ಬೆಂಗಳೂರಿನ ವೀರಗಲ್ಲುಗಳ ಬಗ್ಗೆ ಬೆಳಕು ಚೆಲ್ಲುವ ದಿ ಮಿಥಿಕ್ ಸೊಸೈಟಿಯ ಇ-ಪುಸ್ತಕ..!
ಬೆಂಗಳೂರಿನ ಪ್ರತಿಷ್ಠಿತ ದಿ ಮಿಥಿಕ್ ಸೊಸೈಟಿಯು ಶಾಸನಗಳ ದಾಖಲಿಕರಣಕ್ಕೆ ಸಂಬಂಧಿಸಿದಂತೆ ಪುಸ್ತಕವೊಂದನ್ನು ಬಿಡುಗಡೆ ಮಾಡಿದೆ, ಈ ಪುಸ್ತಕ ಬೆಂಗಳೂರಿನಲ್ಲಿರುವ ಶಿಲಾ ಶಾಸನಗಳ ಅಧ್ಯಯನದ ದೃಷ್ಟಿಯಿಂದ ಮಹತ್ವದ ಪಾತ್ರವನ್ನು ವಹಿಸಲಿದೆ ಎನ್ನಲಾಗಿದೆ.
ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ದಿ ಮಿಥಿಕ್ ಸೊಸೈಟಿಯು ಶಾಸನಗಳ ದಾಖಲಿಕರಣಕ್ಕೆ ಸಂಬಂಧಿಸಿದಂತೆ ಪುಸ್ತಕವೊಂದನ್ನು ಬಿಡುಗಡೆ ಮಾಡಿದೆ, ಈ ಪುಸ್ತಕ ಬೆಂಗಳೂರಿನಲ್ಲಿರುವ ಶಿಲಾ ಶಾಸನಗಳ ಅಧ್ಯಯನದ ದೃಷ್ಟಿಯಿಂದ ಮಹತ್ವದ ಪಾತ್ರವನ್ನು ವಹಿಸಲಿದೆ ಎನ್ನಲಾಗಿದೆ.
ಈ ಕುರಿತಾಗಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಮಾಹಿತಿಯೊಂದನ್ನು ಹಂಚಿಕೊಂಡಿರುವ ಮಿಥಿಕ್ ಸೊಸೈಟಿ 'ಈ ಪುಸ್ತಕ ಓದುಗರಿಗೆ, ವೀರಗಲ್ಲುಗಳಿಗೆ ಸಂಬಂಧಿಸಿದಂತೆ ಒಂದು ಒಳನೋಟವನ್ನು ನೀಡುತ್ತದೆ' ಎಂದು ಹೇಳಿದೆ.
ದಿ ಮಿಥಿಕ್ ಸೊಸೈಟಿ ಬೆಂಗಳೂರು ಶಾಸನಗಳ 3ಡಿ ಡಿಜಿಟಲ್ ತಂಡವು, ಫೆಬ್ರವರಿ-2024ರಲ್ಲಿ ಬೆಂಗಳೂರು ಪ್ರದೇಶದಲ್ಲಿ ಕಂಡುಬರುವ ವೀರಗಲ್ಲುಗಳಿಗೆ ಸಂಬಂಧಿಸಿದಂತೆ ಒಂದು ಗೂಗಲ್ ನಕ್ಷೆಯನ್ನು (https://bit.ly/herostonesblr) ಬಿಡುಗಡೆ ಮಾಡಿರುತ್ತದೆ.
ಈ ನಕ್ಷೆಯ ಮೇಲೆ ಸುಮಾರು 1000 ವೀರಗಲ್ಲುಗಳ ಮಾಹಿತಿಯು ಕಂಡುಬರುತ್ತದೆ. ಅಂದರೆ, ವೀರಗಲ್ಲು ಕಂಡುಬರುವ ಸ್ಥಳ, ವೀರಗಲ್ಲಿನ ಪ್ರಕಾರ, ಕಾಲ, ವೀರಗಲ್ಲು ಹಾಗೂ ಆ ಸ್ಥಳದ ಛಾಯಾಚಿತ್ರಗಳು, ದಾಖಲೀಕರಣಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ವೀರಗಲ್ಲಿನ ಮೇಲೆ ಶಾಸನವನ್ನು ಕೆತ್ತಿದ್ದರೆ, ಅದರ ಶಾಸನ ಪಾಠವೂ ಸಹ ಲಭ್ಯವಾಗುತ್ತದೆ. ಇಷ್ಟೆಲ್ಲಾ ಮಾಹಿತಿ ಇದ್ದಾಗ್ಯೂ ಕೂಡ ಓದುಗರಿಗೆ ವೀರಗಲ್ಲುಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಒದಗಿಸುವ ದೃಷ್ಟಿಯಿಂದ ನಮ್ಮ ತಂಡವು ಇಂದು "ಬೆಂಗಳೂರಿನ ವೀರಗಲ್ಲುಗಳ ಪರಿಚಯ : ಒಂದು ಮಾರ್ಗದರ್ಶಿ ಕೈಪಿಡಿ" ಎಂಬ ನೂರಾರು ಬಣ್ಣ-ಬಣ್ಣದ ಚಿತ್ರಗಳು ತುಂಬಿರುವ ebookನ್ನು ಕನ್ನಡ ಭಾಷೆಯಲ್ಲಿ, ಈ Facebook ಪೋಸ್ಟ್ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದೆ.
