ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ರಚಿತವಾದ ಚಿತ್ರಗಳು ಅಂತರ್ಜಾಲದಲ್ಲಿ ಜನಪ್ರಿಯವಾಗಿವೆ.ದೆಹಲಿಯು ಭವಿಷ್ಯದಲ್ಲಿ ಮಾಲಿನ್ಯದ ವಿರುದ್ಧ ಹೋರಾಡುವುದನ್ನು ದೃಶ್ಯೀಕರಿಸುವುದರಿಂದ  ಹಿಡಿದು ಗಗನಯಾತ್ರಿಗಳನ್ನು ವಧುಗಳಂತೆ ಕಲ್ಪಿಸಿಕೊಳ್ಳುವವರೆಗೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಚಿತ ಚಿತ್ರಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ


ಈಗ ತಾಜ್ ಮಹಲ್ ಅದರ ನಿರ್ಮಾಣದ ಸಮಯದಲ್ಲಿ ಹೇಗಿರಬಹುದೆಂದು ತೋರಿಸಲು ಕಲಾವಿದರೊಬ್ಬರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು ಬಳಸಿ ರಚಿಸಿದ್ದಾರೆ.ಚಿತ್ರಗಳನ್ನು ಕಲಾವಿದ ಜ್ಯೋ ಜಾನ್ ಮುಳ್ಳೂರ್ ಅವರು ತಮ್ಮ ಇನ್ಸ್ತಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ,"ಹಿಂದಿನ ಒಂದು ನೋಟ! ಷಹಜಹಾನ್ ಅವರ ಅದ್ಭುತ ಪರಂಪರೆ, ತಾಜ್ ಮಹಲ್, ಅದರ ನಿರ್ಮಾಣದ ಸಮಯದಲ್ಲಿ ಸೆರೆಹಿಡಿಯಲಾಗಿದೆ.ಈ ಅಪರೂಪದ ಫೋಟೋಗಳನ್ನು ಅವರ ಅನುಮತಿ ಪತ್ರದ ಜೊತೆಗೆ ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತಿದೆ" ಎಂದು ಅವರು ಬರೆದುಕೊಂಡಿದ್ದಾರೆ.


ಹೊಗೆನಕಲ್ನಲ್ಲಿ ಹಗಲು ದರೋಡೆ: ₹750 ಬೋಟಿಂಗ್ ಗೆ ₹3500 ಶುಲ್ಕ- ಪ್ರವಾಸಿಗರ ಆಕ್ರೋಶ


ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಚಿತ್ರಗಳ ಮೊದಲ ಕೆಲವು ಚಿತ್ರಗಳು ತಾಜ್ ಮಹಲ್ ನಿರ್ಮಾಣ ಹಂತದಲ್ಲಿದ್ದು,ಹಿನ್ನೆಲೆಯಲ್ಲಿ ಕೆಲಸಗಾರರಿದ್ದಾರೆ.ಕೊನೆಯ ಚಿತ್ರಗಳು ತಾಜ್ ಮಹಲ್ ಅದರ ಪ್ರಸ್ತುತ ರೂಪದಲ್ಲಿ ಪೂರ್ಣಗೊಂಡಿದೆ ಎಂದು ತೋರಿಸುತ್ತದೆ.ಸ್ಲೈಡ್‌ನ ಕೊನೆಯಲ್ಲಿ ಷಹಜಹಾನ್‌ನಿಂದ ಬರೆದ ಪತ್ರವೂ ಇದೆ.ಕಲಾವಿದ ಜ್ಯೋ ಜಾನ್ ಮುಳ್ಳೂರ್ ಅವರು ಹಂಚಿಕೊಂಡಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಚಿತ ಚಿತ್ರಗಳನ್ನು ನೋಡಿದ ಮೇಲೆ ಬಳಕೆದಾರರು "ಶಾಜಹಾನ್ ಬೇರೆ ಜಗತ್ತಿನಲ್ಲಿ ವಾಸಿಸುತ್ತಿದ್ದಾರೆಂದು ಪ್ರಮಾಣೀಕರಿಸಿದ್ದಾರೆ"ಎಂದು ಬರೆದಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.