Makar Sankranti Recipe: ಮಕರ ಸಂಕ್ರಾಂತಿಯಂದು ಎಳ್ಳು ಮತ್ತು ಬೆಲ್ಲದಿಂದ ಮಾಡಿದ ಭಕ್ಷ್ಯಗಳನ್ನು ತಯಾರಿಸುವ ಸಂಪ್ರದಾಯ ಹಿಂದಿನಿಂದಲೂ ಚಾಲ್ತಿಯಲ್ಲಿದೆ.  ಆದರೆ  ನಿಮಗೆ ಎಳ್ಳುವಿನಲ್ಲಿ ಲಡ್ಡು ಮಾಡಲು ಬರದಿದ್ದರೆ, ನಾವು ಹೇಳುವ ಆರೋಗ್ಯಕರವಾದ ಈ ಹಲ್ವಾವನ್ನು ಟ್ರೈ ಮಾಡಿ ನೋಡಿ. ಎಳ್ಳಿನಿಂದ ತಯಾರಿಸಿದ ಈ ಲಡ್ಡುಗಳು ಸಂಪ್ರದಾಯದಲ್ಲಿ ಮಾತ್ರವಲ್ಲದೆ ರುಚಿಯಲ್ಲೂ ಅದ್ಭುತವಾಗಿರುತ್ತದೆ. ಎಳ್ಳು ಲಡ್ಡುಗಳನ್ನು ಮಾಡಲು ಸಮಯವಿಲ್ಲದವರಿಗೂ ಈ ಪಾಕವಿಧಾನ  ಸಹಾಯವಾಗಲಿದೆ. ಈ ಪಾಕವನ್ನು ತಯಾರಿಸಲು ಕೇವಲ 15-20 ನಿಮಿಷಗಳು ಸಾಕು ಅಷ್ಟರಲ್ಲೇ ಟೇಸ್ಟಿ ಹಲ್ವಾ ತಯಾರಾಗುತ್ತದೆ. ಇದನ್ನು ಮಾಡುವ ಈ ಕೆಳಗಿನ ವಿಧಾನಗಳನ್ನು ಬಳಸಿಕೊಳ್ಳಿ..


COMMERCIAL BREAK
SCROLL TO CONTINUE READING

 ಹಲ್ವಾ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:


* ಒಂದು ನಾಲ್ಕನೇ ಕಪ್ ದೇಸಿ ತುಪ್ಪ
* ಅರ್ಧ ಕಪ್ ಎಳ್ಳು


ಇದನ್ನೂ ಓದಿ: Makar Sankranti 2024: ಪ್ರತಿ ರಾಜ್ಯದಲ್ಲಿ ವಿಭಿನ್ನವಾಗಿ ಮಕರ ಸಂಕ್ರಾಂತಿ ಆಚರಣೆ


* ಒಂದು ನಾಲ್ಕನೇ ಕಪ್ ರವೆ
* ಅರ್ಧ ಚಮಚ ಏಲಕ್ಕಿ ಪುಡಿ
* ಅರ್ಧ ಕಪ್ ಬೆಲ್ಲ


 ಮಾಡುವ ವಿಧಾನ:


- ಮೊದಲನೆಯದಾಗಿ ಎಳ್ಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.
- ನಂತರ ನೀರನ್ನು ಫಿಲ್ಟರ್ ಮಾಡಿ ಅಥವಾ ತೆಗೆಯಿರಿ.


ಇದನ್ನೂ ಓದಿ:  ಮಕರ ಸಂಕ್ರಾಂತಿ ದಿನ ಈ ಕೆಲಸ ಮಾಡಿದರೆ ದೌರ್ಭಾಗ್ಯ ಸೌಭಾಗ್ಯವಾಗಿ ಬದಲಾಗುವುದಂತೆ !


