ರಾಮಾಯಣ ಮಹಾಕಾವ್ಯವು ಭಾರತೀಯ ಉಪಖಂಡದಲ್ಲಿ ಜನಜನೀತವಾಗಿದೆ. ಪ್ರತಿಯೊಬ್ಬರಿಗೂ ಕೂಡ ರಾಮಾಯಣದ ಪಾತ್ರಗಳಿಂದ ಹಿಡಿದು ಅದರ ಕಥೆಯ ಸಾರವು ತಿಳಿದಿರುವಂತದ್ದು. ಹಾಗಾಗಿ ನಾವು ಈಗ ಈ ದೇಗುಲ ದರ್ಶನ ಸರಣಿಯಲ್ಲಿ ರಾಮಾಯಣದಲ್ಲಿ ಬರುವ ಶಬರಿಗಾಗಿಯೇ ನಿರ್ಮಾಣವಾಗಿರುವ ದೇವಸ್ತಾನದ ಬಗ್ಗೆ ಹೇಳಲು ಹೊರಟಿದ್ದೇವೆ.


COMMERCIAL BREAK
SCROLL TO CONTINUE READING

ಹೌದು, ರಾಮನ ಭಕ್ತೆ ಶಬರಿಗೆ ಸಮರ್ಪಿತವಾಗಿರುವ ಈ ದೇವಾಲಯವು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ್ ಪಟ್ಟಣದ ಸಮೀಪವಿರುವ ಕಲ್ಲಿನ ಬೆಟ್ಟದ ಸೀಳಿನಲ್ಲಿದೆ.ಶಬರಿ ಕೊಳ್ಳವು ಅಮವಾಸ್ಯೆ ಮತ್ತು ಕೆಲವು ಹಬ್ಬಗಳಂತಹ ವರ್ಷದಲ್ಲಿ ಕೆಲವು ದಿನಗಳಲ್ಲಿ ಮಾತ್ರ ಜನರನ್ನು ಆಕರ್ಷಿಸುತ್ತದೆ. ಸಹಜವಾಗಿ ವಾರ್ಷಿಕ ಜಾತ್ರೆಯ ಸಮಯದಲ್ಲಿ ಈ ಸ್ಥಳವು ಭಕ್ತರು ಮತ್ತು ಬೀದಿ ಬದಿ ವ್ಯಾಪಾರಿಗಳಿಂದ ತುಂಬಿರುತ್ತದೆ.ಈ ದೇವಸ್ತಾನಕ್ಕೆ ಪ್ರವೇಶಿಸುತ್ತಿದ್ದಂತೆ ನಮಗೆ ನೀರಿನ ಕೊಳ ಎದುರಾಗುತ್ತದೆ.ಇದರ ಹತ್ತಿರದಲ್ಲಿಯೇ ಬಾರಿ ಗಿಡ ಇದೆ.ಈ ದೇವಾಲಯವು ಪುರಾತನವಾಗಿದ್ದು, ಚಾಲುಕ್ಯರ ವಾಸ್ತುಶಿಲ್ಪದ ರಚನೆಯನ್ನು ಹೊಂದಿದೆ. ಸುಮಾರು 800 ರಿಂದ 1000 ವರ್ಷಗಳಷ್ಟು ಹಳೆಯದು ಎಂದೆನಿಸುತ್ತದೆ.


ಶಬರಿಕೊಳ್ಳದ ಇತಿಹಾಸ:


