Dhanteras 2023 : ಧನತೇರಸ್ ದಿನದಂದು ಭಗವಾನ್ ಕುಬೇರನನ್ನು ಪೂಜಿಸುವುದು ಮತ್ತು ಹೊಸ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಒಬ್ಬ ವ್ಯಕ್ತಿಯು ಈ ಕೆಳಗೆ ನೀಡಿರುವ ವಸ್ತುಗಳನ್ನು ನೋಡಿದರೆ ದೀಪಾವಳಿಗೂ ಮೊದಲು ಅವರ ಮನೆಗೆ ತಾಯಿ ಲಕ್ಷ್ಮಿ ದೇವಿ ಆಗಮಿಸಿ ನೆಲೆಸುತ್ತಾಳೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಧನ್‌ತೇರಸ್‌ ದಿನವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯ ದಿನವಾಗಿ ಪರಿಗಣಿಸಲಾಗಿದೆ. ಈ ದಿನದಂದು, ಜನರು ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ಪಡೆಯಲು ಅನೇಕ ಹೊಸ ವಸ್ತುಗಳನ್ನು ಖರೀದಿಸುತ್ತಾರೆ, ಇದರಿಂದ ಮನೆಯಲ್ಲಿ ಸಮೃದ್ಧಿ ಮತ್ತು ಲಕ್ಷ್ಮಿ ದೇವಿ ಜೊತೆಗೆ ಭಗವಂತ ಕುಬೇರನ ಕೃಪೆ ಇರುತ್ತದೆ ನಂಬಲಾಗುತ್ತದೆ.


ಇದನ್ನೂ ಓದಿ:ಡಾರ್ಕ್ ಸರ್ಕಲ್ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಪರಿಹಾರ ನೀಡುತ್ತೇ ಈ ಒಂದು ಸಸ್ಯ


ಕಾರ್ತಿಕ ಮಾಸದ ಕೃಷ್ಣ ಪಕ್ಷದ ಮೂರನೇ ದಿನದಂದು ಆಚರಿಸಲಾಗುವ ಧನ್‌ತೇರಸ್‌ ಅನ್ನು ಈ ವರ್ಷ ನವೆಂಬರ್ 10 ರಂದು ಅಂದರೆ ಇಂದು ಆಚರಿಸಲಾಗುತ್ತಿದೆ. ಜ್ಯೋತಿಷ್ಯದಲ್ಲಿ, ಈ ದಿನದಂದು ಹೊಸ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿ ಈ ದಿನದಂದು ಕೆಲವು ವಸ್ತುಗಳನ್ನು ನೋಡಿದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬನ್ನಿ ಆ ವಸ್ತುಗಳ ಯಾವುವು ಅಂತ ತಿಳಿಯೋಣ..


ಹಲ್ಲಿ ದರ್ಶನ : ಶಾಸ್ತ್ರಗಳ ಪ್ರಕಾರ, ಈ ದಿನದಂದು ಆಕಸ್ಮಿಕವಾಗಿ ಹಲ್ಲಿಯನ್ನು ನೋಡಿದ್ರೆ ಮಂಗಳಕರ ಎಂದು ಭಾವಿಸಲಾಗುತ್ತದೆ. ಹಲ್ಲಿ ತಾಯಿ ಲಕ್ಷ್ಮಿಯ ಸಂಕೇತವಾಗಿದೆ. ಹಾಗಾಗಿ ಧನ್‌ತೇರೆಸ್‌ ದಿನದಂದು ಇದನ್ನು ನೋಡಿದಾಗ ಲಕ್ಷ್ಮಿ ದೇವಿಯು ಮನೆಗೆ ಬಂದಂತೆ.


ಇದನ್ನೂ ಓದಿ:ಕೂದಲುದುರುವುದನ್ನು ತಡೆಗಟ್ಟಿ, ದುಪ್ಪಟ್ಟು ವೇಗದಲ್ಲಿ ಬೆಳೆಯುವಂತೆ ಮಾಡಲು ಪಾಲಕ್ ಅನ್ನು ಈ ರೀತಿಯಾಗಿ ಬಳಸಿ!


ಗೂಬೆಗಳ ದರ್ಶನಗಳು : ಧನ್‌ತೇರಸ್‌ ದಿನದಂದು ಗೂಬೆ ಕಾಣಿಸಿಕೊಂಡರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗೂಬೆಯು ಲಕ್ಷ್ಮಿ ದೇವಿಯ ವಾಹನ. ಗೂಬೆಯನ್ನು ನೋಡುವುದು ಲಕ್ಷ್ಮಿ ದೇವಿಯ ಆಗಮನದ ಸಂದೇಶವನ್ನು ನೀಡುತ್ತದೆ.


ಬಿಳಿ ಬೆಕ್ಕಿನ ದರ್ಶನಗಳು : ಧನ್‌ತೇರೆಸ್‌ ದಿನದಂದು ಬಿಳಿ ಬೆಕ್ಕು ಕಾಣಿಸಿಕೊಂಡರೆ, ವ್ಯಕ್ತಿಯ ಎಲ್ಲಾ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ ಎಂದರ್ಥ.


ಇದನ್ನೂ ಓದಿ: ಸೀತಾಫಲ ಹಣ್ಣಿನಷ್ಟೇ ಆರೋಗ್ಯಕರ ಅದರ ಎಲೆಗಳು, ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ!


ರಸ್ತೆಯ ಮೇಲೆ ಬಿದ್ದಿರುವ ನಾಣ್ಯ : ರಸ್ತೆಯ ಮೇಲೆ ಬಿದ್ದಿರುವ ನಾಣ್ಯಗಳನ್ನು ನೋಡಿದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ನಾಣ್ಯಗಳು ಲಕ್ಷ್ಮಿ ದೇವಿಯನ್ನು ಸಂಕೇತಿಸುತ್ತವೆ. ಒಬ್ಬ ವ್ಯಕ್ತಿಯು ಮುಂದಿನ ದಿನಗಳಲ್ಲಿ ಸಂಪತ್ತನ್ನು ಪಡೆಯಬಹುದು ಎಂಬುವುದು ಇದರ ಅರ್ಥ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.