ನವದೆಹಲಿ: ತುಳಸಿ ಮದುವೆ (Tulsi Vivaaha 2020) ಹಿಂದೂಗಳ ಧಾರ್ಮಿಕ ಪರ್ವಗಳಲ್ಲಿ ಒಂದು ಪ್ರತಿವರ್ಷ ತುಳಸಿ ವಿವಾಹವನ್ನು ಕಾರ್ತಿಕ್ ತಿಂಗಳ ಶುಕ್ಲ ಪಕ್ಷದ ಏಕಾದಶಿ ದಿನಾಂಕದಂದು ನೆರವೇರಿಸಲಾಗುತ್ತದೆ. ಈ ವರ್ಷ, ಈ ಏಕಾದಶಿ ದಿನಾಂಕವು ನವೆಂಬರ್ 25 ರಂದು ಪ್ರಾರಂಭವಾಗಿ 26 ರಂದು ಕೊನೆಗೊಳ್ಳುತ್ತದೆ. ತುಳಸಿ ಮದುವೆಯಲ್ಲಿ ದೇವಿ ತುಳಸಿಯ ಮದುವೆ  ಕೃಷ್ಣ / ಶಾಲಿಗ್ರಾಮ್ ದ ಜೊತೆಗೆ ಜೊತೆಗೆ ನೆರವೇರಿಸಲಾಗುತ್ತದೆ ತುಳಸಿ ವಿವಾಹದ ಆಚರಣೆಯನ್ನು ಮಾಡುವ ವ್ಯಕ್ತಿಯು ಕನ್ಯಾದಾನಕ್ಕೆ ಸಮನಾದ ಪುಣ್ಯ ಪ್ರಾಪ್ತಿ ಮಾಡುತ್ತಾನೆ ಎಂಬುದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ತುಳಸಿಯ ಈ ಗುಣಗಳ ಬಗ್ಗೆ ಕೆಲವೇ ಮಂದಿಗಷ್ಟೇ ಗೊತ್ತು, ನಿಮ್ಮ ಆರ್ಥಿಕ ಸ್ಥಿತಿಗೂ ಇದಕ್ಕೂ ಇದೇ ಲಿಂಕ್


ತುಳಸಿ ಮದುವೆಯನ್ನು ಭಾರತದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತದೆ, ಶಾಲಿಗ್ರಾಮ್ ಅನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ. ಪೌರಾಣಿಕ ಕಥೆಯ ಪ್ರಕಾರ, ಒಮ್ಮೆ ತುಳಸಿ ಕೋಪದಿಂದ ವಿಷ್ಣುವನ್ನು ತನ್ನ ಶಾಪದಿಂದ ಕಲ್ಲನ್ನಾಗಿಸುತ್ತಾಳೆ. ತುಳಸಿಯ ಈ ಶಾಪದಿಂದ ಮುಕ್ತಿ ಪಡೆಯಲು, ವಿಷ್ಣು ಶಾಲಿಗ್ರಾಮ ರೂಪದಲ್ಲಿ ಅವತರಿಸಿ ತುಳಸಿಯನ್ನು ಮದುವೆಯಾಗುತ್ತಾನೆ. ತುಳಸಿ ದೇವಿಯನ್ನು ದೇವಿ ಲಕ್ಷ್ಮಿಯ ಅವತಾರವೆಂದು ಪರಿಗಣಿಸಲಾಗಿದೆ. ತುಳಸಿ ವಿವಾವನ್ನು ಕೆಲವು ಸ್ಥಳಗಳಲ್ಲಿ ದ್ವಾದಶಿಯಂದೂ ಕೂಡ ನೆರವೇರಿಸಲಾಗುತ್ತದೆ.  ತುಳಸಿ ವಿವಾಹದ ದಿನಾಂಕ, ಮುಹೂರ್ತ ಮತ್ತು ಧಾರ್ಮಿಕ ಮಹತ್ವ ಇಲ್ಲಿದೆ.


ಇದನ್ನು ಓದಿ- ಸ್ವಾದಿಷ್ಠ ಹಾಗೂ ರುಚಿಕರದ ಜೊತೆಗೆ ಆರೋಗ್ಯಕ್ಕೂ ಉತ್ತಮ ಈ ತುಳಸಿ ಚಟ್ನಿ, ಇಲ್ಲಿದೆ Unique Recipe


ವಿವಾಹದ ಪೂಜಾ ವಿಧಿ
ಮೊದಲು ತುಳಸಿ ಸಸ್ಯದ ನಾಲ್ಕು ಬಾಡಿಗೆ ಮಂದಪ ತಯಾರಿಸಿ. ಸಸ್ಯದ ಮೇಲೆ ಕೆಂಪುಬಣ್ಣದ ವಸ್ತ್ರ ಹೊದಿಸಿ. ಬಳಿಕ ತುಳಸಿ ಸಸ್ಯಕ್ಕೆ ಶೃಂಗಾರದ ವಸ್ತುಗಳನ್ನು ಅರ್ಪಿಸಿ. ಶ್ರೀಗಣೇಶ ಅಥವಾ ಶಾಲಿಗ್ರಾಮ್ ಗೆ ಪೂಜೆ ಸಲ್ಲಿಸಿ. ಶಾಲಿಗ್ರಾಮ್ ವಿರಾಜಮಾನನಾಗಿರುವ ಸಿಂಹಾಸನವನ್ನು ಕೈಯಲ್ಲಿ ಹಿಡಿದು ದೇವಿ ತುಳಸಿಯ 7 ಪ್ರದಕ್ಷಿಣೆ ಹಾಕಿ. ಅರ್ಚನೆಯ ಬಳಿಕ ವಿವಾಹದಲ್ಲಿ ಕೇಳಿ ಬರುವ ಮಂಗಳವಾದ್ಯ ಮೊಳಗಿಸಿ. ಇದರಿಂದ ವಿವಾಹ ಸಂಪನ್ನವಾದಂತಾಗುತ್ತದೆ.


ಇದನ್ನು ಓದಿ-'ಮೂಲಿಕೆಗಳ ರಾಣಿ' ತುಳಸಿ: ತುಳಸಿಯ ನಾನಾ ಉಪಯೋಗ


2020 ರಲ್ಲಿ ವಿವಾಹಕ್ಕೆ ಶುಭ ಮುಹೂರ್ತ
ಏಕಾದಶಿ ತಿಥಿ ಪ್ರಾರಂಭ- 25 ನವೆಂಬರ್ ಬೆಳಗ್ಗೆ 2.42ಕ್ಕೆ.
ಏಕಾದಶಿ ತಿಥಿ ಸಮಾಪ್ತಿ - 26 ನವೆಂಬರ್ ಬೆಳಗ್ಗೆ 5.10ಕ್ಕೆ
ದ್ವಾದಶಿ ತಿಥಿ ಪ್ರಾರಂಭ - 26 ನವೆಂಬರ್ ಬೆಳಗ್ಗೆ 5.10 ಕ್ಕೆ
ದ್ವಾದಶಿ ತಿಥಿ ಸಮಾಪ್ತಿ - 27 ನವೆಂಬರ್ ಬೆಳಗ್ಗೆ 7.46ಕ್ಕೆ