Navratri 2020: ಈ ಬಾರಿಯ ನವರಾತ್ರಿಯಲ್ಲಿ ನಿರ್ಮಾಣಗೊಳ್ಳಲಿದೆ ಈ ವಿಶಿಷ್ಠ ಸಂಯೋಗ
ಈ ಬಾರಿ ಅಧಿಕ ಮಾಸ ಬಂದಿರುವುದರಿಂದ ಶಾರದೀಯ ನವರಾತ್ರಿ ಉತ್ಸವ ಒಂದು ತಿಂಗಳು ತಡವಾಗಿ ಬರಲಿದೆ.
ನವದೆಹಲಿ: ಈ ಬಾರಿ ಅಧಿಕ ಮಾಸ ಬಂದಿರುವುದರಿಂದ ಶಾರದೀಯ ನವರಾತ್ರಿ (Sharadiya Navratri) ಉತ್ಸವ ಒಂದು ತಿಂಗಳು ತಡವಾಗಿ ಬರಲಿದೆ. ಈ ವರ್ಷ ಅಕ್ಟೋಬರ್ 17 ರಂದು ಶಾರದೀಯ ನವರಾತ್ರಿ ಉತ್ಸವ ಘಟಸ್ಥಾಪನೆಯೊಂದಿಗೆ ಆರಂಭಗೊಳಲಿದೆ. ಅದಕ್ಕೂ ಮುಂಚಿನ ದಿನ ಅಮಾವಾಸ್ಯೆ ಇರಲಿದೆ. ಆದರೆ ಈ ಬಾರಿ ಅಮಾವಾಸ್ಯೆ ಹಾಗೂ ನವರಾತ್ರಿಯ ನಡುವೆ ಒಂದು ತಿಂಗಳ ಕಾಲಾವಕಾಶ ಇದೆ. ಅಧಿಕ ಮಾಸ ಬಂದ ಕಾರಣ ಈ ಸಂಯೋಗ ಸೃಷ್ಟಿಯಾಗುತ್ತಿದೆ.
ಇದನ್ನು ಓದಿ- Navratri 2020: ಕರೋನಾ ಅವಧಿಯಲ್ಲಿ ನವರಾತ್ರಿ ಹಬ್ಬಕ್ಕೆ ಗುಜರಾತ್‌ನಲ್ಲಿ ನಡೆದಿದೆ ಸಿದ್ಧತೆ
ಅಷ್ಟೇ ಅಲ್ಲ ಈ ಬಾರಿಯ ನವರಾತ್ರಿಯಲ್ಲಿ ಅನೇಕ ವಿಶೇಷ ಸಂಯೋಗಗಳು ಸೃಷ್ಟಿಯಾಗಲಿವೆ. ಈ ಬಾರಿ 10 ದಿನಗಳದಾಗಿದೆ. ನವರಾತ್ರಿಯ 9 ದಿನಗಳಲ್ಲಿ ದೇವಿ ದುರ್ಗೆಯ ಒಂಬತ್ತು ವಿವಿಧ ರೂಪಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಈ ನವರಾತ್ರಿಯಲ್ಲಿ ಗ್ರಹಗಳ ಸ್ಥಿತಿಗತಿ ಗಮನಿಸಿದರೆ ವಿಶಿಷ್ಠ ಸಂಯೋಗಗಳು ಸೃಷ್ಟಿಯಾಗುತ್ತಿವೆ. ಈ ಬಾರಿಯ ನವರಾತ್ರಿಯಲ್ಲಿ ರಾಜಯೋಗ, ದ್ವಿಪುಷ್ಕರ್ ಯೋಗ, ಸಿದ್ಧಿಯೋಗ, ಸರ್ವಾರ್ಥ್ ಸಿದ್ಧಿಯೋಗ ಹಾಗೂ ಅಮೃತಯೋಗಗಳಂತಹ ಹಲವು ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಇನ್ನೊಂದೆಡೆ ಈ ಬಾರಿ ಶನಿವಾರ ನವರಾತ್ರಿ ಆರಂಭಗೊಳ್ಳುತ್ತಿದ್ದು, ಒಂಬತ್ತು ದಿನಗಳಲ್ಲಿ ಒಟ್ಟು ಎರಡು ಶನಿವಾರಗಳು ಬರಲಿವೆ. ನವರಾತ್ರಿಯ ಸಮಯದಲ್ಲಿ ಮಾತೆ ದುರ್ಗೆಯ ಪಠಣ ತುಂಬಾ ಉತ್ತಮವಾಗುರುತ್ತದೆ ಎನ್ನಲಾಗುತ್ತದೆ.
ಇದನ್ನು ಓದಿ - ಕೇತುವಿನ ರಾಶಿ ಪರಿವರ್ತನೆಯಿಂದ ಕಿರಿಕಿರಿಗೋಳ್ಳಬೇಡಿ, ಈ ಉಪಾಯ ಅನುಸರಿಸಿ
ಈ ವರ್ಷ ನವರಾತ್ರಿಯಲ್ಲಿ ಮಾತೆ ದುರ್ಗೆ ಕುದುರಾಯ ಮೇಲೆ ಸವಾರಿ ನಡೆಸಿ ಬರಲಿದ್ದಾಳೆ. ದೇವಿ ದುರ್ಗೆಯ ವಾಹನದಿಂದ ಭವಿಷ್ಯದ ಹಲವು ಸಂಕೇತಗಳು ದೊರೆಯುತ್ತವೆ ಎನ್ನಲಾಗುತ್ತದೆ. ದೇವಿ ದುರ್ಗೆ ಈ ಬಾರಿ ಕುದುರೆ ಸವಾರಿ ನಡೆಸಿ ಬರುತ್ತಿರುವ ಕಾರಣ ಇದನ್ನು ಶುಭ ಸಂಕೇತ ಎಂದು ಹೇಳಲಾಗುತ್ತಿಲ್ಲ. ಅಕ್ಟೋಬರ್ 17 ರಂದು ಪ್ರತಿಪದಾದಂದು ಅಭಿಜೀತ ಮುಹೂರ್ತದಲ್ಲಿ ಘಟಸ್ಥಾಪನೆ ಮಾಡುವುದು ಉತ್ತಮ.