ನವದೆಹಲಿ: ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ಹೋಳಿ ಹಬ್ಬ, ದೀಪಾವಳಿಯ ಬಳಿಕ ರಕ್ಷಾ ಬಂಧನ ಅತಿ ದೊಡ್ಡ ಹಬ್ಬವೆಂದೇ ಪರಿಗಣಿಸಲಾಗುತ್ತದೆ. ಈ ವಿಶೇಷ ಪರ್ವದ ಪ್ರಯುಕ್ತ ಸಹೋದರಿ ತನ್ನ ಸಹೋದರನ ಕೈಗೆ ರಕ್ಷೆಗಾಗಿ ಸೂತ್ರ ಕಟ್ಟುವುದರ ಜೊತೆಗೆ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾಳೆ. ಬದಲಾಗಿ ಸಹೋದರ ತನ್ನ ಸಹೋದರಿಗೆ ಸದೈವ ರಕ್ಷಿಸುವ ವಚನ ನೀಡುತ್ತಾನೆ. ಈ ಹಬ್ಬ ಸಹೋದರ-ಸೋದರಿಯರ ನಡುವಿನ ಪ್ರೀತಿಯ ಬಿಡಿಸಲಾಗದ ಬಂಧವಾಗಿದೆ. ಈ ಬಾರಿಯ ರಕ್ಷಾ ಬಂಧನದ ದಿನ ನಿರ್ಮಾಣಗೊಳ್ಳುತ್ತಿರುವ ವಿಶೇಷ ಶುಭ ಯೋಗ 29 ವರ್ಷಗಳ ದೀರ್ಘಾವಧಿಯ ಬಳಿಕ ನಿರ್ಮಾಣಗೊಳ್ಳುತ್ತಿದೆ ಎಂದು ಜೋತಿಷ್ಯಾಚಾರ್ಯರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ರಕ್ಷಾ ಬಂಧನದ ಪವಿತ್ರ ಹಬ್ಬ ಶ್ರಾವಣ ತಿಂಗಳ ಪೌರ್ಣಿಮೆಯಂದು ಆಚರಿಸಲಾಗುತ್ತದೆ. ಈ ಬಾರಿ ಈ ಹಬ್ಬ ಶ್ರಾವಣ ಮಾಸದ ಎರಡನೆಯ ಸೋಮವಾರ ಅಂದರೆ ಆಗಸ್ಟ್ 3ರಂದು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಪಂಡೀತರ ಅನುಸಾರ ಈ ಬಾರಿಯ ರಕ್ಷಾಬಂಧನ ವಿಶೇಷವಾಗಿರಲಿದೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬಂದಿರುವ ಈ ಪರ್ವದಂದು ಸರ್ವಾರ್ಥ ಸಿದ್ಧಿ ಹಾಗೂ ದೀರ್ಘಾಯುಗಳ ಶುಭ ಸಂಯೋಗ ಸಂಭವಿಸಲಿದೆ. ಇದೆ ಕಾರಣದಿಂದ ಈ ಬಾರಿಯ ರಕ್ಷಾ ಬಂಧನ ವಿಶೇಷ ಎಂದು ಹೇಳಲಾಗುತ್ತದೆ.


ಶುಭ ಮುಹೂರ್ತ
ರಕ್ಷಾ ಬಂಧನದ ಶುಭ ಮೂಹುರ್ತ ಬೆಳಗ್ಗೆ 9 ಗಂಟೆ 30 ನಿಮಿಷದಿಂದ ಪ್ರಾರಂಭವಾಗಲಿವೆ. ಮಧ್ಯಾಹ್ನ 1 ಗಂಟೆ 35 ನಿಮಿಷಗಳಿಂದ ಸಂಜೆ 4:35ರವರೆಗೆ ಅತ್ಯಂತ ಶುಭ ಗಳಿಗೆ ಇದೆ ಎನ್ನಲಾಗುತ್ತಿದೆ. ಇದಾದ ಬಳಿಕ ಸಾಯಂಕಾಲ 7 ಗಂಟೆ 30 ನಿಮಿಷಗಳಿಂದ ಹಿಡಿದು ರಾತ್ರಿ 9.3೦ರ ಮಧ್ಯೆಯೂ ಕೂಡ ಉತ್ತಮ ಮೂಹೂರ್ತ ಇದೆ ಎನ್ನಲಾಗುತ್ತಿದೆ. ಆದರೆ, ರಾಖಿಯ ಸೂತ್ರ ಕಟ್ಟುವ ಕಾಲ ಭದ್ರಾಕಾಲವಾಗಿರಬಾರದು. ಲಂಕಾಧೀಶ ರಾವಣನಿಗೆ ಆತನ ಸಹೋದರಿ ಭದ್ರಾ ಕಾಲದಲ್ಲಿಯೇ ರಾಖಿ ಕಟ್ಟಿದ್ದಳು. ಹೀಗಾಗಿಯೇ ದಶಾಸನನ ಅವಸಾನವಾಯಿತು ಎಂದು ಹೇಳಲಾಗುತ್ತಿದೆ.  


ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟುವ ವೇಳೆ ಈ ಕೆಳಗೆ ಹೇಳಲಾದ ಮಂತ್ರವನ್ನು ಉಚ್ಚರಿಸಿದರೆ ಶುಭ ಪರಿಣಾಮ ಬೀರಲಿದೆ. ಈ ರಕ್ಷಾ ಸೂತ್ರದ ವರ್ಣನೆ ಮಹಾಭಾರತದಲ್ಲಿಯೂ ಕೂಡ ಹೇಳಲಾಗಿದೆ.


ಓಂ ಏನಃ ಬದ್ಧೋ ಬಲಿ ರಾಜಾ ದಾನವೆಂದ್ರೋ ಮಹಾಬಲಃ
ತೇನ ತ್ವಾಮಪಿ ಬಂಧಾಮಿ ರಕ್ಷೆ ಮಾ ಚಲಾ