ಪುರಿ ಜಗನ್ನಾಥ ರಥಯಾತ್ರೆಗೆ ಸುಪ್ರೀಂಕೋರ್ಟ್ ನಿಷೇಧ
ರಥಯಾತ್ರೆ ನಿಲ್ಲಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಭಗವಾನ್ ಜಗನ್ನಾಥರಿಗೆ ಕ್ಷಮೆಯಾಚಿಸಿದೆ.
ನವದೆಹಲಿ: ಕೊರೊನಾವೈರಸ್ ಬಿಕ್ಕಟ್ಟಿನಿಂದಾಗಿ ಒಡಿಶಾದ ಪುರಿಯಲ್ಲಿ ಭಗವಾನ್ ಜಗನ್ನಾಥರ ರಥಯಾತ್ರೆ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಸುಪ್ರೀಂ ಕೋರ್ಟ್ (Supreme Court) ನಿಷೇಧಿಸಿದೆ. ಜೂನ್ 23 ರಂದು ಪುರಿಯಲ್ಲಿ ರಥಯಾತ್ರೆ ನಡೆಯಬೇಕಿತ್ತು, ಈ ಕಾರ್ಯಕ್ರಮವು ಸುಮಾರು 10 ದಿನಗಳವರೆಗೆ ನಡೆಯಲಿದ್ದು ಇದರಲ್ಲಿ 10 ರಿಂದ 12 ಲಕ್ಷ ಜನರು ಸೇರುತ್ತಾರೆಂದು ನಿರೀಕ್ಷಿಸಲಾಗಿತ್ತು,
ಆದರೆ ಕರೋನಾವೈರಸ್ (Coronavirus) ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಈ ರಥಯಾತ್ರೆಗೆ ನಿಷೇಧ ಹೇರಿರುವ ಸುಪ್ರೀಂಕೋರ್ಟ್ ರಥಯಾತ್ರೆ ನಿಲ್ಲಿಸಿದ್ದಕ್ಕಾಗಿ ಭಗವಾನ್ ಜಗನ್ನಾಥರಿಗೆ ಕ್ಷಮೆಯಾಚಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ನಾವು ಇದನ್ನು ಅನುಮತಿಸಿದರೆ ಭಗವಾನ್ ಜಗನ್ನಾಥರು ನಮ್ಮನ್ನು ಕ್ಷಮಿಸುವುದಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಇಂತಹ ಘಟನೆಗಳು ನಡೆಯಲು ಸಾಧ್ಯವಿಲ್ಲ. ಜನರ ಆರೋಗ್ಯಕ್ಕಾಗಿ ಈ ಆದೇಶ ಅಗತ್ಯ ಎಂದು ಹೇಳಿದ್ದಾರೆ.
ಬಿಕ್ಕಟ್ಟಿನಲ್ಲಿ ಭಗವಂತನ ಖಜಾನೆ
ರಥಯಾತ್ರೆ ನಿಷೇಧದ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ರಥಯಾತ್ರೆಗೆ ಸಿದ್ಧತೆಗಳು ತೀವ್ರವಾಗಿ ನಡೆಯುತ್ತಿವೆ ಎಂದು ಉಲ್ಲೇಖಿಸಿ ಕಳೆದ ವಾರ ಎನ್‌ಜಿಒವೊಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಇದರಲ್ಲಿ ರಥಯಾತ್ರೆಯಲ್ಲಿ ಲಕ್ಷಾಂತರ ಜನಸಮೂಹ ಸೇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕರೋನಾ ಸಾಂಕ್ರಾಮಿಕ ರೋಗ ಹರಡಬಹುದು. ಈ ದೃಷ್ಟಿಯಿಂದ ಪುರಿ ಜಗನ್ನಾಥರ ರಥಯಾತ್ರೆಯನ್ನು ನಿಷೇಧಿಸುವಂತೆ ಮನವಿ ಮಾಡಲಾಗಿತ್ತು.