ನಮ್ಮ ಸುತ್ತಮುತ್ತಲಿನ ಪ್ರತೀ ಹಳ್ಳಿ-ಬಡಾವಣೆಗಳಲ್ಲೂ ವೀರಗಲ್ಲು ಹಾಗೂ ಸ್ಮಾರಕ ಕಲ್ಲುಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಇವುಗಳ ಬಗ್ಗೆ ವಿಚಾರಿಸಿದಾಗ, ಸ್ಥಳೀಯರಿಗೆ ಸ್ಪಷ್ಟವಾದ ತಿಳುವಳಿಕೆ ಇರುವುದಿಲ್ಲ. ಕೆಲವು ಕಡೆ ಇವುಗಳ ಬಗ್ಗೆ ತಾತ್ಸಾರ ಭಾವನೆ. ಹಾಗಾಗಿ ಈ ಭಾವನೆಯನ್ನು ಹೋಗಲಾಡಿಸಿ ಪ್ರತಿಯೊಬ್ಬರೂ ಸಹ ವೀರಗಲ್ಲುಗಳ ಬಗ್ಗೆ ಅವಶ್ಯಕ ಜ್ಞಾನವನ್ನು ಹೊಂದಬೇಕು ಎಂಬ ದೃಷ್ಟಿಯಿಂದ ಈ ebookನ್ನು ಇಂದು ಬಿಡುಗಡೆ ಮಾಡುತ್ತಿದ್ದೇವೆ ಎಂದು ಮಿಥಿಕ್ ಸೊಸೈಟಿ ಹೇಳಿದೆ.
ಈ ಮಾರ್ಗದರ್ಶಿ ಕೈಪಿಡಿಯಲ್ಲಿ ಬೆಂಗಳೂರು ಪ್ರದೇಶದಲ್ಲಿ ಕಂಡುಬರುವ ವಿವಿಧ ಪ್ರಕಾರಗಳ ವೀರಗಲ್ಲುಗಳು ಮತ್ತು ಸ್ಮಾರಕ ಕಲ್ಲುಗಳ ಚಿತ್ರಗಳು, ಡಿಜಿಟಲ್ ಚಿತ್ರಗಳು ಹಾಗೂ ಇವುಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ಮಾಹಿತಿಯನ್ನು ಅಳವಡಿಸಿದ್ದೇವೆ. ಇಷ್ಟು ಮಾತ್ರವಲ್ಲದೇ ವೀರಗಲ್ಲುಗಳ ಬಗ್ಗೆ ಇದುವರೆಗೂ ನಡೆದಿರುವ ಅಧ್ಯಯನಗಳಿಗೆ ಸಂಬಂಧಿಸಿದ ಪುಸ್ತಕಗಳು, ಪಿಹೆಚ್.ಡಿ ಸಂಶೋಧನಾ ಗ್ರಂಥಗಳು ಇನ್ನೂ ಮುಂತಾದ ಆಧಾರಗಳನ್ನು ನೀಡಿದ್ದು, ಇವುಗಳನ್ನು archive.org ಅಂತಹ ಆನ್‌ಲೈನ್ ಡಿಜಿಟಲ್ ಆರ್ಕೈವ್ಸ್‌ಗಳಿಗೆ ಹೈಪರ್ ಲಿಂಕ್ ಮಾಡಲಾಗಿದೆ. ಈ ವಿಧಾನವು ಓದುಗರಿಗೆ, ವೀರಗಲ್ಲುಗಳಿಗೆ ಸಂಬಂಧಿಸಿದಂತೆ ಒಂದು ಒಳನೋಟವನ್ನು ನೀಡುತ್ತದೆ.
"ಬೆಂಗಳೂರಿನ ವೀರಗಲ್ಲುಗಳ ಪರಿಚಯ : ಒಂದು ಮಾರ್ಗದರ್ಶಿ ಕೈಪಿಡಿ" ಎಂಬ ಪುಸ್ತಕವನ್ನು ಈ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು https://bit.ly/herostonesintrokan
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.