ಉದಯಪುರ: ಇಂದು ಗಣೇಶ ಚತುರ್ಥಿ. ವಿಘ್ನ ವಿನಾಶಕ, ಇಷ್ಟಾರ್ಥ ಸಿದ್ಧಿ ವಿನಾಯಕ, ಕಾರ್ಯ ಸಿದ್ಧಿ ಗಣಪತಿ ಎಂಬ ಹಲವು ನಾಮಗಳಿಂದ ನಾವು ಗಣೇಶನನ್ನು ಪೂಜಿಸುವ ದಿನ. ಭಕ್ತರು ಗಣೇಶನನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾರೆ. ಎಲ್ಲೆಡೆ ಯಾವುದೇ ಸಮಾರಂಭದಲ್ಲಿ ಆದರೂ ಗಣೇಶನಿಗೆ ಪ್ರಥಮ ಪೂಜೆ. ಗಣೇಶನನ್ನು ಪೂಜಿಸಿ ಕಾರ್ಯ ಮಾಡುವುದರಿಂದ ಯಾವುದೇ ತೊಡಕುಂಟಾಗುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಗಣೇಶ ತನ್ನ ನಂಬಿದ ಭಕ್ತರ ಕೈ ಬಿಡುವುದಿಲ್ಲ ಎಂಬುದನ್ನು ನಾವು-ನೀವೆಲ್ಲಾ ಕೇಳಿದ್ದೇವೆ. ಆದರೆ ಗಣೇಶ ತನ್ನ ಭಕ್ತರಿಗೆ ಸಾಲ ನೀಡುವ ಬಗ್ಗೆ ನೀವು ಕೇಳಿದ್ದೀರಾ?  


COMMERCIAL BREAK
SCROLL TO CONTINUE READING

ಗಣೇಶನ ಅನೇಕ ಪವಾಡಗಳು ಮತ್ತು ಅವುಗಳ ಸ್ವರೂಪಗಳ ಬಗ್ಗೆ ನೀವು ಕೇಳಿರಬೇಕು, ಆದರೆ ಉದಯಪುರದಲ್ಲಿ ಗಣೇಶನ ಅಂತಹ ಒಂದು ರೂಪವನ್ನು ಪೂಜಿಸಲಾಗುತ್ತದೆ, ಅದು ಅನನ್ಯ ಮತ್ತು ವಿಶಿಷ್ಟವಾಗಿದೆ. ಉದಯಪುರದಲ್ಲಿರುವ ಬೊಹ್ರಾ ಗಣೇಶ ತನ್ನ ಭಕ್ತರಿಗೆ ಹಣವನ್ನು ಸಾಲ ನೀಡುತ್ತಾರೆ. ಉದಯಪುರ ಸ್ಥಾಪನೆಗೂ ಮೊದಲೇ ಬೋಹ್ರಾ ಗಣಪತಿ ಇಲ್ಲಿ ನೆಲೆಸಿದ್ದರು. ಮಹರಾಣಾ ಮೊಖಲ್ ಸಿಂಗ್ ಈ ದೇವಾಲಯವನ್ನು ನಿರ್ಮಿಸಿದ್ದಾರೆ.


ಭಕ್ತರ ಕಷ್ಟ ನಿವಾರಿಸಲು ಬೊಹ್ರಾ ಗಣೇಶ ತನ್ನ ಭಕ್ತರಿಗೆ ಸಾಲ ನೀಡುತ್ತಿದ್ದನು ಮತ್ತು ಭಕ್ತರು ತಮ್ಮ ಕಷ್ಟ ಕಳಿದ ಬಳಿಕ ಹಣವನ್ನು ಬೋಹ್ರಾ ಗಣೇಶನಿಗೆ ಹಿಂದಿರುಗಿಸುತ್ತಿದ್ದರು ಎಂದು ನಂಬಲಾಗಿದೆ. ಈ ಅನುಕ್ರಮವು ಹಲವು ವರ್ಷಗಳವರೆಗೆ ಮುಂದುವರೆಯಿತು. ಗಣೇಶನನ್ನು ಇಲ್ಲಿ ಬೋಹ್ರ ಗಣೇಶ ಎಂದು ಪೂಜಿಸಲು ಇದೇ ಕಾರಣ. ಆದರೆ ಕಾಲಾನಂತರದಲ್ಲಿ ಭಕ್ತನು ದೇವರಿಂದ ಎರವಲು ಪಡೆದ ಮೊತ್ತವನ್ನು ಹಿಂದಿರುಗಿಸಲಿಲ್ಲ. ಇದರ ನಂತರ, ದೇವರು ತನ್ನ ಭಕ್ತರಿಗೆ ಸಾಲ ನೀಡುವುದನ್ನು ನಿಲ್ಲಿಸಿದನು ಎಂದು ಕೆಲವರು ಹೇಳುತ್ತಾರೆ. ಆದರೆ ಇಂದಿಗೂ ಈ ಬೋಹ್ರಾ ಗಣೇಶ ಇಲ್ಲಿ ಬಂದು ಪೂಜಿಸುವ ಭಕ್ತರ ಆಸೆ-ಆಕಾಂಕ್ಷೆಗಳನ್ನು, ಪ್ರಾರ್ಥನೆಯನ್ನು ನೆರವೇರಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ.


ಬೋಹ್ರಾ ಗಣೇಶ ತನ್ನ ಭಕ್ತನ ತಪ್ಪಿನ ನಂತರ ಭಕ್ತರಿಗೆ ಸಾಲ ನೀಡುವುದನ್ನು ನಿಲ್ಲಿಸಿದ್ದರೂ, ಬೋಹ್ರಾ ಗಣೇಶ ದೇವಸ್ಥಾನದ ಬಗ್ಗೆ ಭಕ್ತರ ಗೌರವವು ಇಂದಿಗೂ ಹಾಗೆಯೇ ಇದೆ. ಭಕ್ತರು ತಮ್ಮ ಶುಭ ಕಾರ್ಯಗಳಲ್ಲಿ ಬೊಹ್ರಾ ಗಣೇಶನಿಗೆ ಮೊದಲ ಆಹ್ವಾನವನ್ನು ನೀಡುತ್ತಾರೆ. ಬೋಹ್ರಾ ಗಣೇಶನ ಬಳಿ ಹೇಳಿಕೊಂಡ ಕಷ್ಟಗಳು ನಿವಾರಣೆಯಾಗಿವೆ. ಭಕ್ತರು ಭಕ್ತಿಯಿಂದ ಪೂಜಿಸಿ ಬೋಹ್ರಾ ಗಣಪನ ಬಳಿ ಕೇಳಿರುವ ಇಷ್ಟಾರ್ಥಗಳು ಸಿದ್ಧಿಯಾಗಿವೆ. ಭಕ್ತರು ನಿರ್ಮಲ ಭಕ್ತಿಯಿಂದ ಏನೇ ಬೇಡಿದರು ಖಂಡಿತವಾಗಿಯೂ ಗಣಪ ನೀಡೆ ನೀಡುತ್ತಾನೆ ಎಂಬುದು ಭಕ್ತರ ನಂಬಿಕೆ.. ಈ ಕಾರಣದಿಂದಾಗಿ ಈಗಲೂ ಕೂಡ ಉದಯಪುರದಲ್ಲಿರುವ ಬೋಹ್ರಾ ಗಣೇಶನ ದೇವಾಲಯಕ್ಕೆ ಹಲವಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ ಎಂದು ಕೆಲವರು ನಂಬಿದ್ದಾರೆ.