Dosha Nivarane: ಎಲ್ಲಾ ಹಬ್ಬಗಳಿಗಿಂತಲೂ ನವರಾತ್ರಿ ತುಂಬಾ ವಿಶೇಷ. ನವರಾತ್ರಿಯಲ್ಲಿ ತಾಯಿ ದುರ್ಗಾ ಮಾತೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿ ದುರ್ಗಾ ಮಾತೆ ಪೂಜೆಗೆ ಮಾತ್ರವಲ್ಲ, ದೋಷಗಳ ನಿವಾರಣೆಗೆ, ಜೀವನದಲ್ಲಿ ಪ್ರಗತಿಯನ್ನು ಕಾಣಲೂ ಸಹ ತುಂಬಾ ಪ್ರಾಶಸ್ತ್ಯವಾದ ಸಮಯ ಎಂದು ನಂಬಲಾಗಿದೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿನ  ಶನಿ ದೋಷ, ಕಾಲ ಸರ್ಪ ದೋಷ, ರಾಹು-ಕೇತು ದೋಷದಂತಹ ಇನ್ನೂ ಹಲವು ಗ್ರಹ ದೋಷಗಳಿಂದ ಪರಿಹಾರ ಪಡೆಯಲು ನವರಾತ್ರಿ ಅತ್ಯುತ್ತಮ ಸಮಯ. ನವರಾತ್ರಿಯಲ್ಲಿ, ಕಪ್ಪು ಎಳ್ಳಿನ ಪರಿಹಾರ ಕೈಗೊಳ್ಳುವುದರಿಂದ  ಗ್ರಹ ದೋಷ ನಿವಾರಣೆಯ ಜೊತೆಗೆ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಪ್ರಗತಿಯ ಹೊಸ ಹಾದಿ ತೆರೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. 


ಕಪ್ಪು ಎಳ್ಳಿನ ಪರಿಹಾರದಿಂದ ಗ್ರಹ ದೋಷ ನಿವಾರಣೆ, ಜೀವನದಲ್ಲಿ ಪ್ರಗತಿ ಸಾಧ್ಯ : 
ಗ್ರಹಗಳ ದೋಷ ನಿವಾರಣೆ: 

ನಿಮ್ಮ ಜಾತಕದಲ್ಲಿ ಕಾಲಸರ್ಪದೋಷ, ರಾಹು, ಕೇತು ಮತ್ತು ಶನಿ ದೋಷಗಳ ಪ್ರಭಾವವನ್ನು ಕಡಿಮೆ ಮಾಡಲು ಸೋಮವಾರ ಮತ್ತು ಶನಿವಾರದಂದು ನವರಾತ್ರಿಯ ಸಮಯದಲ್ಲಿ, ಕಪ್ಪು ಎಳ್ಳನ್ನು ನೀರಿನಲ್ಲಿ ಬೆರೆಸಿ ಶಿವಲಿಂಗಕ್ಕೆ ಅರ್ಪಿಸಿ. 


ಇದನ್ನೂ ಓದಿ- Venus Transit 2023: ದೀಪಾವಳಿಗೂ ಮೊದಲೇ ಬೆಳಗಲಿದೆ ಈ 3 ರಾಶಿಯವರ ಭಾಗ್ಯ ಜ್ಯೋತಿ, ಸುರಿಯಲಿದೆ ಹಣದ ಮಳೆ


ಶನಿಯ ಸಾಡೇಸಾತಿ ಮತ್ತು ಧೈಯ ಪ್ರಭಾವದಿಂದ ಮುಕ್ತಿ: 
ನವರಾತ್ರಿಯಲ್ಲಿ ಬರುವ ಶನಿವಾರದ ದಿನ ಕಪ್ಪು ಎಳ್ಳನ್ನು ಬೆರೆಸಿ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸಿ. ಈ ರೀತಿ ಮಾಡುವುದರಿಂದ ಶನಿಯ ಸಾಡೇಸಾತಿ ಮತ್ತು ಧೈಯ ಪ್ರಭಾವದಿಂದ ಮುಕ್ತಿ ದೊರೆಯುತ್ತದೆ. 


ಅರಳಿ ಮರದ ಮುಂದೆ ದೀಪ:
ನವರಾತ್ರಿಯ ಒಂಬತ್ತು ದಿನಗಳ ಕಾಲ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಈ ಪರಿಹಾರ ಕೈಗೊಳ್ಳುವುದರಿಂದ ಮದುವೆ ವಿಚಾರದಲ್ಲಿ ಎದುರಾಗಿರುವ ತೊಂದರೆಗಳು ನಿವಾರಣೆಯಾಗುತ್ತದೆ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ ಕಂಡು ಬರುತ್ತದೆ. 


ಇದನ್ನೂ ಓದಿ- ಶನಿ - ಬುಧ ಸಂಚಾರದಿಂದ ಈ ರಾಶಿಯವರ ಬದುಕೇ ಬದಲು.. ಹಣ ಚಿನ್ನ ಸಂಪತ್ತಿನ ಮಳೆ, ಲಕ್‌ ಅಂದ್ರೆ ಇದಪ್ಪ!


ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ: 
ನವಾರಾತ್ರಿಯ ಶನಿವಾರದಂದು ಕಪ್ಪೆಳ್ಳು, ಕಪ್ಪೆಳ್ಳಿನ ಉಂಡೆ ಕಪ್ಪು ಬಟ್ಟೆಯಲ್ಲಿ ಕಟ್ಟಿ ಯಾರಾದರೂ ಬಡವರಿಗೆ ದಾನ ಮಾಡಿ. ನವರಾತ್ರಿ ಶನಿವಾರದಂದು ಆರಂಭಿಸಿ, ಸತತ 11 ಶನಿವಾರಗಳ ಕಾಲ ಈ ಕೆಲಸ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯುತ್ತದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.