ಯುಗಾದಿ ಎನ್ನುವುದು ಭಾರತದ ಬಹುತೇಕ ಭಾಗಗಳಲ್ಲಿ ಚೈತ್ರ ಮಾಸದ ಮೊದಲ ದಿನದ ಎಂದು ಆಚರಿಸಿಕೊಳ್ಳಲಾಗುತ್ತದೆ. ಪ್ರಮುಖವಾಗಿ ಈ ಹಬ್ಬವನ್ನು  ಕರ್ನಾಟಕ, ಆಂದ್ರಪ್ರದೇಶ,ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಹೊಸ ವರ್ಷದ ಹಬ್ಬ ಎಂದು ಆಚರಿಸುತ್ತಾರೆ.ಸಾಮಾನ್ಯವಾಗಿ ಈ ಹಬ್ಬವು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹೆಚ್ಚಾಗಿ ಬರುತ್ತದೆ.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ "ಬೇವು-ಬೆಲ್ಲ."ವನ್ನು ಜೀವನದ ಸಿಹಿ ಕಹಿಗಳನ್ನು ಅನುಭವಿಸಬೇಕು ಎನ್ನುವ ಕಾರಣಕ್ಕಾಗಿ ಇವರೆಡರ ಮಿಶ್ರಣವನ್ನು ಸೇವಿಸುತ್ತಾರೆ. ಈ ಯುಗಾದಿ ಹಬ್ಬವನ್ನು ಮಹಾರಾಷ್ಟ್ರದಲ್ಲಿ ಗುಡಿಪಾಡ್ವ ಎಂದು ಕರೆಯುತ್ತಾರೆ.


ಸಾಮಾನ್ಯವಾಗಿ ಯುಗಾದಿಯಲ್ಲಿ ಒಬ್ಬಟ್ಟು ಅಥವಾ ಹೋಳಿಗೆಯನ್ನು ಮಾಡುತ್ತಾರೆ.ಇದನ್ನು ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆಯುವರು. ಅಲ್ಲದೆ ಕನ್ನಡ  ಸಾಹಿತ್ಯದಲ್ಲಿಯೂ ಯುಗಾದಿಯ ನಂಟು ಕೂಡಾ ಅಷ್ಟೇ ಸೊಗಸಾಗಿ ಈ ಹಬ್ಬವನ್ನು ವರ್ಣಿಸಿದ್ದಾರೆ, ವರಕವಿ ದ.ರಾ. ಬೇಂದ್ರೆಯವರು ಈ ಹಬ್ಬದ ಕುರಿತಾಗಿ ಬರೆದ ಕವಿತೆಯಂತೂ ಪ್ರತಿ ಯುಗಾದಿಯನ್ನು ಸ್ಮರಿಸುವಂತಿದೆ.


"ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ"