 ಗಂಟೆ 57 ನಿಮಿಷಕ್ಕೆ ಕೊನೆಗೊಳ್ಳುತ್ತದೆ.



ಧಾರ್ಮಿಕ ನಂಬಿಕೆಗಳು:
ಹಲವು ಜನರು ಸೂರ್ಯ ಮತ್ತು ಚಂದ್ರ ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು ಎಂದು ನಂಬುತ್ತಾರೆ. ಗರ್ಭಿಣಿಯರು, ಮಕ್ಕಳು ಮನೆಯಿಂದ ಹೊರಬರದಂತೆ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಸಾಮಾನ್ಯವಾಗಿ ಎಲ್ಲಾ ದೇವಾಲಯಗಳ ಬಾಗಿಲು ಸಹ ಮುಚ್ಚಿರುತ್ತದೆ. ಗ್ರಹಣದ ಸಮಯದಲ್ಲಿ ಆಹಾರ ಸೇವಿಸಬಾರದು. ಗ್ರಹಣದ ನಂತರ ಸ್ನಾನ ಮಾಡಬೇಕು. ಯಾರೂ ಕೂಡ ಬರಿಗಣ್ಣಿನಿಂದ ಸೂರ್ಯನ ಕಡೆಗೆ ನೋಡಬಾರದು.


ಗಮನಿಸಿ: ಈ ವರ್ಷ ಈವರೆಗೆ 3 ಸೂರ್ಯಗ್ರಹಣಗಳು ಮತ್ತು 2 ಚಂದ್ರ ಗ್ರಹಣಗಳು ಸಂಭವಿಸಿದೆ.