ನವದೆಹಲಿ: ಇದುವರೆಗೆ ನೀವು ಖಾರ, ಸಿಡಿ, ಚಟ್-ಪಟ್ ಹಾಗೂ ಇತರೆ ಸ್ವಾದಗಳನ್ನು ನೀಡುವ ಚಟ್ನಿಯನ್ನು ಸೇವಿಸಿರಬಹುದು. ಇವುಗಳಲ್ಲಿ ಕೊತಂಬರಿ ಸೊಪ್ಪಿನ ಚಟ್ನಿ, ಟೊಮ್ಯಾಟೋ ಚಟ್ನಿ, ಹಸಿ ಮೆಣಸಿನ ಚಟ್ನಿ, ಈರುಳ್ಳಿ-ಬೆಳ್ಳುಳ್ಳಿ ಚಟ್ನಿ ತುಂಬಾ ಪ್ರಚಲಿತವಾಗಿವೆ ಹಾಗೂ ನಿತ್ಯ ಊಟದ ಜೊತೆಗೆ ಈ ಚಟ್ನಿಗಳನ್ನು ಕೂಡ ಬಡಿಸಲಾಗುತ್ತದೆ. ಊಟದ ಜೊತೆಗೆ ನಾಲಿಗೆಗೆ ರುಚಿ ನೀಡುವ ಚಟ್ನಿ ಇದ್ದರೆ, ಬೋರಿಂಗ್ ಊಟವೂ ಕೂಡ ಸ್ವಾದಿಷ್ಠಕರ ಎನಿಸಲಾರಂಭಿಸುತ್ತದೆ.
ಇದನ್ನು ಓದಿ- ತುಳಸಿಯ ಈ ಗುಣಗಳ ಬಗ್ಗೆ ಕೆಲವೇ ಮಂದಿಗಷ್ಟೇ ಗೊತ್ತು, ನಿಮ್ಮ ಆರ್ಥಿಕ ಸ್ಥಿತಿಗೂ ಇದಕ್ಕೂ ಇದೇ ಲಿಂಕ್
ತುಳಸಿ ಚಟ್ನಿ
ತುಳಸಿಯ(Tulsi) ಅತ್ಯಂತ ವಿಶಿಷ್ಠ ಶೈಲಿಯ ಚಟ್ನಿಯನ್ನು ತುಳಸಿ ಗಿಡದ ಎಲೆಗಳಿಂದ ತಯಾರಿಸಲಾಗುತ್ತದೆ. ಇದು ಊಟದಲ್ಲಿ ತುಂಬಾ ಟೇಸ್ಟೀ ಆಗುವುದರ ಜೊತೆಗೆ ಆರೋಗ್ಯಪೂರ್ಣ ಕೂಡ ಹೌದು. ತುಳಸಿ ಆಂಟಿ-ಬಯೋಟಿಕ್ ಔಷಧಿಯ ಆಗರವು ಹೌದು. ನಿತ್ಯ ತುಳಸಿಯ ಸೇವನೆಯಿಂದ ನೀವು ನಿಮ್ಮ ಶರೀರದಲ್ಲಿರುವ ಹಾನಿಕಾರಕ ಅಂಶಗಳನ್ನು ಹೊರಹಾಕಬಹುದು ಹಾಗೂ ಶೀತ-ನೆಗಡಿ, ಕೆಮ್ಮು ಇತ್ಯಾದಿ ತೊಂದರೆಗಳಿಂದ ದೂರ ಉಳಿಯಬಹುದು.
ತುಳಸಿ ಚಟ್ನಿ ಹೇಗೆ ತಯಾರಿಸಬೇಕು? ಇಲ್ಲಿದೆ ರೆಸಿಪಿ
1 ಕಪ್ ತುಳಸಿ ಎಳೆಗಳು
1/4 ಕಪ್ ಪುದೀನಾ
2 ಹಸಿ ಮೆಣಸಿನಕಾಯಿ
5-6 ಬಾದಾಮ್ ಅಥವಾ ಗೋಡಂಬಿ
2-3 ಲವಂಗ್
2-3 ಬೆಳ್ಳುಳ್ಳಿ ಕುಡಿಗಳು
3/4 ಚಮಚೆ ಹುಣಸೆ ಪೇಸ್ಟ್
ರುಚಿಗೆ ತಕ್ಕಂತೆ ಉಪ್ಪು
ಇದನ್ನು ಓದಿ-'ಮೂಲಿಕೆಗಳ ರಾಣಿ' ತುಳಸಿ: ತುಳಸಿಯ ನಾನಾ ಉಪಯೋಗ
ಒಗ್ಗರಣಿಗಾಗಿ ಇವುಗಳನ್ನು ಬಳಸಿ
1 ಟೇಬಲ್ ಸ್ಪೂನ್ ಎಣ್ಣೆ
1/2 ಟೇಬಲ್ ಸ್ಪೂನ್ ಸಾಸಿವೆ.
1 ಟೇಬಲ್ ಸ್ಪೂನ್ ಉದ್ದಿನ ಬೇಳೆ.
ಚಿಟಿಕೆ ಅಸಫಾತೊಡ ಅಥವಾ ಇಂಗು.
ಇದನ್ನು ಓದಿ-ತುಳಸಿಯ ಪ್ರಯೋಜನಗಳು!
ತಯಾರಿಸುವ ವಿಧಾನ
1. ತುಳಸಿ ಹಾಗೂ ಪುದೀನಾ ಎಲೆಗಳನ್ನು ಚೆನ್ನಾಗಿ ತೊಳೆದು ಮಿಕ್ಸಿಯ ಜಾರ್ ನಲ್ಲಿ ಹಾಕಿ.
2.ಇದರ ಜೊತೆಗೆ ಹಸಿ ಮೆಣಸಿನಕಾಯಿ. ಬೆಳ್ಳುಳ್ಳಿ ಕುಡಿಗಳು, ಬಾದಾಮ್, ಲವಂಗ್, ಹುಣಸೆ ಪೇಸ್ಟ್ ಹಾಗೂ ಉಪ್ಪು ಬೆರೆಸಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ.
3. ಇದೀಗ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದರಲ್ಲಿ ಸಾಸಿವೆ, ಇಂಗು ಹಾಗೂ ಉದ್ದಿನ ಬೇಳೆಯನ್ನು ಹಾಕಿ ಕರೆದುಕೊಳ್ಳಿ. ಈಗ ನಿಮ್ಮ ಒಗ್ಗರಣಿ ರೆಡಿಯಾಗಿದೆ.
4. ಈ ಒಗ್ಗರಣಿಯನ್ನು ಪೇಸ್ಟ್ ಮಾಡಿರುವ ಚಟ್ನಿಯ ಮೇಲೆ ಹಾಕಿ. ಟೆಸ್ಟಿ ಹಾಗೂ ಆರೋಗ್ಯಪೂರ್ಣ ಚಟ್ನಿ ರೆಡಿಯಾಗುತ್ತದೆ. ಊಟ ಹಾಗೂ ಉಪಹಾರದ ಜೊತೆಗೆ ಇದನ್ನು ಬಡಿಸಿ.