ಪ್ರಭು ಶ್ರೀರಾಮಚಂದ್ರನು ಲಕ್ಷ್ಮಣನ ಸಹಿತ ಶ್ರೀಕ್ಷೇತ್ರ ಶಬರಿಕೊಳ್ಳಕ್ಕೆ ಬಂದು, ಶಬರಿದೇವಿಗೆ ದರ್ಶನ ಕೊಟ್ಟಿದ್ದು ವಾಲ್ಮೀಕಿ ರಾಮಾಯಣದಲ್ಲಿದೆ. ಶಬರಿ ದೇವಾಲಯ ರಾಮಾಯಣ ಕಾಲದ ಘಟನೆಯಿಂದ ಪ್ರಸಿದ್ದಿ ಪಡೆದ ಪವಿತ್ರ ಯಾತ್ರಾ ಸ್ಥಳವೆಂದೇ ಸುಪ್ರಸಿದ್ಧಿ ಪಡೆದ ಪುರಾಣಕ್ಷೇತ್ರವಾಗಿದೆ. ತ್ರೇತಾಯುಗದಲ್ಲಿ ಶಬರಿಯು ರಾಮನ ಭಕ್ತೆಯಾಗಿರುತ್ತಾಳೆ. ರಾಮನ ನೋಡುವ ಸಲುವಾಗಿ ಹಾತೊರೆಯುತ್ತಿರುತ್ತಾಳೆ. ಒಂದು ಸಲ ರಾಮಲಕ್ಷ್ಮಣ ಹನುಮಂತನು ವನವಾಸದಿ ದಾರಿಯುದ್ದ ಹೋಗುತ್ತಿರುವಾಗ ಶಬರಿವನದತ್ತ ಹೋಗುತ್ತಾರೆ. ಶಬರಿದೇವಿ ಅವರಿಗೆ ತಿನ್ನಲು ಹಣ್ಣುಹಂಪಲನ್ನು ಕೊಟ್ಟು ಅವರ ದಣಿವನ್ನು ನೀಗಿಸುತ್ತಾಳೆ.ಅವಳ ಸೇವಾಮನೋಭಾವಕ್ಕೆ ಶ್ರೀರಾಮನು ಮೆಚ್ಚುತ್ತಾನೆ. ಆ ಸ್ಥಳವೇ ಈಗಿನ ರಾಮದುರ್ಗದಿಂದ 15 ಕಿ.ಮಿ. ಅಂತರದಲ್ಲಿರುವ ಶಬರಿಕೊಳ್ಳದ ಶ್ರೀ ಶಬರಿದೇವಿಯ ದೇವಸ್ಥಾನ.


ಸುರೇಬಾನ್ ಎಂಬ ಹೆಸರು ಶಬರಿ ವನ (ಶಬರಿಯ ಉದ್ಯಾನ) ಎಂಬ ಪದದಿಂದ ಹುಟ್ಟಿಕೊಂಡಿರಬಹುದು ಎನ್ನುವ ಮಾತಿದೆ. ಶಬರಿಯು ಶ್ರೀರಾಮನಿಗಾಗಿ ಸುರೇಬನದ ಸಮೀಪವಿರುವ ಸ್ಥಳವನ್ನು ಕಾಯುತ್ತಿದ್ದಳು ಎಂಬ ಪ್ರತೀತಿ ಇದೆ. ಈ ಕ್ಷೇತ್ರವು ‘ಶಬರಿ ಕೊಳ್ಳ’ ಎಂದೇ ಪ್ರಸಿದ್ಧಿ ಪಡೆದಿದೆ. ಸ್ಥಳೀಯರು ಶಬರಿಯನ್ನು ತಾಯಿ ಎಂದು ಪೂಜಿಸುತ್ತಾರೆ.


ಇದನ್ನೂ ಓದಿ: ರೊಚ್ಚಿಗೆದ್ದ ಕುಟುಂಬಸ್ಥರಿಂದ ಬೀಮ್ಸ್ ಆಸ್ಫತ್ರೆ ಎದುರು ದಿಢೀರ್ ಪ್ರತಿಭಟನೆ


ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ್ ಪಟ್ಟಣದ ಸಮೀಪವಿರುವ ಬಂಡೆಯ ಗುಡ್ಡದ ಸೀಳಿನಲ್ಲಿರುವ ಶಬರಿ ಕೊಳ್ಳವು ಶ್ರೀರಾಮನ ಶ್ರದ್ಧಾಭಕ್ತಿಯುಳ್ಳ ಶಬರಿಗೆ ಸಮರ್ಪಿತವಾದ ದೇಗುಲವಾಗಿದೆ.ಈ ಪವಿತ್ರ ತಾಣವು ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯನಿಗೆ ಸಮರ್ಪಿತವಾದ ದೇವಾಲಯಗಳನ್ನು ಸಹ ಒಳಗೊಂಡಿದೆ. ಶ್ರೀರಾಮನು ಕಿಷ್ಕಿಂಧೆಗೆ ಹೋಗುವ ದಾರಿಯಲ್ಲಿ ಸೀತೆಯನ್ನು ಹುಡುಕುತ್ತಿದ್ದಾಗ ಈ ಸ್ಥಳಕ್ಕೆ ಭೇಟಿ ನೀಡಿದನು ಎಂದು ಪುರಾಣ ಹೇಳುತ್ತದೆ.