- ಎಳ್ಳನ್ನು ರಾತ್ರಿಯಿಡೀ ನೆನೆಸದಿದ್ದರೆ, ಬಿಸಿ ನೀರಿನಲ್ಲಿ ಒಂದು ಗಂಟೆ ನೆನೆಸಿ ಮುಚ್ಚಿ. ಚೆನ್ನಾಗಿ ಊದಿಕೊಳ್ಳುತ್ತದೆ.
- ಈಗ ನೀರನ್ನು ಫಿಲ್ಟರ್ ಮಾಡಿ ಮತ್ತು ನೆನೆಸಿದ ಎಳ್ಳನ್ನು ಮಿಕ್ಸರ್ ಜಾರ್ನಲ್ಲಿ ರುಬ್ಬಿಕೊಳ್ಳಿ.
- ಇದನ್ನು ನೀರಿಲ್ಲದೆ ರುಬ್ಬಿಕೊಳ್ಳುವುದನ್ನು ನೆನೆಪಿನಲ್ಲಿಡಿ.
- ದಪ್ಪ ತಳವಿರುವ ಪ್ಯಾನ್ ತೆಗೆದುಕೊಳ್ಳಿ.
- ದೇಸಿ ತುಪ್ಪವನ್ನು ಬಿಸಿ ಮಾಡಿದ ನಂತರ ರವೆಯನ್ನು ಸಣ್ಣ ಉರಿಯಲ್ಲಿ ಗೋಲ್ಡನ್ ಆಗುವವರೆಗೆ ಹುರಿತುಕೊಳ್ಳಿ.
- ರವೆ ಹುರಿದ ನಂತರ, ಅದರೊಂದಿಗೆ ರುಬ್ಬಿದ ಎಳ್ಳು ಸೇರಿಸಿ.
- ಈಗ ಎಳ್ಳನ್ನು ಕಡಿಮೆ ಉರಿಯಲ್ಲಿ ನಿರಂತರವಾಗಿ ಹುರಿಯಿರಿ. ಎಳ್ಳು ಗೋಲ್ಡನ್ ಆಗುವವರೆಗೆ ಪ್ರೈ ಮಾಡಿ.


ಇದನ್ನೂ ಓದಿ: ಮಕರ ಸಂಕ್ರಾಂತಿಯಂದು ಈ ವಿಶೇಷ ವಸ್ತುವನ್ನು ಮನೆಯ ಈ ದಿಕ್ಕಿನಲ್ಲಿಡಿ: ನೀವು ಮಿಲಿಯನೇರ್ ಆಗುತ್ತಿರಿ.


- ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಎಳ್ಳನ್ನು ಹುರಿದುಕೊಳ್ಳಿ ನಂತರ, ಅರ್ಧ ಕಪ್ ನೀರು ಸೇರಿಸಿ.
- ಸಣ್ಣ ತುಂಡುಗಳಾಗಿ ಕತ್ತರಿಸಿದ ಬೆಲ್ಲವನ್ನು ಸಹ ಸೇರಿಸಿ.
- ಇದರಿಂದ ಬೆಲ್ಲ ಸುಲಭವಾಗಿ ಕರಗುತ್ತದೆ.
- ಚೆನ್ನಾಗಿ ಬೆರೆಸಿ ಅದನ್ನು ಬೇಯಿಸಿ.
- ನೀರು ಆರಿ ಬೆಲ್ಲ ಪೂರ್ತಿ ಕಲಸಿದ ಮೇಲೆ ಹಲ್ವಾಗೆ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.
- ಗ್ಯಾಸ್  ಆಫ್ ಮಾಡಿ ಮತ್ತು ಸಣ್ಣದಾಗಿ ಕೊಚ್ಚಿದ ಒಣ ಹಣ್ಣುಗಳನ್ನು ಸೇರಿಸಿ. ಈಹ ಬಿಸಿ ಬಿಸಿ ಹಲ್ವಾ ರೆಡಿ ಇದನ್ನು ನೀವು ನಿಮ್ಮ ಕುಟುಂಬದವರೊಂದಿಗೆ ಸವಿಯಿರಿ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.