ಪ್ರವಾಸಕ್ಕೆ ತೆರಳಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

Gaint Bee Attack School Students:  ಬೆಟ್ಟದ ಮೇಲೆ ಪ್ರವಾಸ ಮುಗಿಸಿ ಬೆಟ್ಟದಿಂದ ಇಳಿಯುತ್ತಿದ್ದ ವೇಳೆ ಸಂಜೆ ಐದು ಗಂಟೆ ಸಮಯದಲ್ಲಿ ಶಿಕ್ಷಕರು ಸೇರಿದಂತೆ ಶಾಲಾ ಮಕ್ಕಳ ಮೇಲೆ ದಾಳಿ ಹೆಜ್ಜೇನು ದಾಳಿ ಮಾಡಿರುವುದಾಗಿ ವರದಿಯಾಗಿದೆ. 

Written by - Yashaswini V | Last Updated : Apr 11, 2023, 03:08 PM IST
  • ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಬಿಜಿ ವೇಣು ಶಾಲೆಯ 70 ಮಕ್ಕಳು ಶಿಕ್ಷಕರೊಂದಿಗೆ ಚಿಂತಾಮಣಿ ತಾಲೂಕಿನ ಕೆಂದನಹಳ್ಳಿ ಬಳಿಯ ತಪತೇಶ್ವರ ಬೆಟ್ಟಕ್ಕೆ‌ ಹೋಗಿದ್ದರು.
  • ಬೆಟ್ಟದ ಮೇಲೆ ಪ್ರವಾಸ ಮುಗಿಸಿ ಬೆಟ್ಟದಿಂದ ಇಳಿಯುತ್ತಿದ್ದ ವೇಳೆ ಸಂಜೆ ಐದು ಗಂಟೆ ಸಮಯದಲ್ಲಿ ಶಿಕ್ಷಕರು ಸೇರಿದಂತೆ ಶಾಲಾ ಮಕ್ಕಳ ಮೇಲೆ ದಾಳಿ ಹೆಜ್ಜೇನು ದಾಳಿ ಮಾಡಿರುವುದಾಗಿ ವರದಿಯಾಗಿದೆ.
ಪ್ರವಾಸಕ್ಕೆ ತೆರಳಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ title=

Gaint Bee Attack: ಒಂದು ದಿನದ ಪ್ರವಾಸಕ್ಕೆ ತೆರಳಿದ್ದ ಶಾಲಾ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ  ಚಿಂತಾಮಣಿ ತಾಲೂಕು ಕೆಂದನಹಳ್ಳಿ ಗ್ರಾಮದ ಬಳಿಯ ತಪತೇಶ್ವರ ಬೆಟ್ಟದಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಬಿಜಿ ವೇಣು ಶಾಲೆಯ 70 ಮಕ್ಕಳು ಶಿಕ್ಷಕರೊಂದಿಗೆ ಚಿಂತಾಮಣಿ ತಾಲೂಕಿನ  ಕೆಂದನಹಳ್ಳಿ ಬಳಿಯ ತಪತೇಶ್ವರ ಬೆಟ್ಟಕ್ಕೆ‌ ಹೋಗಿದ್ದರು. ಬೆಟ್ಟದ ಮೇಲೆ ಪ್ರವಾಸ ಮುಗಿಸಿ ಬೆಟ್ಟದಿಂದ ಇಳಿಯುತ್ತಿದ್ದ ವೇಳೆ ಸಂಜೆ ಐದು ಗಂಟೆ ಸಮಯದಲ್ಲಿ ಶಿಕ್ಷಕರು ಸೇರಿದಂತೆ ಶಾಲಾ ಮಕ್ಕಳ ಮೇಲೆ ದಾಳಿ ಹೆಜ್ಜೇನು ದಾಳಿ ಮಾಡಿರುವುದಾಗಿ ವರದಿಯಾಗಿದೆ. 

ಇದನ್ನೂ ಓದಿ- ಹೊಗೆನಕಲ್ನಲ್ಲಿ ಹಗಲು ದರೋಡೆ: ₹750 ಬೋಟಿಂಗ್ ಗೆ ₹3500 ಶುಲ್ಕ- ಪ್ರವಾಸಿಗರ ಆಕ್ರೋಶ

ಇನ್ನೂ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕೆಂದನಹಳ್ಳಿ ಗ್ರಾಮಸ್ಥರು ಹಾಗೂ ಆಗ್ನಿ ಶಾಮಕ  ದಳದ ಸಿಬ್ಬಂದಿ ಮಕ್ಕಳನ್ನು ರಕ್ಷಣೆ ಮಾಡಿ ಅಂಬುಲೆನ್ಸ್ ಮೂಲಕ ಚಿಂತಾಮಣಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ- ರಾಜ್ಯ ನಾಯಕರ ಜೊತೆ ಕೈ ಹೈಕಮಾಂಡ್ ಸಭೆ ಮುಕ್ತಾಯ : ಕಗ್ಗಂಟಾಗಿ ಉಳಿದ 15 ವಿಧಾನಸಭಾ ಕ್ಷೇತ್ರ

ಸದ್ಯ ಹೆಜ್ಜೇನು ದಾಳಿ ವೇಳೆ ಮಕ್ಕಳನ್ನು ರಕ್ಷಣೆ ಮಾಡಲು‌ ಮುಂದಾದ ಶಿಕ್ಷಕ ನವೀನ್ ರವರಿಗೆ ಹೆಚ್ಚಾಗಿ ಜೇನು ನೋಣುಗಳು ದಾಳಿ ಮಾಡಿರುವ ಕಾರಣ ಶಿಕ್ಷಕನ ಸ್ಥಿತಿ ಸ್ವಲ್ಪ ಮಟ್ಟಿಗೆ ಗಂಭೀರವಾಗಿದ್ದು ಚಿಕಿತ್ಸೆಯನ್ನು ಮುಂದುವರೆದಿದೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News