ಶಬರಿಕೊಳ್ಳದ ಹತ್ತಿರ ಸುಮಾರು ಒಂದೆರಡು ಕಿಲೋಮೀಟರ್ ದೂರದಲ್ಲಿ ಸ್ವಾಮಿ ಶಿವಾನಂದರ (ಸಿದ್ಧಾರೂಡ ಸ್ವಾಮಿಗಳ ಸಮಕಾಲೀನರು) ದೇವಾಲಯವಿದ್ದು, ಅಲ್ಲಿ ಅವರು ಅನೇಕ ವರ್ಷಗಳ ಕಾಲ ಧ್ಯಾನ ಮಾಡಿ ಜ್ಞಾನೋದಯವನ್ನು ಪಡೆದಿದ್ದಾರೆ. ಸ್ವಾಮಿ ಶಿವಾನಂದರ ಮಗ ಸ್ವಾಮಿ ಆತ್ಮಾನಂದ ಕೂಡ ಮಹಾನ್ ಸಂತರಾಗಿದ್ದು ಅವರು ಧಾರವಾಡದಿಂದ ಸುಮಾರು 20 ಕಿಮೀ ದೂರದಲ್ಲಿರುವ ಹಂಗರಕಿ ಗ್ರಾಮದಲ್ಲಿ ಆಶ್ರಮವನ್ನು ಸ್ಥಾಪಿಸಿದರು.ಈ ಆಶ್ರಮವನ್ನು ಸ್ವಾಮಿ ಆತ್ಮಾನಂದರ ಮಗಳು ಮತ್ತು ಮೊಮ್ಮಕ್ಕಳು ನಿರ್ವಹಿಸುತ್ತಿದ್ದಾರೆ.


ಶಬರಿ ಕೊಳ್ಳ ತಲುಪುವುದು ಹೇಗೆ?


ಬೆಳಗಾವಿಯಿಂದ 108 ಕಿ.ಮೀ., ರಾಮದುರ್ಗದಿಂದ 15 ಕಿ.ಮೀ. ಸುರೇಬಾನದಿಂದ 05 ಕಿ.ಮೀ. ಅಂತರದಲ್ಲಿದೆ. ರಾಮದುರ್ಗ ಸುರೇಬಾನ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಶಬರಿಕೊಳ್ಳ ಬಲ ಮಾರ್ಗದಲ್ಲಿ ಸಂಚರಿಸುತ್ತವೆ. ಈ ತಿರುವಿನಿಂದ ದೇವಾಲಯವರೆಗೂ ರಸ್ತೆ ಇದ್ದು ವಾಹನ ಸೌಕರ್ಯ ಕಡಿಮೆ. ಆದರೆ ನಡೆದುಕೊಂಡು ಇಲ್ಲವೇ ಖಾಸಗಿ ವಾಹನ ಅಥವಾ ಆಟೋ ರಿಕ್ಷಾ ಮೂಲಕ 1.5 ಕಿ.ಮೀ. ಹೋಗಬಹುದು.ಇದು ದೇವಾಲಯದ ಪಕ್ಕದಲ್ಲಿ ಮರಗಳು ಮತ್ತು ಎರಡು ಸುಂದರವಾದ ಕೊಳಗಳನ್ನು ಹೊಂದಿರುವ ಸ್ಥಳವಾಗಿದೆ. ಮುಖ್ಯ ಕೊಳಕ್ಕೆ ಸಂಪರ್ಕ ಕಲ್ಪಿಸುವ ಸಣ್ಣ ಕೊಳವಿದೆ. ಕೆರೆಯಲ್ಲಿ ನೀರಿನ ಮಟ್ಟ ವರ್ಷವಿಡೀ ಒಂದೇ ರೀತಿ ಇರುತ್ತದೆ.ಮಹಾತ್ಮಾ ಗಾಂಧಿಯವರ 'ಚಿತಾಬಾಸ್ಮ' (ಚಿತಾಭಸ್ಮ) ಇರಿಸಲಾಗಿರುವ ಭಾರತದ ಕೆಲವೇ ಸ್ಥಳಗಳಲ್ಲಿ ಸುರೇಬಾನ್ ಕೂಡ ಒಂದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.